ಹುಬ್ಬಳ್ಳಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರು 2 ಸಾವಿರ ಪಡೆಯುತ್ತಿದ್ದಾರೆ. ಆದರೆ, ಕೋವಿಡ್ ಸಂಕಷ್ಟದ ಕಾಲದಲ್ಲಿ ಪ್ರಧಾನಿ ನರೇಂದ್ ರ ಮೋದಿ ಅವರು ದೇಶದ ಜನತೆಗೆ ಉಚಿತವಾಗಿ ಲಸಿಕೆ ನೀಡಿ ಜೀವದ ಗ್ಯಾರಂಟಿ ನೀಡಿದ್ದರು ಎನ್ನುವುದನ್ನು ಮರೆಯಬಾರದು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಮೋ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ಇನ್ನೂ ಮಲಗಿದರೆ ಎದ್ದೇಳುವಾಗ ಭಾರತವಿರದು ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ನಿಂದ ಇಡೀ ಜಗತ್ತೇ ತತ್ತರಿಸಿ ಹೋಗಿತ್ತು. ಭಾರತದ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಆಗ ಪ್ರಧಾನಿ ಮೋದಿ ಅವರು ಲಸಿಕೆ ತಯಾರಿಸಲು ವಿಜ್ಞಾನಿ ಗಳಿಗೆ ಕರೆ ನೀಡಿದರು. ಕೋವ್ಯಾಕ್ಸಿನ್, ಕೋವಿಶೀಲ್ಡ್ ತಯಾರಿಸಲಾಯಿತು. ಕೆಲವರು ಅದರ ಗುಣಮಟ್ಟ ಸರಿಯಿಲ್ಲ ಎಂದು ಆಕ್ಷೇಪಿಸಿ, ಅಮೆರಿಕದ ಕಂಪನಿಯ ಲಸಿಕೆ ಖರೀದಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಅದ್ಯಾವುದಕ್ಕೂ ಒಪ್ಪದ ಮೋದಿ, ಸ್ವದೇಶಿ ಲಸಿಕೆಗೆ ಪ್ರಾಮುಖ್ಯತೆ ನೀಡಿದರು ಎಂದರು.
20 ಕ್ಕೂ ಹೆಚ್ಚು ದೇಶಗಳಿಗೆ ಉಚಿತವಾಗಿ ನೀಡಿತ್ತು. ಸಂಕಷ್ಟದ ಕಾಲದಲ್ಲಿ ಭಾರತದ ಸಹಾಯ ಮೆಚ್ಚಿದ ಬ್ರೆಜಿಲ್ ಪ್ರಧಾನಿ ಧನ್ಯವಾದ ಭಾರತ ಎಂದು ಟ್ವಿಟ್ ಮಾಡಿದ್ದರು. ಇದು ಭಾರತದ ಸಾಧನೆ. 250 ಡಾಲರ್ ಪರ್ ಮಿಸಲಾಯಿತು ಎಂದು ಹೇಳಿದರು.ಪಂಚರಾಜ್ಯ ಚುನಾವಣೆಯಲ್ಲಿ ಮೋದಿಯವರನ್ನು ಜನ ತಿರಸ್ಕರಿಸುತ್ತಾರೆ ಎಂದು ವಿರೋಧಿಗಳು ಲೆಕ್ಕಹಾಕಿದ್ದರು. ಅದಕ್ಕಾಗಿ ಒಂದು ಬಣವನ್ನೇ ಸಿದ್ಧಪಡಿಸಿಕೊಂಡಿದ್ದರು. ಸನಾತನ ಧರ್ಮವನ್ನು ಡೆಂಗಿಗೆ ಹೋಲಿಸಿದ್ದರು.ಉತ್ತರ ಭಾರತದ ರಾಜ್ಯಗಳನ್ನು ಗೋಮೂತ್ರ ರಾಜ್ಯಗಳು ಎಂದೂ ಕರೆದಿದ್ದರು. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅವರೆಲ್ಲ ಶಾಂತವಾಗಿದ್ದಾರೆ. ಆರೋಪಿಸಿದವರು ಕ್ಷಮೆ ಕೇಳುತ್ತಿದ್ದಾರೆ. ಜಾತಿ-ಮತಗಳ ಒಡಕುಗಳನ್ನು ಮೀರಿ ಭಾರತ ಈಗ ಒಂದಾಗುತ್ತಿ ದೆ’ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





