Breaking News
Featured Video Play Icon

ಗ್ಯಾರಂಟಿ ಸರ್ಕಾರದ ಗ್ಯಾರಂಟಿ ಆಫಿಸರ್ :ಪುಡಿ ರೌಡಿಗಳಲ್ಲಿ ನಡುಕ ಶುರು…

ಗ್ಯಾರಂಟಿ ಸರ್ಕಾರದ ಗ್ಯಾರಂಟಿ ಆಫಿಸರ್ :ಪುಡಿ ರೌಡಿಗಳಲ್ಲಿ ನಡುಕ ಶುರು

ನಿನ್ನೆ ವಾರ್ನ್ ಇಂದು ಠಾಣೆಯಲ್ಲಿ ನೀತಿ ಪಾಠ

ಮಾತಾಡಿದ್ದನ್ನ ಮಾಡಿ ತೋರಿಸಿದ ಕಮಿಷನರ್ ಸಾಹೆಬ್ರು… ಓಪನಿಂಗ್ ಹಿಂಗ ಆದ್ರ ಮುಂದ ಸಿಟಿ ಕ್ಲಿನ್ ಆಗಲು ತಡ ಆಗಲ್ಲ ಅಂತ ಜನರು ನಿಟ್ಟುಸಿರು

ಹುಬ್ಬಳ್ಳಿ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿರುವ ವ್ಯಕ್ತಿಗಳ ಬಗ್ಗೆ ಈ ಹಿಂದೆ ಬಂದಿದ್ದ ದೂರು ಹಾಗು ಅಶಾಂತಿ ಗೆ ಕಾರಣವಾದ ಚಟುವಟಿಕರಗಳಲ್ಲಿ ಬಾಗಿ ಆಗಿರುವ ವ್ಯಕ್ತಿಗಳನ್ನ ಗಮನಿಸಿ ಮತ್ತು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಹುಬ್ಬಳ್ಳಿ ನಗರದ ಪೊಲೀಸರಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಸಂಜೆ ಪೊಲೀಸ್ ಏರಿಯಾ ಡಾಮಿನೇಷನ್ ಕ್ರಮ ಕೈಗೊಳ್ಳಲಾಯ್ತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ 33 ಜನ ರೌಡಿ ಷೀಟರ್ ಗಳನ್ನೂ, 17 ಜನ ಹಳೇ MO ಗಳನ್ನೂ, 5 ಜನ ಹಳೆಯ ಗಾಂಝಾ ಮಾರಾಟಗಾರನ್ನೂ ವಶಕ್ಕೆ ಪಡೆಯಲಾಗಿದೆ. ಇವರುಗಳ ಈ ಹಿಂದಿನ ಹಾಗೂ ಇಂದಿನ ನಡವಳಿಕೆ ಹಾಗೂ ಅವರ ಚಟುವಟಿಕೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಇವರುಗಳ ಮೇಲೆ ಸೂಕ್ತ ಕ್ರಮ ಕ್ಕೆ ಮುಂದಾಗಿದ್ದಾರೆ…ಜೊತೆಗೆ ಸಾರ್ವಜನಿಕವಾಗಿ, ಹೊಸ ಲೇ ಔಟ್ ಗಳಲ್ಲಿ, ರಸ್ತೆಗಳಲ್ಲಿ ಕುಳಿತು ಮಧ್ಯವನ್ನು ಸೇವಿಸುತ್ತಿದ್ದ 24 ಜನರನ್ನೂ ವಶಕ್ಕೆ ಪಡೆಯಲಾಗಿದೆ. ಈ ಎಲ್ಲಾ 24 ಜನರ ಮೇಲೆಯೂ ಕಾನೂನು ಕ್ರಮ ಕೈಗೊಂಡಿದ್ದಾರೆ… ಈ ಕಾರ್ಯವನ್ನು ಪೊಲೀಸ್ ಕಮೀಷನರ್ ಶಶಿಕುಮಾರ್ IPS ಇವರ ಆದೇಶದಂತೆ ಡಿಸಿಪಿ ( ಕಾಸು) ಡಿಸಿಪಿ (ಅ ಸಂ) ಹಾಗೂ ಹುಬ್ಬಳ್ಳಿ ಸಿಸಿಬಿ ಹಾಗೂ ದಕ್ಷಿಣ ಉಪ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು. ಈ ರೀತಿಯ ಕಾರ್ಯವನ್ನು ಮುಂದೆಯೂ ನಿರಂತರವಾಗಿ ಕೈಗೊಳ್ಳಲಾಗುವದು ಎಂದು ಪೊಲೀಸ್ ಅಧಿಕಾರಿಗಳು ತಿಳಿದಿದ್ದಾರೆ….

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *