Breaking News

ವಿದೇಶಕ್ಕೆ ಈರುಳ್ಳಿ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ಮುಂದಿನ ವರ್ಷ ಮಾರ್ಚ್‌ವರೆಗೂ ನಿಷೇಧಿಸಿದೆ….

ನವದೆಹಲಿ: ಪ್ರತಿ ಕೆಜಿ ಈರುಳ್ಳಿಗೆ 70 ರೂಪಾಯಿ ಬೆಲೆ ದಾಟಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ಈರುಳ್ಳಿ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ಮುಂದಿನ ವರ್ಷ ಮಾರ್ಚ್‌ವರೆಗೂ ನಿಷೇಧಿಸಿದೆ. ದೇಶದಲ್ಲಿ ಈರುಳ್ಳಿಯ ಚಿಲ್ಲರೆ ಬೆಲೆಗಳು ಪ್ರತಿ ಕೆಜಿಗೆ 70 ರೂಪಾಯಿ ದಾಟಿದ ಕಾರಣ ದೇಶಿಯ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಕೇಂದ್ರವು ಶುಕ್ರವಾರ ರಫ್ತಿಗೆ 1 ವರ್ಷ ನಿಷೇಧ ಹೇರಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಡಿಸೆಂಬರ್‌ನಲ್ಲಿ ತರಕಾರಿ ಬೆಲೆಗಳು ಏರಿಕೆಯಾಗಬಹುದು. ನವೆಂಬರ್ ಮತ್ತು ಡಿಸೆಂಬರ್ ಎರಡರಲ್ಲೂ ಹಣದುಬ್ಬರ ಏರಿಕೆಯಾಗಬಹುದು ಎಂದು ಎಚ್ಚರಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ, ದೇಶೀಯ ಮಾರುಕಟ್ಟೆಗಳಲ್ಲಿ ಈರುಳ್ಳಿಯ ಬೆಲೆಯನ್ನು ಮಾರುಕಟ್ಟೆಯಲ್ಲಿ ನಿಯಂತ್ರಿಸಲು ಕೇಂದ್ರವು ಪ್ರತಿ ಮೆಟ್ರಿಕ್ ಟನ್‌ಗೆ 800 ರೂ.ಗಳ ಕನಿಷ್ಠ ರಫ್ತು ಬೆಲೆಯನ್ನು (MEP) ವಿಧಿಸಿತ್ತು. ಶುಕ್ರವಾರ ಈರುಳ್ಳಿ ರಫ್ತು ನೀತಿಯನ್ನು ‘ಉಚಿತ’ದಿಂದ ‘ನಿಷೇಧಿತ’ ಎಂದು ಮಾರ್ಚ್ 31, 2024 ರವರೆಗೆ ತಿದ್ದುಪಡಿ ಮಾಡಿದೆ.

Share News

About BigTv News

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *