Breaking News

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಡಾಂಗಣದಲ್ಲೇ ಕಣ್ಣೀರು ಹಾಕಿಬಿಟ್ಟರು….

ಭಾರತ ತಂಡ ಇಂದು ನ್ಯೂಜಿಲೆಂಡ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಆದ್ರೆ ಇದೇ ದಿನಕ್ಕಾಗಿ ಭಾರತ ತಂಡ ಬರೋಬ್ಬರಿ 4 ವರ್ಷದಿಂದ ಉಸಿರು ಬಿಗಿಹಿಡಿದು ಕಾದಿತ್ತು ಅಂತಾ ಹೇಳಿದರೆ ನಂಬುತ್ತೀರಾ? ಯಾಕಂದ್ರೆ 2019ರಲ್ಲಿ ಇದೇ ನ್ಯೂಜಿಲೆಂಡ್ ಟೀಂ ಮೇಲೆ ಸೆಮಿಫೈನಲ್ ಪಂದ್ಯ ಆಡಿದ್ದ ಭಾರತ ತಂಡ 18 ರನ್‌ಗಳ ಅಂತರದಲ್ಲಿ ಸೋತುಬಿಟ್ಟಿತು. ಆ ಸಮಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಡಾಂಗಣದಲ್ಲೇ ಕಣ್ಣೀರು ಹಾಕಿಬಿಟ್ಟರು.

9 ಜುಲೈ 2019 ರಂದು ಈ ಪಂದ್ಯ ನಡೆದಿತ್ತು, ನ್ಯೂಜಿಲೆಂಡ್ ತಂಡ ನೀಡಿದ್ದ 240 ರನ್ ಗುರಿ ಬೆನ್ನು ಹತ್ತಿದ್ದ ಭಾರತ ತಂಡ 221 ರನ್‌ಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತ್ತು. ಈ ಸಮಯದಲ್ಲೇ ಶತಕೋಟಿ ಭಾರತೀಯರ ಹೃದಯ ನರಳಿತ್ತು. ಯಾಕಂದ್ರೆ ಭಾರತ ತಂಡಕ್ಕೆ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಸೇರಿದಂತೆ ಚಾಂಪಿಯನ್ಸ್ ಟ್ರೋಫಿ ಸಮೇತ ‘ಐಸಿಸಿ’ ಆಡಿಸುವ ಎಲ್ಲಾ ಮಹತ್ವದ ಟೂರ್ನಿಗಳನ್ನು ಗೆಲ್ಲಿಸಿಕೊಟ್ಟಿದ್ದ ಧೋನಿ ಅತ್ತುಬಿಟ್ಟರು. ಈ ಅಳು ಭಾರತೀಯರ ಹೃದಯವನ್ನು ಭಾರ ಮಾಡಿತ್ತು. ಹೀಗೆ 4 ವರ್ಷದ ಹಿಂದೆ ನಡೆದಿದ್ದ ಆ ಘಟನೆಗೆ ಇಂದು ಭಾರತ ರಿವೇಂಜ್ ತೆಗೆದುಕೊಂಡಿದೆ. ಅಂದು ನಮ್ಮ ವಿರುದ್ಧ ಗೆಲುವು ಕಂಡು ಬೀಗಿದ್ದ ಕಿವೀಸ್ ಪಡೆಯ ಕಿವಿ ಹಿಂಡಿ ಇಂದು ಮನೆಗೆ ಕಳುಹಿಸಿದೆ.

Share News

About BigTv News

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *