Breaking News

ಮಂಡ್ಯ ರಮೇಶ್ ಅವರು ತೀವ್ರಗಾಯದಿಂದ ಬಳಲುತ್ತಿದ್ದಾರೆ….

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರು ಧಾರಾವಾಹಿ ಚಿತ್ರೀಕರಣದ ವೇಳೆ ಕಾಲು ಜಾರಿ ಬಿದ್ದಿದ್ದು, ತೀವ್ರಗಾಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಧಾರಾವಾಹಿ ಶೂಟಿಂಗ್ ವೇಳೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣಲಿರುವ ಹೊಸ ಧಾರಾವಾಹಿ ‘ಆಸೆ’ ಶೂಟಿಂಗ್ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಮೇಶ್ ಕಾಲು ಜಾರಿ ಬಿದ್ದಿದ್ದಾರೆ. ಘಟನೆಯಲ್ಲಿ ನಟ ಮಂಡ್ಯ ರಮೇಶ್​ಅವರ ಕಾಲು ಮತ್ತು ಮುಂಗೈ ಮುರಿತವಾಗಿದೆ ಎಂದು ವರದಿಯಾಗಿದೆ.ನಟ ಮಂಡ್ಯ ರಮೇಶ್ ಅವರು ನಟ ರಮೇಶ್ ಅರವಿಂದ್ ನಿರ್ಮಾಣ ಮಾಡುತ್ತಿರುವ ‘ಆಸೆ’ ಸೀರಿಯಲ್‌ನಲ್ಲಿ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಶೂಟಿಂಗ್ ಬೆಂಗಳೂರಿನ ರಾಜರಾಜೇಶ್ವರಿ ನಗರದ ಹೊರಭಾಗದಲ್ಲಿರುವ ಕಲ್ಲು ಕ್ವಾರಿಯ ಬಳಿ ನಡೆಯುತ್ತಿತ್ತು, ಈ ವೇಳೆ ದುರ್ಘಟನೆ ನಡೆದಿದೆ.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *