Breaking News

ಪ್ರಾಥಮಿಕ ಶಾಲೆಯಯಲ್ಲಿ ಸಸಿ ನೆಡುವ ಕಾರ್ಯಕ್ರಮ

ಧಾರವಾಡ: ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ರೋಟರಿ ಕಮುನಿಟಿ ಕಾರ್ಡ್ಸ್ ಫ್ರೆಂಡ್ಸ್ ಗೋಲ್ಡ್ , ಅಸೋಸಿಯೇಷನ್ ನವಲೂರ್ , ಮಯೂರ್ ಫೌಂಡೇಶನ್ ಹಾಗೂ ಬ್ಯಾಂಕ್‌ ಆಫ್ ಬರೋಡ ಸಹಯೋಗದೊಂದಿಗೆ ನವಲೂರ್ ಹರಿಜನ ಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ಪರವಾಗಿ ಗವರ್ನರ್ ಸೀನಿಯರ್ ರೆಪ್ರಸೆಂಟೇಟಿವ್ ಡಾ.ಸತೀಶ್ ಇರಕಲ್ , ಅಸಿಸೆಂಟ್ ಗವರ್ನರ್ ಶ್ರೀಮತಿ ರೇಣುಕಾ ಸಾಳಂಕೆ , ಅಧ್ಯಕ್ಷರಾದ ಡಾ . ಸಂತೋಷ್ ಜೀವನ್ಮವರ್ , ಕಾರ್ಯದರ್ಶಿಗಳಾದ ಪುಂಡಲೀಕ್ ಜಗದಾಳೆ , ಕಮುನಿಟಿ ಸರ್ವಿಸ್ ರೋಟರಿಯನ ಸುಮಿತ್ ಶೆಟ್ಟಿ ಹೋಟರಿಯನ್‌ಗಳಾದ ರವಿ ಬಿರ್ಜನವರ್ , ಶಿವಾಜಿ ಸೂರ್ಯವಂಶಿ , ಬ್ಯಾಂಕ ಆಫ್ ಬರೋಡಾ , ರಾಮ ನಗರ ಶಾಖೆ , ಧಾರವಾಡ ದ ಶಾಖಾ ವ್ಯವಸ್ಥಾಪಕರಾದ ಮುಕೇಶ್ ಜೈಸ್ವಾಲ್ ಹಾಗೂ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು .

ಮಯೂರ ಕೌಂಡೇಶನ್ ವತಿಯಿಂದ ಈರಣ್ಣ , ಈರೇಶ , ಪ್ರಕಾಶ ತಡಸ್ , ಪ್ರೆಂಡ್ಸ್ ಗ್ರೂಫ್ ಆಸೋಸಿಯೇಶನ ನವಲೂರ್ ವತಿಯಿಂದ ಪ್ರವಾಳದ ಪ್ರಕಾಶ ತೆಲಗರ , ನಂಧೀಶ ಕಟ್ಟಿ , ಮಂಜುನಾಥ ಮಾಯಣ್ಣವರ , ೨೩ ನೇ ವಾರ್ಡ ನ ಕಾರ್ಪೊರೇಟರ ರಾದ – ಮಂಜುನಾಥ ಬಡಕುರಿ ಹಾಗೂ ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಬಸವರಾಜ ತೇಗಾರ , ಮಂಜುನಾಥ ಕಟ್ಟಿ ಹಾಗೂ ಸರ್ಕಾರಿ ಪ್ರಾ ಥಮಿಕ ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಮತ್ತು ನವಲೂರಿನ ಹಿರಿಯರು ಮುಖಂಡರುಗಳು ಈ ರ್ಯಕ್ರಮದಲ್ಲಿ ಭಾಗವಹಿಸಿದ್ದರು .

ಸಿಸೆಂಟ್ ಗವರ್ನರ್ ಶ್ರೀಮತಿ ರೇಣುಕಾ ಸಾಳಂಕೆ ಯವರು ಹಣ್ಣಿನ ಸಸಿಗಳ ಬಗ್ಗೆ ಮಾಹಿತಿಯನ್ನು ನೀಡಿದರು , ಸ್ಥಳೀಯ ನಿವಾಸಿಗಳ ಮಕ್ಕಳಿಗೆ ಪರಿಸರ ಕಾಳಜಿಯ ಬಗ್ಗೆ ತಿಳಿಸಿ ಆ ಸಸಿಗಳನ್ನು ಬೆಳೆಸುವ ಜವಾಬ್ದಾರಿಯನ್ನು ನೀಡಲಾಯಿತು ಈ ಮೂಲಕ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವಲ್ಲಿ , ಯಶಸ್ವಿಯಾಯಿತು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *