ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಈ ಪೈಕಿ ಬಹುತೇಕ ಧಾರ್ಮಿಕ ಸ್ಥಳಗಳಿಗೆ ಇರುವ ಪ್ರವಾಸ ಪ್ಯಾಕೇಜ್ ಆಗಿದ್ದರೆ, ಇನ್ನೂ ಹಲವಾರು ವಿದೇಶ ಪ್ರವಾಸ ಪ್ಯಾಕೇಜ್‌ಗಳನ್ನು ಕೂಡಾ ಐಆರ್‌ಸಿಟಿಸಿ ಪರಿಚಯಿಸಿದೆ. ವಿದೇಶ ಪ್ರವಾಸ ಎಂದಾಗ ನೀವು ತಲೆ ಬಿಸಿಯಾಗಬೇಕಾಗಿಲ್ಲ. ಯಾಕೆಂದರೆ ಈ ಪ್ರವಾಸ ಪ್ಯಾಕೇಜ್‌ನಲ್ಲಿ ನೀವು ಕಡಿಮೆ ಹಣದಲ್ಲಿಯೇ ಪ್ರವಾಸ ಮಾಡಲು ಸಾಧ್ಯವಾಗುತ್ತದೆ. ಅಂದರೆ 50 ರಿಂದ 60 ಸಾವಿರ ರೂಪಾಯಿ ಇದ್ದರೆ, ಈ ಪ್ಯಾಕೇಜ್ ಖರೀದಿ ಮಾಡಿ ವಿದೇಶ ಪ್ರವಾಸ ಮಾಡಬಹುದು
bigtvnews | Hubli Dharwad News | Kannada News | Karnataka News Hubli News | News In Hubli | Local news





