Breaking News

ವ್ಯಕ್ತಿ ಮೇಲೆ ಕರಡಿ ದಾಳಿ : ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಕಿಮ್ಸ್

ಹುಬ್ಬಳ್ಳಿ ; ಕರಡಿಗಳ ದಾಳಿಯಿಂದ ಮುಖ ಹಾಗೂ ಕಣ್ಣಿನ ಕೆಳ ಭಾಗದಲ್ಲಿ ತೀವ್ರ ಗಾಯಗೊಂಡಿದ್ದ 40 ವರ್ಷದ ವ್ಯಕ್ತಿಗೆ ಕಿಮ್ಸ್ ಆಸ್ಪತ್ರೆಯ ಕಣ್ಣು ಹಾಗೂ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆಯ ವಿಭಾಗಗಳು ಜಂಟಿಯಾಗಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗಾಯಗೊಂಡ ವ್ಯಕ್ತಿಗೆ ಪುನಃ ಗುಣಮುಖರಾಗುವಂತೆ ಮಾಡಿದ್ದಾರೆ. ಇದು ಕಿಮ್ಸ್ ಆಸ್ಪತ್ರೆಯ ಮತ್ತೊಂದು ಸಾಧನೆಯಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಟಾನಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಡಗೋಡ ಅರಣ್ಯ ಪ್ರದೇಶದಲ್ಲಿ ಫಕ್ಕಿರಪ್ಪ (40) ಜುಲೈ 30 ರಂದು ಹೊಲಕ್ಕೆ ಹೋಗುವ ಸಂದರ್ಭದಲ್ಲಿ ಕರಡಿ ಏಕಾಏಕಿ ಮೈಮೇಲೆ ಎರಗಿ ಮಾರಣಾಂತಿಕ ದಾಳಿ ನಡೆಸಿತ್ತು. ದಾಳೆ ವೇಳೆ ಗಾಯಗೊಂಡಿದ್ದ ಫಕ್ಕಿರಪ್ಪ ಮೆದುಳು, ಕಣ್ಣು, ಮತ್ತು ಮುಖದ ಮೇಲ್ಭಾಗ ಶೇ.90 ರಷ್ಟು ಚರ್ಮ ಕಿತ್ತು ವಿರೂಪಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ ಜುಲೈ 30 ರಂದು ಕಿಮ್ಸ್ ನಿಗಾ ಘಟಕದಲ್ಲಿಟ್ಟು ಸೆಪ್ಟೆಂಬರ್ 16 ರಂದು ಸುದೀರ್ಘ 6 ಗಂಟೆಗಳ ಗಂಭೀರ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗಿದೆ. ಇದರಿಂದ ಫಕ್ಕಿರಪ್ಪ ಜೀವಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿಸಿದರು.

ಕಣ್ಣಿನ ಪ್ರಮುಖ ಭಾಗಗಳಿಗೆ ಯಾವುದೇ ರೀತಿಯ ಅಪಾಯವಾಗದಂತೆ ಪುನರ್ ರಚನೆ ಮಾಡಲು ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ಆಸ್ಪತ್ರೆಯ ತಜ್ಞ ಡಾ.ಮಂಜುನಾಥ, ವಸಂತ ಕಟ್ಟಿಮನಿ, ಅನುರಾಧ ಹಾಗೂ ವಿವೇಕಾನಂದ ಜೇವರ್ಗಿ ನೇತೃತ್ವದ ತಂಡ ಯಶಸ್ವಿಯಾಗಿದೆ. ಈ ರೋಗಿಯ ತೊಡೆಯ ಚರ್ಮವನ್ನು ತೆಗೆದು ಮುಖಕ್ಕೆ ಜೋಡಿಸುವ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಸದ್ಯ ಫಕ್ಕಿರಪ್ಪ ಯಥಾಸ್ಥಿತಿಗೆ ಮರಳಿದ್ದಾರೆ. ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ 1.50 ಲಕ್ಷ ರೂ ವೆಚ್ಚವಾಗಬಹುದಾದ ಗಂಭೀರ ಸ್ವರೂಪದ ಈ ಶಸ್ತ್ರಚಿಕಿತ್ಸೆಯನ್ನು ಕಿಮ್ಸ್ ಉಚಿತವಾಗಿ ನಡೆಸಿ ಅನುಕೂಲ ಮಾಡಿಕೊಟ್ಟಿದೆ ಎಂದು ಡಾ.ರಾಮಲಿಂಗಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆ ತಜ್ಞ ಮಂಜುನಾಥ ವಿಜಾಪುರ, ಡಾ. ವಸಂತ ಕಟ್ಟಿಮನಿ, ಡಾ.ಅನುರಾಧ ನಾಗನಗೌಡ್ರ, ಡಾ.ಸ್ಪೂರ್ತಿ, ಕಣ್ಣಿನ ಶಸ್ತ್ರಚಿಕಿತ್ಸಕ ವಿವೇಕಾನಂದ ಜೇವರ್ಗಿ ಸೇರಿದಂತೆ ಮುಂತಾದವರು ಇದ್ದರು.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *