Breaking News

ರಶ್‌ ಬಸ್‌ನಲ್ಲಿ ಪ್ರಯಾಣಿಸುತ್ತೀರಾ..? ಎಚ್ಚರಿಕೆ..! ಇಂತಹ ಕಿಲಾಡಿ ಲೇಡಿ ಗ್ಯಾಂಗ್‌ ಇರುತ್ತೆ..

ಆ ಮಹಿಳೆಯರು ಹೊರರಾಜ್ಯದಿಂದ ಬಂದು ಬೆಂಗಳೂರು ಹೊರಹೊಲಯದಲ್ಲಿ ಟೆಂಟ್ ಹಾಕೊಂಡಿದ್ರು. ಪ್ರತಿನಿತ್ಯ ಅಮಾಯಕ ರೀತಿಯಲ್ಲಿ ಬಸ್ ಏರಿ ಬಂದು ಐಟಿಬಿಟಿ ಸೆಕ್ಟರ್ ಏರಿಗಳಲ್ಲಿ ರೌಂಡ್ಸ್ ಮಾಡ್ತಿದ್ರು. ಹೀಗೆ ರಶ್ ಬಸ್‌ಗಳಲ್ಲಿ ಕೈಚಳಕ ತೋರಿಸಿ ಸೀದಾ ಊರಿಗೆ ವಾಪಸ್ ಆಗ್ತಿದ್ರು.

ಇದೀಗ ಖತರ್ನಾಕ್ ಲೇಡಿ ಗ್ಯಾಂಗ್ ಪೊಲೀಸ್ ಬಲೆಗೆ ಬಿದ್ದಿದೆ. ಅಷ್ಟಕ್ಕೂ ಲೇಡಿ ಗ್ಯಾಂಗ್ ಮಾಡ್ತಿದ್ದ ಕೆಲಸವೇನು ಅಂತ ನೀವೇ ನೋಡಿ..

ಹೀಗೆ ಸಾಲಾಗಿ ಕಲರ್ ಫುಲ್ ಆಗಿ ಜೋಡಿಸಿರೋ ಮೊಬೈಲ್ ಗಳು..ಐಪೋನ್ ಗಳ ಜೊತೆ ಕಾಸ್ಟ್ಲಿ ಆಂಡ್ರಾಯ್ಡ್ ಮೊಬೈಲ್ ಗಳು ಸಹ ಇವೆ. ಈ ಮೊಬೈಲ್ ಗಳನ್ನ ಪರಿಶೀಲಿಸ್ತಿರೋ ಸಿಟಿ ಪೊಲಿಸ್ ಕಮಿಷನರ್… ಅರೆ ಇದೇನಪ್ಪಾ ಮೊಬೈಲ್ ಮೇಳ ನಡಿತಿದ್ಯಾ ಅನ್ಕೊಂಡ್ರಾ..ಇದು ಕಳ್ಳತನ ಮಾಡಿದ್ದ ಮೊಬೈಲ್ ಗಳು

ಹೌದು, ವೈಟ್ ಫೀಲ್ಡ್ ವಿಭಾಗದ ನಲ್ಲಿ ಕೈಚಳಕ ತೋರಿಸಿ ಮೊಬೈಲ್ ಕಳ್ಳತನ ಮಾಡ್ತಿದ್ದ ಖತರ್ನಾಕ್ ಲೇಡಿಗ್ಯಾಂಗ್ ನ್ನ ಮಹದೇವಪುರ ಪೊಲೀಸ್ರು ಬಂಧಿಸಿದ್ದಾರೆ. ರಾಧ, ನಂದಿನಿ, ಶಂಕ್ರಮ್ಮ, ಸುಜಾತ ಹಾಗೂ ಶಾಂತಮ್ಮ ಬಂಧಿತ ಆರೋಪಿಗಳು. ಈ ಕಿಲಾಡಿ ಲೇಡಿ ಗ್ಯಾಂಗ್ ಎರಡ್ಮೂರು ವರ್ಷಗಳಿಂದ ವೈಟ್ ಫೀಲ್ಡ್, ಮಹದೇವಪುರ ಭಾಗದಲ್ಲಿ ರಶ್ ಬಸ್‌ಗಳ ಬಳಿ ಪ್ರಯಾಣಿಕರಂತೆ ಹಾಗೂ ಕೆಲ ವೇಳೆ ಭಿಕ್ಷೆ ಬೇಡುವಂತೆ ವರ್ತನೆ ಮಾಡ್ತಿದ್ರು. ರಶ್‌ ಬಸ್‌ಗಳು ಬರ್ತಿದ್ದಂತೆ ಸೀದಾ ಬಸ್ ಹತ್ತಿದಂತೆ ತಳ್ಳಾಡಿಕೊಂಡು ಕ್ಷಣಾರ್ಧದಲ್ಲಿ ಮೊಬೈಲ್ ಎಗರಿಸಿ ಹಾಗೇ ಬಸ್ ನಿಂದ ಇಳಿದುಬಿಡ್ತಿದ್ರು. ಇದೇ ರೀತಿ ನೂರಾರು ಮೊಬೈಲ್‌ಗಳನ್ನ ಕಳ್ಳತನ ಮಾಡಿ ಅನಂತಪುರಕ್ಕೆ ಸಪ್ಲೈ ಮಾಡ್ತಿದ್ರು. ಇನ್ನು ಈ ಖತರ್ನಾಕ್ ಗ್ಯಾಂಗ್ ಹೊಸಕೋಟೆಯ ಚೊಕ್ಕಹಳ್ಳಿ ಬಳಿ ಟೆಂಟ್ ಹಾಕೊಂಡಿದ್ರು. ಆ ಬಳಿಕ ಅಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡ್ತಿದ್ರು. ಕಳ್ಳತನ ಮಾಡಿದ ಕೂಡಲೇ ಮೊಬೈಲ್ ಗಳನ್ನ ಸಿಲ್ವರ್ ಕವರ್ ನಲ್ಲಿ ಪ್ಯಾಕಿಂಗ್ ಮಾಡಿ, ಬ್ಯಾಗ್ ಗಳಲ್ಲಿ ಇಟ್ಟುಕೊಂಡು ಹೋಗ್ತಿದ್ರು. ಹಾಗೇ ವಾರಕ್ಕೊಮ್ಮೆ ಅನಂತಪುರದಿಂದ ಬರ್ತಿದ್ದ ವ್ಯಕ್ತಿಗೆ ಮಾರಾಟ ಮಾಡ್ತಿದ್ದದ್ದು ಬೆಳಕಿಗೆ ಬಂದಿದೆ. ಸದ್ಯ ಲೇಡಿಗ್ಯಾಂಗ್ ನಿಂದ ಮೂವತ್ತು ಲಕ್ಷ ಮೌಲ್ಯದ 120 ಮೊಬೈಲ್ ಗಳನ್ನ ಮಹದೇವಪುರ ಪೊಲೀಸ್ರು ಜಪ್ತಿ ಮಾಡಿದ್ದಾರೆ.ಇನ್ನು ಪ್ರಮುಖ ಆರೋಪಿ ರಾಧ ಸುಲಭವಾಗಿ ಹೆಚ್ಚು ಹಣ ಮಾಡುವ ಸಲುವಾಗಿ ಗ್ಯಾಂಗ್ ಮಾಡಿಕೊಂಡು ಹೆಚ್ಚು ಮೊಬೈಲ್ ಗಳ ಕಳ್ಳತನ ಮಾಡಿಸ್ತಿದ್ಲು. ಸದ್ಯ ಅನಂತಪುರಂ ಗೆ ತೆರಳಿರೋ ಪೊಲೀಸ್ರು ಮೊಬೈಲ್ ಗಳನ್ನ ರಿಸಿವ್ ಮಾಡಿಕೊಳ್ತಿದ್ದವನಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಜೊತೆಗೆ ಐದು ಮಂದಿ ಲೇಡಿ ಗ್ಯಾಂಗ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗ್ತಿದೆ..

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *