Breaking News

ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆ ತೃಣಮೂಲ ಸದಸ್ಯರ ಅಮಾನತಿಗೆ ಪ್ರಸ್ತಾವನೆಯನ್ನು ಅಂಗೀಕರಿಸಿದೆ…

ನವದೆಹಲಿ: ಅನುಚಿತ ವರ್ತನೆ ಕಾರಣ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಟಿಎಂಸಿ ಸಂಸದ ಡೆರೆಕ್ ಓ ಬ್ರಿಯಾನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ರಾಜ್ಯಸಭೆ ಅಂಗೀಕರಿಸಿದೆ. ರಾಜ್ಯಸಭಾ ಅಧ್ಯಕ್ಷರ ಪ್ರಕಾರ, ನಿನ್ನೆಯ ಭದ್ರತಾ ಉಲ್ಲಂಘನೆಯ ಘಟನೆಯ ವಿಷಯವನ್ನು ಪ್ರತಿಪಕ್ಷಗಳು ಪ್ರಸ್ತಾಪಿಸುತ್ತಿದ್ದಂತೆ ಡೆರೆಕ್ ಓ ಬ್ರಿಯಾನ್ ಅವರು ಸದನದ ಬಾವಿಗೆ ನುಗ್ಗಿ ಘೋಷಣೆಗಳನ್ನು ಕೂಗಿದರು ಮತ್ತು ಸದನದ ಕಲಾಪಕ್ಕೆ ಅಡ್ಡಿಪಡಿಸಿದರು.

ಗುರುವಾರ ಬೆಳಗ್ಗೆ ನಡೆದ ಕಲಾಪದಲ್ಲಿ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಡೆರೆಕ್ ಓ ಬ್ರಿಯಾನ್‌ರನ್ನು ಸಂಸತ್ತಿನ ಉಳಿದ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸದಂತೆ ಅಮಾನತುಗೊಳಿಸಲಾಗಿದೆ. ಚಳಿಗಾಲದ ಅಧಿವೇಶನ ಡಿಸೆಂಬರ್ 22ರವರೆಗೆ ನಡೆಯಲಿದೆ. ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆ ತೃಣಮೂಲ ಸದಸ್ಯರ ಅಮಾನತಿಗೆ ಪ್ರಸ್ತಾವನೆಯನ್ನು ಅಂಗೀಕರಿಸಿದೆ.

Share News

About BigTv News

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *