Breaking News

ಪೌರ ಕಾರ್ಮಿಕರ ಹಾಜರಾತಿಯಲ್ಲಿ ಬೃಹತ್ ಗೋಲ್ ಮಾಲ್:ಅಧಿಕಾರಿಗಳು ಶಾಮೀಲು ಶಂಕೆ…?

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ನೂರಾರು ಪೌರ ಕಾರ್ಮಿಕರ ವ್ಯವಸ್ಥೆಯಲ್ಲಿ ಕೆಲವೊಂದು ಗಂಭೀರ ಆರೋಪಗಳು ಇದೀಗ ಕೇಳಿ ಬಂದಿವೆ.ದಿನನಿತ್ಯ ಯತಾ ವತ್ತಾಗಿ ಸಾಕಷ್ಟು ಪೌರ ಕಾರ್ಮಿಕರು ಎಂದಿನಂತೆ ಕಾರ್ಯ ನಿರ್ವಹಿಸಿ ಬೆವರು ಹರಿಸಿ ಸಂಬಳ ಪಡೆಯುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಮತ್ತೊಂದು ರೀತಿಯ ಕರಾಳ ವ್ಯವಸ್ಥೆ ಇರುವ ಶಂಕೆ ವ್ಯಕ್ತವಾಗಿದೆ.ಹೌದು ಈ ಬಗ್ಗೆ ಬಿಗ್ ಟಿವಿ ಬಳಿ ಸಾಕ್ಷಿ ಸಮೇತ ದಾಖಲೆ ಇದ್ದು ಸದ್ಯದಲ್ಲೇ ಈ ಕರಾಳ ದಂಧೆಯ ಇಂಚಿಂಚು ಮಾಹಿತಿಯನ್ನು ಹೊರ ಹಾಕಲಿದೆ. ಈ ಕರಾಳ ವ್ಯವಸ್ತೆಯ ಹಿಂದೆ ಪಾಲಿಕೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೋನಲ್ ಅಧಿಕಾರಿಗಳು, ಹೆಲ್ತ್ ಇನ್ಸಪೆಕ್ಟರ್ ಬಾಗಿಯಾಗಿರುವ ಶಂಕೆ ಇದ್ದು. ದಿನನಿತ್ಯ ಕಠಿಣ ಪರಿಶ್ರಮ ಹಾಕುತ್ತಿರುವ ಪೌರ ಕಾರ್ಮಿಕರು ನಿತ್ಯ ಇವರುಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *