ಇತ್ತೀಚಿಗೆ ತಣ್ಣಗಾದ ಹಳೆ ಹುಬ್ಬಳ್ಳಿ ಪ್ರಕರಣಗಳ ಮಧ್ಯೆ ಇದೀಗ ಒಂದಿಷ್ಟು ಸ್ಥಳೀಯ ಯುವಕರಿಂದ ಹೊಡೆದಾಟ ಪ್ರಕರಣವು ಬೆಳಕಿಗೆ ಬಂದಿದೆ.
ಮಾರ್ಚ್ 5ರಂದು ಸುಮಾರು ರಾತ್ರಿ 11:30ಕ್ಕೆ ತಿಮ್ಮಸಾಗರ ರೋಡ್ ಐ.ಟಿ.ಐ ಕಾಲೇಜ್ ಹತ್ತಿರ ಕಾಲೇಜು ಯುವಕರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣವು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಂಟು ಜನ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿತರಾದ : ದೀಪಕ್ ಪೂಜಾರ್,ರಾಘವೇಂದ್ರ ಪೂಜಾರ್, ಅಮರ್ ಪೂಜಾರ್, ಶಂಕರ್ ಜಿತೂರಿ, ವಿಘ್ನೇಶ್ ಕೆಸರ್ ಕರ್, ಸಚಿನ್ ಹನುಮನಹಳ್ಳಿ, ಕುಶಾಲ್ ಬೆಳಂಕರ್, ಸಾಗರ್ ಲಕ್ಕುಂಡಿ ಈ ಎಲ್ಲಾ ಆರೋಪಿಗಳು ತಿಮ್ಮಸಾಗರ್ ರೋಡ್ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿರುತ್ತಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ಎನ್.ಸಿಂಧೂರ, ಪೋಲಿಸ್ ಸಬ್ ಇನ್ಸ್ಪೆಕ್ಟರ್ ಬಿ.ಎನ್. ಸಾತಣ್ಣನವರ್ ಹಾಗೂ ಸಿಬ್ಬಂದಿ ಜನರನ್ನು ಮಾನ್ಯ ಪೋಲಿಸ್ ಆಯುಕ್ತಕರು ಅಭಿನಂದಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

