Breaking News

ಬಿಜೆಪಿ ಅವರ ಮನೆ ಒಂದು ಮೂರು ಬಾಗಿಲಾಗಿದೆ: ಪ್ರಿಯಾಂಕ್‌ ಖರ್ಗೆ.

ಬೆಂಗಳೂರು: ಬಿಜೆಪಿಯಲ್ಲಿ ಸಮನ್ವಯತೆ ಇಲ್ಲವಾಗಿದೆ. ಅಸಲಿ ವಿರೋಧ ಪಕ್ಷದ ನಾಯಕ ನಾನು ಅಂತ ಇನ್ನೊಬ್ಬರು ಹೇಳ್ತಾರೆ. ಮೂರಲ್ಲ ಬಿಜೆಪಿ ಅವರ ಮನೆ ನೂರು ಬಾಗಿಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದರು.ಈ ವೇಳೆ ಲೋಕಸಭೆ ಗೆಲ್ಲಲು ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ಮಾಧ್ಯಮಗಳ ಪ್ರಶ್ನೆಗೆ ಪ್ರಿಯಾಂಕ್‌ ಖರ್ಗೆ ಉತ್ತರಿಸಿ, ಎರಡೂ ಮನೆಗೂ ಬೆಂಕಿ ಹತ್ತಿದೆ. ಬೆಳಗಾವಿಯಲ್ಲಿ ನೋಡಿದ್ದೇವೆ ಇವರದ್ದು ಮನೆ ಒಂದು ಮೂರು ಬಾಗಿಲಾಗಿದೆ. ಒಂದು ಬಾಗಿಲು ಯತ್ನಾಳ ಕಾಯ್ತಾ ಇದ್ದಾರೆ. ಇನ್ನೊಂದು ಬಾಗಿಲು ಅಶೋಕ್ ಕಾಯ್ತಾ ಇದ್ದಾರೆ. ಮೂರನೇ ಬಾಗಿಲು ವಿಜಯೇಂದ್ರ ಕಾಯ್ತಾ ಇದ್ದಾರೆ. ಎಲ್ಲಿದೆ ಇವರಲ್ಲಿ ಸಮನ್ವಯ ? ಎಂದು ಪ್ರಶ್ನಿಸಿದ್ದಾರೆ.

ಪ್ರತಾಪ ಸಿಂಹ ವಿಚಾರಣೆ ಅಗತ್ಯ ಇಲ್ಲ ಎನ್ನುವ ಕಲಬುರಗಿ ಸಂಸದ ಡಾ. ಉಮೇಶ ಜಾಧವ್ ಹೇಳಿಕೆ ಕುರಿತು ಸಚಿವ ಪ್ರೀಯಾಂಕ್ ಖರ್ಗೆ ಕಿಡಿಕಾರಿದ್ದು, ಕಲ್ಬುರ್ಗಿ ಎಂ ಪಿ ಉಮೇಶ್ ಜಾದವ್ ಗೆ ಬುದ್ಧಿ ಇಲ್ಲ. ಇದು ಗಂಭೀರವಾದಂತ ವಿಚಾರ ಎಂದು ನಿಮ್ಮ ಪ್ರಧಾನಿ ಅವರೇ ಹೇಳಿದ್ದಾರೆ. ಪ್ರತಾಪ್ ಸಿಂಹ ವಿಚಾರಣೆ ಅವಶ್ಯಕತೆ ಇಲ್ಲ ಅನ್ನೋರು ಇವರ್ಯಾರು .ಇನ್ನಿಬ್ಬರಿಗೂ ಬಿಜೆಪಿ ಸಂಸದರೇ ಪಾಸ್ ಕೊಟ್ಟಿದ್ದಾರಂತೆ. ಉಮೇಶ ಜಾಧವ ಅವರೇ ಕೊಟ್ಟಿದ್ದರೆ ಏನ್ಮಾಡ್ತಿರಾ ? ಉತ್ತರ ಕೊಡಲಿ ಎಂದು ಸವಾಲ ಹಾಕಿದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *