ಧಾರವಾಡ:ಜೀವನಾಂಶಗಳ ಬೆಲೆಯೇರಿಕೆಯನ್ನು ಖಂಡಿಸಿ ಜಯನಗರದ ವೃತ್ತ ದ ಹತ್ತಿರ ಕಾಂಗ್ರೆಸ್ ಪಕ್ಷದ ರಾಣಿ ಚೆನ್ನಮ್ಮ ಬ್ಲಾಕ್ ವತಿಯಿಂದ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ಬೀದಿಯಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು, ಸ್ಕೂಟರಗಳು, ಬೈಕುಗಳು ಕಾರುಗಳನ್ನು ಇಟ್ಟು ಅವುಗಳಿಗೆ ಹೂವಿನ ಹಾರ ಹಾಕಿ ಶೃದ್ಧಾಂಜಲಿ ಸಲ್ಲಿಸುವ ಮುಖಾಂತರ
ಕೇಂದ್ರದ ಬೆಲೆಯೇರಿಕೆಯನ್ನು ಖಂಡಿಸಿ ಬ್ಲಾಕ್ ಅಧ್ಯಕ್ಷರಾದ ನಾಗರಾಜ ಗೌರಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು
ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಅಧ್ಯಕ್ಷರಾದ ನಾಗರಾಜ ಗೌರಿ ಪಂಚರಾಜ್ಯಗಳ ಚುನಾವಣೆ ವೇಳೆಯಲ್ಲಿ ತೈಲ ಬೆಲೆ ಏರಿಕೆಯ್ನು ತಟಸ್ಥಗೊಳಿಸಿದ್ದ ಕೇಂದ್ರದ ಮೋದಿ ಸರಕಾರವು ಈಗ ಪೆಟ್ರೋಲ್, ಡಿಸೆಲ್, ಗ್ಯಾಸ್
ಸಿಲಿಂಡರಗಳ ಪಿಎನ್‍ಜಿ ಸಿಎನ್‍ಜಿ ಬೆಲೆಗಳನ್ನು ಪ್ರತಿನಿತ್ಯ ಏರಿಸುತ್ತಿದೆ. ಪರಿಣಾವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರುತ್ತಿದ್ದು ಸಾಮಾನ್ಯ ಜನರ
ಜೀವನದುಸ್ತರವಾಗಿದೆ ಎಂದು ಟೀಕಿಸಿದರು.
ಕೇಂದ್ರ ಸರಕಾರದ ಜನವಿರೋಧಿ ಆಡಳಿತವಾಗಿದೆ. ಭಾರತೀಯ ರಾಷ್ಟ್ರೀಯ ಪಕ್ಷವಾದ ನಾವಿಂದು ಬಿಜೆಪಿ ಈ ದುರಾಡಳಿತ, ಬೇಜವಾಬ್ದಾರಿ ಮತ್ತು ಜನಪರ ಕಾಳಜಿ ಇಲ್ಲದ
ಆಡಳಿತವನ್ನು ವಿರೋಧಿಸಿ ಬೆಲೆಗಳ ವಿಪರಿತ ಹೆಚ್ಚಳದ ವಿರುದ್ದ
ಜನಪರವಾಗಿ ಧ್ವನಿ ಎತ್ತುತ್ತಿದ್ದೆವೆ ಎಂದ ಅವರು, ಈ ನಿಟ್ಟಿನಲ್ಲಿ ನಮ್ಮಗಳ ಹೋರಾಟ ನಿರಂತರವಾಗಿ ನಡೆಯಲಿದೆ. ಮಧ್ಯಮ ವರ್ಗದವರು ಬಡವರು ನೌಕರ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನೆಕಾರರು ದೊರಿದ್ದಾರೆ.
ಸಿಲಿಂಡರಗಳನ್ನು ಬಳಸುವುದೇ ದುಸ್ಥರವಾಗಿದೆ. ಕೇಂಧ್ರ ಸರಕಾರವು
ಸ್ವಲ್ಪ ದಿನ ನಾಗರಿಕಗೆ ಅಡುಗೆ ಸಿಲಿಂಡರುಗಳ ಮೇಲೆ ಸಬ್ಸಿಡಿ ಹಣವನ್ನು ಕೊಟ್ಟಂತೆ ಮಾಡಿ ಇತ್ತೀಚೆಗೆ ಅದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದನ್ನು ಹಗಲು ದರೋಡೆ ಎನ್ನದೇ ವಿಧಿ ಇಲ್ಲ. ನಾಗರಿಕರ ಮೂಲಭೂತ ಸೌಕರ್ಯಗಳನ್ನು ಸರಕಾರವು ದುಬಾರಿಯಾಗದಂತೆ ನೋಡಿಕೊಳ್ಳಬೇಕು. ಎಂದು ಪ್ರತಿಭಟನಾಕಾರರು ಘೋಷಣೆಗಳ ಮೂಲಕ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನೆಯಲ್ಲಿ ನಾಗರಾಜ ಗೌರಿ, ಪಿ,ಎಚ,ನಿರಲಕೇರಿ,ಮುತ್ತುರಾಜ ಮಾಕಡವಾಲೆ,ಆನಂದ ಸಿಂಗನಾಥ, ವಸಂತ ಅರ್ಕಾಚಾರ,ಪ್ರಬು ತವಂಸಿ, ಇಮ್ರಾನ ಕಳ್ಳಿಮನಿ,ದೆವಾನಂದ ರತ್ನಾಕರ,ಜಯಂತ ಸಾಗರ,ಜೆಮ್ಸ ಯಾಮಾ,ನಾಗರಾಜ ಅಪ್ಪಣ್ಣವರ,ರೊಹಿತ ಕಲಾಲ,ಸೌರಬ ಮಾಸೆಕರ,ಮಂಜು ಕಟ್ಟಿ,ಶಂಕರ ಮುಗಳಿ,
ಇಮ್ರಾನ ಬೆಂಗಳೂರ, ಸತಿಷ, ಗಿರಿಯೆಣ್ಣವರ, ಶಿವಾನಂದ ಚಂದರಗಿ, ಗುರುರಾಜ ಬಾರಕೆರ, ಅರುಣಕುಮಾರ ಮಜ್ಜಗಿ, ದೀಪಾ ಗೌರಿ, ಕುಸುಮಾ ಜೈನ, ಚಾಂದಬಿ ಅತ್ತಲ,ಗೀತಾ ಗುರುನಾಥ, ಕಾಂತಾ ಜವಗುರ, ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯೆಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

