Breaking News

ಗುಜರಾತ್ :ಅಂಚೆ ಮೂಲಕ ಮದ್ಯ ಮಾರಾಟ!; ಪೋಸ್ಟ್​ ಮಾಸ್ಟರ್​ನ ಬಂಧನ!!!

ಡಿಯುನಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಉನಾಪಟ್ಟದ ಪೊಲೀಸರು, ದೆಲ್ವಾಡದಿಂದ ದ್ವಿಚಕ್ರ ವಾಹನದಲ್ಲಿ ಅಂಚೆ ಕಚೇರಿಯ ಬೃಹತ್​ ಚೀಲಗಳನ್ನು ಹೊತ್ತುಕೊಂಡು ಬರುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ವಾಹನ ಚಾಲಕ ಶಂಕಿತ ನಯನ್​ ಜೆತ್ವಾ ಎಂದು ಗುರುತಿಸಲಾಗಿದ್ದು, ಇತನ ಬಳಿ ಇದ್ದ ವಿವಿಧ ಬ್ರಾಂಡ್​ನ 19 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.ವಿಚಾರಣೆಯ ಸಮಯದಲ್ಲಿ ಆರೋಪಿ ನಯನ್​ ಜೆತ್ವಾ, ಈ ಒಟ್ಟಾರೆ ಪ್ರಕರಣದಲ್ಲಿ ತನ್ನ ಸ್ನೇಹಿತ, ಪೋಸ್ಟ್​ ಮಾಸ್ಟರ್​ ಮಯೂರ್​ ಗೋಹಿಲ್​ ಕೈವಾಡ ಇದೆ ಎಂದು ಅಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ ಪೊಲೀಸರು ತಿಳಿಸಿದ್ದಾರೆ.ಪೊಲೀಸರ ಗಮನವನ್ನು ತಪ್ಪಿಸಲು ಗೋಹಿಲ್ ಬಾಟಲಿಗಳನ್ನು ಹೊಂದಿರುವ ಚೀಲದ ಮೇಲೆ ಅಂಚೆ ಚೀಟಿಗಳನ್ನು ಅಂಟಿಸಿ ಅಧಿಕೃತ ಇಂಡಿಯಾ ಪೋಸ್ಟ್ ವಾಹನಗಳಿಗೆ ಲೋಡ್ ಮಾಡುವ ಮೂಲಕ ಕಾರ್ಯಾಚರಣೆ ಪೂರ್ಣಗೊಳಸಿಸುತ್ತಿದ್ದೇವು ಎಂದು ಆರೋಪಿ ಹೇಳಿದ್ದಾನೆ. ಇನ್ನು ಪ್ರಕರಣದಲ್ಲಿ ಪೋಸ್ಟ್​ ಮಾಸ್ಟರ್​ ಅನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಠಾಣೆಯ ಇನ್​ಸ್ಪೆಕ್ಟರ್​ ರಾಣಾ ತಿಳಿಸಿದ್ದಾರೆ

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *