ಧಾರವಾಡ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ ವತಿಯಿಂದ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗಾಗಿ ಅಪ್ರಕಟಿತ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ ಎಂದು ಮಲ್ಲಿಕಾರ್ಜುನ ಹಿರೇಮಠ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಪ್ರಶಸ್ತಿಯು 20,000/- ರೂ. ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ
ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಕನ್ನಡದ ಹಿರಿಯ-ಕಿರಿಯ ಲೇಖಕರೆಲ್ಲ ಅಪ್ರಕಟಿತ ಕಥೆಗಳು ಮತ್ತು ನಿಯತಕಾಲಿಕಗಳು, ವಿಶೇಷಾಂಕಗಳಲ್ಲಿ ಪ್ರಕಟವಾದ ಆದರೆ ಪುಸ್ತಕ ರೂಪದಲ್ಲಿ ಪ್ರಕಟವಾಗದಿರುವ ಕಥೆಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು ಎಂದರು,
ಸ್ಪರ್ಧಿಗಳು ಕಡ್ಡಾಯವಾಗಿ 12 ಫಾಂಟು ಸೈಜಿನಲ್ಲಿ, A-4 ಅಳತೆಯ ಕಾಗದದಲ್ಲಿ, 80-120 ಪುಟಗಳಿಗೆ ಮೀರದಂತೆ ಟೈಪು ಮಾಡಿ, ಬೈಂಡು ಮಾಡಲಾದ ಕಥೆಗಳ ಮೂರು ಪ್ರತಿಗಳನ್ನು ನವೆಂಬರ್ 12, 2023ರೊಳಗೆ ನಮ್ಮ ವಿಳಾಸಕ್ಕೆ ಕಳಿಸಬೇಕು. ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ವೇದಿಕೆಯ ಸಂಚಾಲಕರನ್ನು ಸಂಪರ್ಕಿಸಿಸಲು ಕೋರಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news




