Breaking News
Featured Video Play Icon

ಸ್ನೇಹಿತನ ಹೆಂಡ್ತಿಗೆ ಕಾಳು ಹಾಕಲು ಹೋಗಿ ಪ್ರಾಣ ಕಳೆದುಕೊಂಡ ಗೆಳೆಯ…!

ಹುಬ್ಬಳ್ಳಿ ಯುವಕನ ಕೊಲೆ ಪ್ರಕರಣ: ಹೆಂಡತಿಗೆ ಕಿರುಕುಳ ನೀಡಿದ್ದಕ್ಕೆ ಆಪ್ತ ಸ್ನೇಹಿತನಿಂದಲೇ ಮರ್ಡರ್…ಯುವಕನ ಬರ್ಬರ ಹತ್ಯೆ ಮಾಡಿ ಸುಟ್ಟ ಪ್ರಕರಣದ ಆರೋಪಿ ಬಂಧಿಸುವಲ್ಲಿ ಹಳೆಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತನ ಆಪ್ತ ಸ್ನೇಹಿತಮಂಟೂರ ರಸ್ತೆಯ ಮಿಲ್ಲತ್ ನಗರದ ನಿವಾಸಿ ಸೈಯದ್ ಅಜರ್ (25) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ ಎಂದು ಹು-ಧಾ ಪೊಲೀಸ್ ‌ಕಮೀಷ‌ನರ್ ರೇಣುಕಾ ಸುಕುಮಾರ್ ಮಾಹಿತಿ ನೀಡಿದರು. ಅಜರ್ ಮತ್ತು ಮೃತ ವಿಜಯ ಬಸವ ಆಪ್ತ ಗೆಳೆಯರಾಗಿದ್ದರು. ಆದರೆ ಮೃತ ವಿಜಯ ಬಸವ ಅಜರದದ್ ಹೆಂಡತಿಗೆ ಕಿರಿಕಿರಿ ಮಾಡುತ್ತಿದ್ದ. ದೂರವಾಣಿ ಕರೆ ಮಾಡಿ ಬೇರೆ ಬೇರೆ ಸಂದರ್ಭದಲ್ಲಿ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಗೆಳೆಯನಿಗೆ ಅಜರ್ ಬುದ್ಧಿವಾದ ಹೇಳಿದ್ದ. ಆದ್ರೂ ಆತನ ಮಾತು‌ ಕೇಳದಿದ್ದಾಗ ಕೊಲೆ ಯೋಜನೆ ರೂಪಿಸಿದ್ದಾನೆ.‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದು. ಇಷ್ಟಕ್ಕೆ ಬಿಟ್ಟುಬಿಡು ಎಂದು ಕೇಳಿಕೊಂಡಿದ್ದ. ಗೆಳೆಯನ ಸಲಹೆ ವಿಜಯ ಬಸವ ಒಪ್ಪಲಿಲ್ಲ. ಇದರಿಂದ ಕುಪಿತಗೊಂಡು ಕಲ್ಲು ಎತ್ತಿ ಹಾಕಿ ನಂತರ ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ. ಇದೀಗ ಆರೋಪಿಯನ್ನು ಬಂಧಿಸಿದ್ದೇವೆ ಎಂದರು.ಈ‌ ಸಂಬಂಧ ತನಿಖೆ ಮುಂದುವರಿಸಲಾಗಿದೆ. ಅಜರ್ ಒಬ್ಬನೇ ಕೊಲೆ ಮಾಡಿರೋದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದರು.ರೇಣುಕಾ ಸುಕುಮಾರ್, ಹು-ಧಾ ಪೊಲೀಸ್ ಕಮಿಷನರ್

Share News

About Shaikh BigTv

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *