Breaking News

ಜೆಎನ್‌.1 ಕೊರೋನಾ ರೂಪಾಂತರಿ ತಳಿಯ ವಿರುದ್ಧವೂ ಲಸಿಕೆ ಬಿಡುಗಡೆ…

ದೆಹಲಿ: ಈ ಹಿಂದೆ ಕೋವಿಡ್‌ ಮಹಾಮಾರಿ ಜಗತ್ತಿಗೆ ಕಂಟಕವಾಗಿದ್ದು ಎಲ್ಲರಿಗೂ ತಿಳಿದಿದೆ. ಆ ವೇಳೆ ಕೋವಿಶೀಲ್ಡ್‌ ಲಸಿಕೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ಜನರನ್ನು ಸಾವಿನಿಂದ ಕಾಪಾಡಿದ ಖ್ಯಾತಿಯುಳ್ಳ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಇದೀಗ ಜಗತ್ತನ್ನು ಕಂಗೆಡಿಸಿರುವ ಜೆಎನ್‌.1 ಕೊರೋನಾ ರೂಪಾಂತರಿ ತಳಿಯ ವಿರುದ್ಧವೂ ಲಸಿಕೆ ಬಿಡುಗಡೆ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಜೆಎನ್‌.1 ರೂಪಾಂತರಿ ವೈರಸ್‌ನಿಂದ ಸೋಂಕಿತರಾದರೆ ಅವರಲ್ಲಿ ಸೋಂಕಿನ ಲಕ್ಷಣಗಳು ತೀವ್ರಗೊಳ್ಳದಂತೆ ಹಾಗೂ ಸಾವು ಸಂಭವಿಸದಂತೆ ಈಗಿರುವ ಲಸಿಕೆಗಳೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೂ ಸೀರಂ ಸಂಸ್ಥೆ ಪ್ರತ್ಯೇಕ ಲಸಿಕೆಯೊಂದನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅದರ ಪರವಾನಗಿಗೆ ಕೇಂದ್ರ ಸರ್ಕಾರದ ಬಳಿ ಅನುಮತಿ ಕೇಳಲಿದೆ ಎಂದು ಮೂಲಗಳು ಹೇಳಿವೆ.

Share News

About BigTv News

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *