ಲಂಡನ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಹೇಳಿ ಕೇಳಿ ಎಲ್ಲಾ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೆ ಲಂಡನ್‌ಗೆ ಒಂದಲ್ಲ ಒಂದು ದಿನ ಹೋಗಬೇಕು, ಅಲ್ಲಿರುವ ಎಲ್ಲ ದಿನಗಳನ್ನು ಬಹಳ ಖುಷಿಯಿಂದ ಎಂಜಾಯ್ ಮಾಡಬೇಕು ಎನ್ನುವುದು ಎಲ್ಲರ ಕನಸು. ಹಾಗೇಯೇ ಇಲ್ಲೊಬ್ಬ ನಟಿ ಇತ್ತೀಚೆಗೆ ಫಾರಿನ್‌ನಲ್ಲಿ ಹೆಚ್ಚು ದಿನಗಳನ್ನು ಕಳೆಯುತ್ತಿದ್ದಾರೆ. ಆ ನಟಿ ಬೇರೆ ಯಾರು ಅಲ್ಲ ಅವರೇ ‘ನಾಗಿಣಿ’ ನಟಿ ದೀಪಿಕಾ ದಾಸ್.
ದೀಪಿಕಾ ದಾಸ್ ಇದೀಗ ಲಂಡನ್‌ನಲ್ಲಿ ತಮ್ಮ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಲಂಡನ್‌ನ ಬೀದಿ ಬೀದಿಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಲಂಡನ್‌ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಹಾಗೆಯೇ ಬೀದಿ ಬೀದಿಗಳಲ್ಲಿಯೂ ಕ್ರಿಸ್ಮಸ್ ಅಲಂಕಾರ ಸಕತ್ ಜೋರಾಗಿರುತ್ತದೆ. ಹೀಗಾಗಿಯೇ ಹಲವು ಸೆಲಬ್ರಿಟಿಗಳು ಹಬ್ಬ ಆಚರಿಸಲು ಲಂಡನ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ನಟಿ ದೀಪಿಕಾ ದಾಸ್ ಕೂಡ ಒಬ್ಬರು.
ನಟಿ ದೀಪಿಕಾ ದಾಸ್ ಲಂಡನ್‌ಗೆ ತೆರಳಿ ಕ್ರಿಸ್ಮಸ್ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಬಟ್ಟೆಗಲ ಆಯ್ಕೆಯಿಂದ ಯಾವಾಗಲು ಟ್ರೆಂಡ್ ಸೃಷ್ಠಿ ಮಾಡುವ ನಟಿ ದೀಪಿಕಾ ದಾಸ್, ಬ್ಲೂ ಡ್ರೆಸ್ ಧರಿಸಿ, ಅದರ ಮೇಲೆ ಗೋಧಿ ಬಣ್ಣದ ಬ್ಲೆಜರ್ ತೊಟ್ಟು ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಕೂದಲು ಫ್ರಿಯಾಗಿ ಬಿಟ್ಟು ತಲೆಗೆ ಮುದ್ದಾದ ಟೋಪಿ ಧರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





