Breaking News

ಜನರಗೆ ಕೋಟ್ಯಾಂತರ ರೂ. ಫಂಗನಾಮ್ ಹಾಕಿ ಎಸ್ಕೇಪ್ ಆದ ದಂಪತಿ

ಧಾರವಾಡ:ಧಾರವಾಡದಲ್ಲಿ ಕಂಪ್ಯೂಟರ್‌ ಅಂಗಡಿ ಇಟ್ಟುಕೊಂಡಿದ್ದ ಅಮೋಲ್ ಜನರ ವಿಶ್ವಾಸ ಗಳಿಸಿದ್ದು, ಅವರ ಬಳಿ ಕೋಟ್ಯಾಂತರ ರೂಪಾಯಿ ಪಡೆದುಕೊಂಡು ದಂಪತಿ ಧಾರವಾಡವನ್ನೇ ಬಿಟ್ಟು ಹೋಗಿರುವ ಘಟನೆ ನಡೆದಿದೆ.

ಮೂಲತಃ ಬೀದ‌ರ್ ಜಿಲ್ಲೆಯ ಔರಾದ್ ತಾಲೂಕಿನವರು ಎಂದು ಹೇಳಿಕೊಂಡು ಬಂದಿದ್ದ ಅಮೋಲ್ ಮೊಕಾಶಿ ಹಾಗೂ ಆತನ ಪತ್ನಿ ಅಪರ್ಣಾ ಮೊಕಾಶಿ, ಕಳೆದ 15 ವರ್ಷಗಳಿಂದ ಧಾರವಾಡದಲ್ಲೇ ವಾಸವಾಗಿದ್ದರು.

ಅದೇ ವಿಶ್ವಾಸದ ಮೇಲೆ ಧಾರವಾಡದ ಅನೇಕರ ಬಳಿ ಕಂಪ್ಯೂಟರ್ ತರಬೇಕು, ಸಿಸಿ ಕ್ಯಾಮೆರಾ ತರಬೇಕು ಎಂದು 5-10 ಲಕ್ಷ ನೆಫ್ಟ್ ಮೂಲಕ ಪಡೆದಿದ್ದ. ಹೀಗೆ ಅನೇಕರ ಬಳಿ ಹಣ ಪಡೆದು ಕೋಟ್ಯಾಂತರ ರೂಪಾಯಿ ಮಾಡಿಕೊಂಡು ಇದೀಗ ಧಾರವಾಡ ಬಿಟ್ಟು ಪತ್ನಿ ಸಮೇತ ಎಸ್ಕೆಪ್ ಆಗಿದ್ದಾನೆ.ಈ ರೀತಿ ಮೋಸಕ್ಕೊಳಗಾದ ವ್ಯಕ್ತಿಯೊಬ್ಬರು ಧಾರವಾಡದ ಶಹರ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರು. ಇದು ಕೋಟ್ಯಾಂತರ ರೂಪಾಯಿ ಮೋಸದ ವ್ಯವಹಾರವಾಗಿರುವುದರಿಂದ ಸದ್ಯ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ಇದೀಗ ಈ ಪ್ರಕರಣದ ಬೆನ್ನು ಬಿದ್ದಿದ್ದಾರೆ.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *