ಅವಳಿ ನಗರದಲ್ಲಿ ಆರಕ್ಷಕರ ಹದ್ದಿನ ಕಣ್ಣು ಕೊಲೆಗೆ ಸಂಚು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು ಇದು ಅವಳಿ ನಗರ ಪೊಲೀಸರ ಹೊಸ ಅಧ್ಯಾಯ ಅಸಮರ್ಥ ಅಧಿಕಾರಿ ಎಂದವರು ನೋಡಲೇ ಬೇಕಾದ ಈ ಸುದ್ದಿ.. ಹುಬ್ಬಳ್ಳಿ: ಕೊಲೆಗೆ ಸಂಚು ರೂಪಿಸಿದ ಆರು ಜನರನ್ನು ಆಯುಧ ಸಮೇತವಾಗಿ ಬಂಧಿಸುವಲ್ಲಿ ಹಳೇಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.6 ಜನ ಕೊಲೆಗೆ ಸಂಚು ರೂಪಿಸಿದವರ ಬಂಧಿಸಿದ್ದು, ಬಂಧಿತರಿಂದ ಒಂದು ಅಟೋ ರಿಕ್ಷಾ, 2 ಮೋಟಾರ ಸೈಕಲ್, 2 ತಲವಾರ ಹಾಗೂ 2 ಚಾಕುಗಳ ವಶಕ್ಕೆ ಪಡೆದಿದ್ದಾರೆ. ಹಳೇಹುಬ್ಬಳ್ಳಿ

ಠಾಣಾ ವ್ಯಾಪ್ತಿಯ ಸಿದ್ದಾರೂಢ ಮಠದ ದ್ವಾರ ಬಾಗಿಲ ಹತ್ತಿರ ಕೊಲೆಗೆ ಸಂಚು ರೂಪಿಸಿದವರ ಬಗ್ಗೆ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿತರನ್ನು ಪತ್ತೆ ಹಚ್ಚಿ ಅವರಿಂದ ಒಂದು ಅಟೋ ರಿಕ್ಷಾ, 2 ಮೋಟಾರ ಸೈಕಲ, 2 ತಲವಾರ ಹಾಗೂ 2 ಚಾಕುಗಳನ್ನು ವಶಪಡಿಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಇನ್ನೂ ಪ್ರಕರಣದ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿತರನ್ನು ಪತ್ತೆ ಮಾಡಿದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ, ಪೊಲೀಸ್ ಸಬ್ ಇನ್ಸಪೆಕ್ಟರಗಳು, ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ ಹಾಗೂ ಸಿಬ್ಬಂದಿಯವರ ಕಾರ್ಯವೈಖರಿ ಶ್ಲಾಘಿಸಿ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

