Breaking News

ಅವಳಿ ನಗರದಲ್ಲಿ ಗಾಂಜಾ ಪೆಡ್ಲರುಗಳು ಅಂದರ್…

ಅವಳಿ ನಗರದಲ್ಲಿ ಗಾಂಜಾ ಪೆಡ್ಲರುಗಳು ಅಂದರ್.. ಕಿರಿಯ ಅಧಿಕಾರಿಗಳ ಕಾರ್ಯವೈಕರಿಗೆ ಕಮಿಷನರ್ ಫುಲ್ ಖುಷ್.. ಪೊಲೀಸರಿಗೆ ಆತ್ಮಸ್ಥೈರ್ಯ ಕೊಟ್ಟ ನಂತರ ಧೈರ್ಯದಿಂದ ಕೆಲಸ ಮಾಡಿ ತೋರಿಸಿದ ಆರಕ್ಷಕರು..

ಹುಬ್ಬಳ್ಳಿ: ಅವಳಿ ನಗರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಪೆಡ್ಲರ್ ಗಳನ್ನು ಬಂಧಿಸುವಲ್ಲಿ ಸಿ.ಇ.ಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ನಗರದ ದೇಸಾಯಿ ಓಣಿ ಬಂಕಾಪುರ ಚೌಕ್ ಹತ್ತಿರ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳಾದ ಜುಗರಾಜ್ ಜೈನ್ ಹಾಗೂ ಕುಲದೀಪ್ ಸಿಂಘ್ ನನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.ಬಂಧಿತ ಆರೋಪಿಗಳಿಂದ 1,24,300/- ಕಿಮ್ಮತ್ತಿನ 1243 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡ್ಡು ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಪ್ರಕರಣ

ದಾಖಲಿಸಿಕೊಂಡಿದ್ದಾರೆ.ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಎಸಿಪಿ ಶಿವರಾಜ್ ಕಟಬಾವಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ಶ್ರೀ ಬಿ ಕೆ. ಪಾಟೀಲ ರವರ ನೇತೃತ್ವದಲ್ಲಿ ಪಿ.ಎಸ್ ಐ ಆರ್. ಬಿ. ಪಾಟೀಲ ಮತ್ತು ಸಿಬ್ಬಂದಿ ಎಸ್ ಎಮ್ ಕುರಹಟ್ಟಿ, ಸಿ.ಎಮ್ ಕಂಬಾಳಿಮಠ ಗಿರೀಶ ಬಡಿಗೇರ ಎಸ್. ಕೆ. ಮಾನಕರ, ಆರ್ ಎನ್ ಕೋಳಿ ಎಫ್ ವಾಯ್ ಸುಣಗಾರ ಎಸ್ ವಿ ಅಕ್ಕಿಗುಂದಮಠ, ಮೋಹನ ಈಳಿಗೇರ ರವರನ್ನೊಳಗೊಂಡ ತಂಡವು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದ್ದು ಇವರುಗಳ ಕಾರ್ಯವೈಖರಿಯನ್ನು ಪೋಲಿಸ್ ಆಯುಕ್ತರು ಶ್ಲಾಘಿಸಿದ್ದಾರೆ.

Share News

About Shaikh BigTv

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *