ಹುಬ್ಬಳ್ಳಿ : ಕಳೆದ ದಿನ ಜೋಶಿ ಆಗಮನಕ್ಕೆ ಹುಬ್ಬಳ್ಳಿಯ ಗೋಕುಲ್ ರಸ್ತೆಯ ವಿಭಜಕ ಮದ್ಯೆ ಹಾಕಿದ್ದ ಬಿಜೆಪಿ ಬಾವುಟದಿಂದ ಗಿಡಮರಗಳಿಗೆ ತೊಂದರೆ ಆಗಿದೆ ಎಂದು ಟ್ವೀಟ್ ಮಾಡಿ ವ್ಯಂಗವಾಡಿದ್ದ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಇಂದು ಮಾಡಿದ ತಪ್ಪನ್ನು ಬಿಜೆಪಿ ಕಾರ್ಯಕರ್ತರು ಸರಿ ಪಡಿಸಿಕೊಂಡರು ಮತ್ತೆ ಕಾಲೇಳೆದು ಟ್ವೀಟ್ ಮಾಡಿದ್ದಾರೆ
ಟ್ವೀಟ್ ನಲ್ಲಿ ಮತ್ತೆ ಜೋಶಿ ಕಾಲೇಳೆದಿರುವ ರಜತ್ ಉಳ್ಳಾಗಡ್ಡಿಮಠ, ನೀವೇ ಅರಿತು ಮಾಡಬೇಕಾದ ಕೆಲಸವನ್ನು ಟೀಕೆ ಮಾಡಿಸಿಕೊಂಡು ಮಾಡುವುದರಲ್ಲಿ ಏನು ಅರ್ಥವಿದೆ ಸಂಸದ ಪ್ರಹ್ಲಾದ್ ಜೋಶಿ ಸಾಹೆಬ್ರೆ?
ಅಂತೂ ತಮ್ಮ ಪಕ್ಷದ ಬಾವುಟ ಹೊತ್ತು ಬಾಗಿದ್ದ ಆ ಗಿಡಗಳ ಮೇಲೆ ನೀವು ಕನಿಕರ ತೋರಿಸಿ ದ್ವಜಗಳನ್ನು ತೆರವು ಮಾಡಿದ್ದೀರಿ. ಸಮಸ್ತ ಪರಿಸರ ಪ್ರೇಮಿಗಳ ಪರವಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

