ರಾಯಚೂರು: ಜಿಲ್ಲೆಯಲ್ಲಿ ₹ 68.30 ಕೋಟಿ ಬಂಡವಾಳ ಹೂಡಿಕೆಯ ಹೊಸ ಯೋಜನೆಗಳಿಗೆ ಜಿಲ್ಲಾ ಮಟ್ಟದ ಏಕಗವಾಂಕ್ಷಿ ಸಮಿತಿ ಅನುಮೋದನೆ ನೀಡಿದೆ.
ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಿತೀಶ್ ಕೆ. ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ₹1 ಕೋಟಿ ವೆಚ್ಚಲದಲ್ಲಿ ಜಾನುವಾರು ಮೇವು ಹಾಗೂ ಆಯಿಲ್ ಮಿಲ್ಲಿಂಗ್ ಚಟುವಟಿಕೆ, ₹55 ಲಕ್ಷ ವೆಚ್ಚದಲ್ಲಿ ಉಗ್ರಾಣ, ಇಟ್ಟಿಗೆ ತಯಾರಿಕೆ ಚಟುವಟಿಕೆ, ₹540 ಲಕ್ಷ ವೆಚ್ಚದಲ್ಲಿ ಕಾಟನ್ ಜಿನ್ನಿಂಗ್ ಹಾಗೂ ಬೀಜ ಸಂಸ್ಕರಣೆ ಚಟುವಟಿಕೆ, ₹1,446 ಲಕ್ಷ ವೆಚ್ಚದಲ್ಲಿ ರೈಸ್ ಮಿಲ್ಲಿಂಗ್ ಚಟುವಟಿಕೆ, ₹1,481 ಲಕ್ಷ ವೆಚ್ಚದಲ್ಲಿ ತೈಲ ಶುದ್ಧೀಕರಣ ಚಟುವಟಿಕೆ, ₹3.3 ಕೋಟಿ ವೆಚ್ಚದಲ್ಲಿ ತ್ಯಾಜ್ಯ ತೈಲ ಸಂಸ್ಕೃಣೆ, ₹4 ಕೋಟಿ ವೆಚ್ಚದಲ್ಲಿ ನೆಲಗಡಲೆ ಸಂಸ್ಕರಣೆ ಚಟುವಟಿಕೆ, ₹145 ಕೋಟಿ ವೆಚ್ಚದಲ್ಲಿ ರೈಸ್ ಮಿಲ್ಲಿಂಗ್ ಚಟುವಟಿಕೆ ಸೇರಿದಂತೆ ಹೊಸ ಯೋಜನೆಯ ಮಂಜೂರಾತಿ ಪಡೆಯುವ ವಿಷಯ ಪ್ರಸ್ತಾಪಿಸಿದರು.
ಜಿಲ್ಲೆಯಲ್ಲಿ ಹೊಸ ಕೈಗಾರಿಕೆ ಪ್ರದೇಶಕ್ಕಾಗಿ ಗುರುತಿಸಿರುವ ಜಮೀನು ಸ್ವಾಧೀನಕ್ಕಾಗಿ ಶಿಫಾರಸು, ಕೆಐಎಡಿಬಿಯಿಂದ ನಿರ್ಮಿಸಲಾದ ವಸತಿ ಗೃಹ ಮತ್ತು ನಿವೇಶನಗಳ ಹಂಚಿಕೆ, ದೇವದುರ್ಗ ವಿಶ್ವ ಮಳಿಗೆಗಳ ಹಂಚಿಕೆ, ರಾಯಚೂರು ಕೈಗಾರಿಕೆ ಪ್ರದೇಶ ಮತ್ತು ಗ್ರೋಥ್ ಸೆಂಟರ್ನಲ್ಲಿರುವ ಘಟಕಗಳಿಗೆ ನೀರು ಸರಬರಾಜು, ಕೆಎಸ್‌ಎಸ್‌ಐಡಿಸಿ ನಿವೇಶನಗಳ ಹಂಚಿಕೆ, ಮೆಗಾ ಪಾರ್ಕ್ ಸ್ಥಾಪನೆ, ರೈಸ್ ಕ್ಲಸ್ಟರ್ ಸ್ಥಾಪನೆಗೆ ₹10 ಎಕರೆ ಜಮೀನು ಒದಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಮಾನ್ವಿಯ ಮೆ.ವಿಕಾಸ್ ಇಂಡ್‌ಸ್ಟ್ರೀಸ್‌ಗೆ ರೆಡಿಪ್ಲಾಸ್ಟ್ ತಯಾರಿಕೆಯ ಸಲುವಾಗಿ ಸರ್ಕಾರದ ನಿಯಮಗಳ ಪ್ರಕಾರ ಮರಳು ಹಂಚಿಕೆಯ ಕುರಿತು, ಯೋಜನಾ ಮಂಜೂರಾತಿ ಮತ್ತು ಚಟುವಟಿಕೆಯ ಬದಲಾವಣೆ, ಯರಮರಸ್ ಕೈಗಾರಿಕೆ ಪ್ರದೆಶದಲ್ಲಿ ಖಾಲಿ ನಿವೇಶನಗಳ ಹಂಚಿಕೆ ಕುರಿತು ಸಭೆ ಚರ್ಚೆ ನಡೆಯಿತು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ, ರಾಯಚೂರು ಜಿಲ್ಲಾ ಕಾಟನ್ ಜಿನ್ನರ್ಸ್ ಅಸೋಸಿಯೇಶನ್ ಅಧ್ಯಕ್ಷ, ರೈಸ್ ಮಿಲರ್ಸ್ ಜಿನ್ನರ್ಸ್ ಅಸೋಶಿಯೇಶನ್ ಅಧ್ಯಕ್ಷ, ಕೆಐಎಡಿಬಿಯ ಬಳ್ಳಾರಿ ಮತ್ತು ರಾಯಚೂರು ಕಾರ್ಯನಿರ್ವಾಹಕ ಎಂಜಿನಿಯರ್, ಕೆಎಸ್‌ಎಸ್‌ಐಡಿಸಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ, ರಾಯಚೂರು ಜಿಲ್ಲಾ ಕೆಎಸ್‌ಪಿಸಿಬಿಯ ಪರಿಸರ ಎಂಜಿನಿಯರ್, ರಾಯಚೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ, ಕೆಎಸ್‌ಎಫ್‌ಸಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ, ಕಾರ್ಖಾನೆಯ ಸಹಾಯಕ ನಿರ್ದೇಶಕ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಅಧಿಕಾರಿ, ಕೆಯುಡಬ್ಲ್ಯೂ ಎಸ್‌ಎಸ್‌ಬಿಯ ಕಾರ್ಯನಿರ್ವಾಹಕ ಎಂಜಿನಿಯರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

