ಹುಬ್ಬಳ್ಳಿ:ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ಪೋರೆಟರ್ ಮಗಳ ಕೊಲೆ ಆಯ್ತಾ ಎಂಬುವಂತ ಶಂಕೆ ವ್ಯಕ್ತವಾಗಿದ್ದು, ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಫಯಾಜ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಫಯಾಜ್ ಎಂಬುವನೇ ನೇಹಾ ಕುತ್ತಿಗೆಯ ಎರಡು ಕಡೆ ಚಾಕು ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಬಿವಿಬಿ ಕಾಲೇಜ್ ನಲ್ಲಿ MCA ಓದುತ್ತಿರೋ ನೇಹಾ ಹಿರೇಮಠಗೆ ಅದೇ ಕಾಲೇಜ್ ನಲ್ಲಿ BCA ಓದುತ್ತಿರುವ ಫಯಾಜ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿರುವ ಫಯಾಜ್ ಕಳೆದ ಕೆಲ ದಿನಗಳಿಂದ ನೇಹಾಗೆ ಬೆನ್ನು ಬಿದ್ದಿದ್ದ ಫಯಾಜ್, ಪ್ರೀತಿಗೆ ನಿರಾಕರಣೆ ಮಾಡಿರೋ ಹಿನ್ನಲೆ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿ ಪರಾರಿಯಾಗುತ್ತಿದ್ದ ಫಯಾಜ್ ನನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
Check Also
ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ
ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …
bigtvnews | Hubli Dharwad News | Kannada News | Karnataka News Hubli News | News In Hubli | Local news

