Breaking News

ಅನ್ನಭಾಗ್ಯದ ಅಕ್ಕಿ ಮಂತ್ರಾಕ್ಷತೆಯಾಗಿ ಹಂಚುತ್ತಿದ್ದೀರಿ : ಡಿಕೆಶಿ..

ಬೆಂಗಳೂರು : ಕಾಂಗ್ರೆಸ್ ಪಕ್ಷದ ಅಕ್ಕಿಯನ್ನು ಮಂತ್ರಾಕ್ಷತೆಯಾಗಿ ಹಂಚುತ್ತಿದ್ದೀರಿ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಒಂದು ಕಡೆಯಲ್ಲಿ ಅಕ್ಕಿ ಮತ್ತೊಂದು ಕಡೆಯಲ್ಲಿ ಅರಸಿನ ಇತ್ತು.ಅಕ್ಕಿ ಹಾಗೂ ಅರಸಿನ ಸೇರಿ ಮಂತ್ರಾಕ್ಷತೆ ಆಯಿತು.ಅದನ್ನು ಇವಾಗ ಮನೆ ಮನೆಗೆ ತಲುಪಿಸುತ್ತಿದ್ದೀರಿ,ಇದು ಕಾಂಗ್ರೆಸ್ ಪಕ್ಷದ ಮಂತ್ರಾಕ್ಷತೆ ಅಲ್ವಾ? ಅಲ್ಲಿಂದ ಬಂದಿತ್ತಾ..? ಎಂದು ಪ್ರಶ್ನಿಸಿದರು. ಕೈಯಲ್ಲಿ ಮಂತ್ರಾಕ್ಷತೆ ಮಗ್ಗುಲಲ್ಲಿ ದೊಣ್ಣೆ ಇನ್ನು ಬಿಜೆಪಿಗರ ಕೈಯಲ್ಲಿ ಮಂತ್ರಾಕ್ಷತೆ ಹಾಗೂ ಮಗ್ಗುಲಲ್ಲಿ ಎಂದು ತರಾಟೆಗೆ ತೆಗೆದುಕೊಂಡರು.ಭಾರತ್ ಜೋಡೋ ಎರಡನೇ ಹಂತದ ಯಾತ್ರೆ ದೇಶದ ನ್ಯಾಯಕ್ಕಾಗಿ.ದೇಶದ ಜನರ ಹೃದಯ ಒಗ್ಗೂಡಿಸಲು ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಯುತ್ತಿದೆ.‌ ಇದೊಂದು ಮಾದರಿ ಹಾಗೂ ಇತಿಹಾಸವಾಗಿದೆ.ಆದರೆ ಅಸ್ಸಾಂನಲ್ಲಿ ಗುಹಾಟಿ ನಗರಕ್ಕೆ

ಎಂಟ್ರಿ ಆಗಲು ಬಿಡುತ್ತಿಲ್ಲ. ದೇಶದಲ್ಲಿ ಸಂವಿಧಾನ ಪ್ರಜಾಪ್ರಭುತ್ವ ಬದುಕಿದ್ಯಾ? ಎಂದು ಕಿಡಿಕಾರಿದರು.ರಾಹುಲ್ ಗಾಂಧಿ ಪಾದಯಾತ್ರೆ ವಿರೋಧ ಪಕ್ಷದವರಿಗೆ ಭಯ. ನಾವು ರಾಜಕಾರಣಕ್ಕೆ ಧರ್ಮವನ್ನು‌ ದುರುಪಯೋಗ ಮಾಡ್ತಿಲ್ಲ‌.ನಮ್ಮ ಹೆಸರಿನಲ್ಲಿ ದೇವರುಗಳ ಹೆಸರು ಇದೆ. ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ,ಶಿವಕುಮಾರ್ ಹೆಸರಿನಲ್ಲಿ ಶಿವ ಇದ್ದಾನೆ.ಬಿ.ಕೆ‌ ಹರಿಪ್ರಸಾದ್ ಹೆಸರಿನಲ್ಲಿ ಹರಿ ಇದ್ದಾನೆ ಹಾಗೂ ಕೃಷ್ಣ ಬೈರೇಗೌಡ ಹೆಸರಿನಲ್ಲಿ ಕೃಷ್ಣ ಇದ್ದಾನೆ.ಇದನ್ನು ಬದಲಾವಣೆ ಮಾಡಲು ಆಗುತ್ತಾ?ನಮ್ಮ ಧರ್ಮ ನಮಗೆ ನಂಬಿಕೆ, ಯಾವುದೇ ಜಾತಿ ಧರ್ಮ ಇರಲಿ ತತ್ವ ಒಂದೇ,ದೇವನೊಬ್ಬ ನಾಮ ಹಲವು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು,ಸಮ್ಮಿಶ್ರ ಸರ್ಕಾರ ಪತನಗೊಳಿಸಿದವರ ಜೊತೆಗೆ ಸಖ್ಯ ಮಾಡ್ತಿದ್ದಾರೆ ಎಂದು ಬಿಜೆಪಿ ಜೆಡಿಎಸ್ ಮೈತ್ರಿಗೆ ಡಿಕೆ ಶಿವಕುಮಾರ್ ಟೀಕೆ ಮಾಡಿದರು.ತಮ್ಮ ಕುಟುಂಬದವರ ಸಾವನ್ನು ಸಹಿಸಿಕೊಂಡು ಭಾರತ್ ಜೋಡೋ ನ್ಯಾಯ ಯಾತ್ರೆ ಮಾಡ್ತಿದ್ದಾರೆ.ಇದನ್ನು ಸಹಿಸಲು ಬಿಜೆಪಿಗರಿಗೆ ಆಗ್ತಿಲ್ಲ.ಕಾಂಗ್ರೆಸ್ ಕಾರ್ಯಕರ್ತರು ನಿಮ್ಮ‌ ಬೆದರಿಕೆಗೆ ಬಗ್ಗುವುದಿಲ್ಲ. ರಾಜಕಾರಣದಲ್ಲಿ ಧರ್ಮ ಇರಬೇಕು,ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ವಾಗ್ದಾಳಿ ನಡೆಸಿದರು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *