Breaking News

ಇಂದಿನಿಂದ ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆಯ ಬಿಸಿ ಹಾಲು ತಿಂಡಿ ಊಟದ ದರ ಹೆಚ್ಚಳ

ಬೆಂಗಳೂರು: ಇಂದಿನಿಂದ ಹಾಲಿನ ದರ ಜೊತೆಗೆ ತರಕಾರಿ , ಹಾಗೂ ಹೋಟೆಲ್‌ ತಿಂಡಿ , ಊಟದ ದರದಲ್ಲಿ ಸಹ ರೇಟ್‌ ಹೆಚ್ಚಾಗಿದೆ. ಬೆಲೆ ಏರಿಕೆಯ ಬಿಸಿ ಇಂದು ಬೆಳಗಿನಿಂದಲೇ ಜನರಿಗೆ ತಗುಲಿದೆ. ಟೊಮೆಟೊ ಬೆಲೆ ಜಾಸ್ತಿ, ಗ್ಯಾಸ್ ಬೆಲೆ ಏರಿಕೆ, ಹಾಲಿನ ಬೆಲೆ ಹೆಚ್ಚಳ ಇದೀಗ ಹೋಟೆಲ್‌ಗಳ ಸರದಿ ಇದೇ ಆಗಸ್ಟ್ 1ರಿಂದ ಹೋಟೆಲ್‌ಗಳಲ್ಲಿ ಊಟ-ತಿಂಡಿ ಮಾಡುವುದು, ಟೀ-ಕಾಫಿ ಕುಡಿಯುವುದು ದುಬಾರಿಯಾಗಲಿದೆ.

ಕೈ ಗ್ಯಾರಂಟಿ ಘೋಷಣೆ ಹಿನ್ನೆಲೆ ಜನರು ಖುಷಿಯಲ್ಲಿರಬೇಕಾದರೆ, ಕೈ ಸರ್ಕಾರ ಮತ್ತೆ ಶಾಕ್‌ ಮೇಲೆ ಶಾಕ್ ಕೊಡ್ತಿದೆ. ತರಕಾರಿ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದಾರೆ. ಒಂದೇ ವಾರದಲ್ಲಿ ತರಕಾರಿ ಬೆಲೆ ದುಪ್ಪಟ್ಟು ಆಗಿರುವುದು ತಲೆ ನೋವಾಗಿ ಪರಿಣಮಿಸಿದೆ. ಪರಿಣಾಮವಾಗಿ ಹೋಟೆಲ್‌ಗಳಲ್ಲೂ ತಿನಿಸು ದರ ಹೆಚ್ಚಳವಾಗಿದೆ. ಟೊಮೆಟೋ – 150 ರೂ., ಮೆಣಸಿನಕಾಯಿ – 50 ರೂ., ಕ್ಯಾರೆಟ್ – 50 ರೂ., ಶುಂಠಿ – 100 ರೂ., ಹುರಳಿಕಾಳು – 125 ರೂ., ಬದನೆಕಾಯಿ – 60 ರೂ., ಹುಕೋಸು – 50 ರೂ., ಸೌತೆಕಾಯಿ – 40 ರೂ. ಹೀಗೆ ತರಕಾರಿ ದರ ಕೂಡಾ ಜಾಸ್ತಿಯಾಗಿದೆ

ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರದಿಂದ ನೀಡಲಾಗುತ್ತಿರುವ “ಪಂಚ ಗ್ಯಾರೆಂಟಿ”ಗಳ ಖುಷಿ ಬೆನ್ನಲ್ಲೆ ಜನ ಸಾಮಾನ್ಯರಿಗೆ ದರ ಏರಿಕೆ ಶಾಕ್ ಉಂಟಾಗಿದೆ. ಒಂದೆಡೆ ವಿದ್ಯುತ್ ಶಾಕ್, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೊಂದೆಡೆ ತರಕಾರಿ ಅಂಗಡಿಗೆ ಹೋದ್ರು ಶಾಕ್, ದಿನಸಿ ಅಂಗಡಿಗೆ ಹೋದ್ರು ಶಾಕ್! ತಲೆ ಕೆಟ್ಟು ಎಣ್ಣೆ ಅಂಗಡಿಗೆ ಹೋದ್ರು ದರ ಏರಿಕೆ ಜನರನ್ನು ತಲೆ ಗಿರ್ರೆನ್ನಿಸುತ್ತಿದೆ.

ಊಟದ ದರದಲ್ಲಿ ಬೆಲೆಯಲ್ಲಿ 10 ಹೆಚ್ಚಳವಾದ್ರೆ, 5 ರೂ ತಿಂಡಿ ಬೆಲೆಯಲ್ಲಿ ಏರಿಕೆಯಾಗಲಿದೆ. ಕಾಫಿ, ಚಹಾದ ಬೆಲೆ 2 ರೂ. ನಿಂದ 3 ರೂ. ವರೆಗೆ ಹೆಚ್ಚಳವಾಗಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸರ್ಕಾರ ಕಡಿವಾಣ ಹಾಕಬೇಕಿತ್ತು. ಆದ್ರೆ ಈ ಬಗ್ಗೆ ಕ್ರಮ ವಹಿಸದಿರುವುದರಿಂದ ಹೋಟೆಲ್‌ ಗಳು ಬೆಲೆ ಹೆಚ್ಚಿಸುತ್ತಿವೆ ಹೊಟೇಲ್‌ ತಿಂಡಿ- ತಿನಿಸು ಊಟವನ್ನು ಅವಲಂಬಿಸಿರುವ ಬಡ- ಮಧ್ಯಮ ವರ್ಗದವರಿಗೆ ಶೇ.10 ರಷ್ಟು ಬೆಲೆ ಏರಿಕೆ ಕಷ್ಟವಾಗಲಿದೆ. ತಿಂಡಿ ತಿನಿಸುಗಳ ಬೆಲೆ ಏರಿಕೆ ಮಾಡೋದ್ರಿಂದ ಬಡ- ಮಧ್ಯಮ ವರ್ಗದವರ ಕಷ್ಟವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ

Share News

About BigTv News

Check Also

ಕರ್ತವ್ಯ ಆ್ಯಪ್‌ಗೆ ಖಾಕಿ ಕಿಡಿ..! | 24×7 ಡ್ಯೂಟಿ ಪೊಲೀಸರಿಗೆ ಹೊಸ ಹಾಜರಾತಿ ತಲೆನೋವುಹಾಜರಾತಿ ಕಡ್ಡಾಯಕ್ಕೆ ಪೊಲೀಸರ ವಿರೋಧ..!

ಕರ್ತವ್ಯ ಆ್ಯಪ್‌ಗೆ ಪೊಲೀಸರ ನೋ ಎಂಟ್ರಿ! | ಖಾಕಿಗೆ ಹೊಸ ರೂಲ್ಸ್‌ ಮೇಲೆ ಆಕ್ರೋಶ… ಖಾಕಿಗೆ ಕರ್ತವ್ಯ ಆ್ಯಪ್ ಶಾಕ್! …

Leave a Reply

Your email address will not be published. Required fields are marked *