Breaking News

ಸಂಚಾರ ನಿಯಮ ಉಲ್ಲಂಘನೆ; ನೋಂದಣಿ ಸಂಖ್ಯೆಯ ಫಲಕ ಮರೆಮಾಚಿದ್ದವನ ವಿರುದ್ಧ FIR..

ಸಂಚಾರ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಲು ನೋಂದಣಿ ಸಂಖ್ಯೆಯ ಫಲಕ ಮರೆಮಾಚಿದ್ದ ಆರೋಪದಡಿ ದ್ವಿಚಕ್ರ ವಾಹನ ಸವಾರ ರಾಹುಲ್‌ಕುಮಾರ್ (23) ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ..ಎಚ್‌ಎಎಲ್ ಸಂಚಾರ ಠಾಣೆ ವ್ಯಾಪ್ತಿಯ ದೊಡ್ಡನೆಕ್ಕುಂದಿ ಜಂಕ್ಷನ್ ಬಳಿ ಹೊರಟಿದ್ದ ರಾಹುಲ್‌ಕುಮಾರ್‌ ದ್ವಿಚಕ್ರ ವಾಹನದ ಫಲಕ

ಮರೆಮಾಚಿತ್ತು. ಇದರ ಫೋಟೊ ಕ್ಲಿಕ್ಕಿಸಿದ್ದ ಸಾರ್ವಜನಿಕರೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.’ಫೋಟೊ ಆಧರಿಸಿ ತನಿಖೆ ಕೈಗೊಂಡು ರಾಹುಲ್‌ನನ್ನು ವಶಕ್ಕೆ ಪಡೆಯಲಾಗಿದೆ. ದ್ವಿಚಕ್ರ ವಾಹನವನ್ನೂ ಜಪ್ತಿ ಮಾಡಲಾಗಿದೆ. ರಾಹುಲ್ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದರು.’ಆರೋಪಿ ಪದೇ ಪದೇ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ. ಈ ವರ್ತನೆ ಕ್ಯಾಮೆರಾದಲ್ಲಿ ಸೆರೆಯಾಗಬಾರದೆಂದು ನೋಂದಣಿ ಸಂಖ್ಯೆ ಫಲಕ ಮರೆಮಾಚಿದ್ದ. ಕೆಲ ಸಂಖ್ಯೆಗಳಿಗೆ ಕಪ್ಪು ಪಟ್ಟಿ ಅಂಟಿಸಿದ್ದ’ ಎಂದು ಅಧಿಕಾರಿ ತಿಳಿಸಿದರು.

Share News

About BigTv News

Check Also

ಪತಿ ಬಟ್ಟೆಯಲ್ಲಿದ್ದ ‘ಬಾರ್‌ ಕೋಡ್‌’ ಕೊಟ್ಟ ಸುಳಿವು!

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ನಿವೇಶನದಲ್ಲಿ ಎಸೆದಿದ್ದ ಆರೋಪದ ಮೇಲೆ ಸಂಪಿಗೆಹಳ್ಳಿ …

Leave a Reply

Your email address will not be published. Required fields are marked *