ಗೂಡ್ಸ್ ಗಾಡಿಯಲ್ಲಿ ತಲ್ವಾರ್ ಕಂಬಿ ಹಿಂದೆ ಡ್ರೈವರ್…
ತೋಗರಿ ತಿಪ್ಪನ ಕಥೆ ಕಟ್ಟಲು ಹೊರಟವನಿಗೆ ಹೆಡಮುರಿ ಕಟ್ಟಿದ ಪೊಲೀಸರು..
ಅವಳಿ ನಗರದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಕಮಿಷನರ್ ಕಾರ್ಯ ವೈಖರಿ
ಹುಬ್ಬಳ್ಳಿ ಗೂಡ್ಸ್ ವಾಹನ ದಲ್ಲಿ ತಲವಾರ ಇಟ್ಟುಕೊಂಡು ಓಡಾಡುತ್ತಿರುವವನಿಗೆ ಎಪಿಎಂಸಿ ಪೋಲೀಸರಿಂದ ಬಂಧನ: ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಯಾರ್ಡ್ ನಲ್ಲಿ ಟಾಟಾ ಇಂಟ್ರಾ ಗೂಡ್ಸ್ ವಾಹನ ದಲ್ಲಿ ಮಾರಕಾಸ್ತ್ರವನ್ನು ಇಟ್ಟುಕೊಂಡು ಸಂಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ

ಎಪಿಎಂಸಿ ನವನಗರ ಪೊಲೀಸ್ ಠಾಣೆಯ ಪಿಐ ಸಮಿವುಲ್ಲಾ ಕೆ. ರವರ ನೇತೃತ್ವದ ಸಿಬ್ಬಂದಿಗಳನ್ನು ಒಳಗೊಂಡ ತಂಡವು ದಾಳಿ ನಡೆಸಿದ್ದು, ಪರಿಶೀಲನೆ ವೇಳೆ ವಾಹನದಲ್ಲಿ ಎರಡು ಫುಟ್ ಉದ್ಧದ ತಲವಾರ್ ಕಂಡುಬಂದಿದ್ದು, ಮಾರಕಾಸ್ತ್ರವನ್ನು ವಶಪಡಿಸಿಕೊಂಡು, ಆರೋಪಿಯನ್ನ ಬಂಧಿಸಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ ಎಂದು ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಅವರು ತಿಳಿಸಿದ್ದಾರೆ.ಬಂಧಿತನನ್ನು ತಿಪ್ಪಣ್ಣ ತಂದೆ ಭೀಮಪ್ಪ ಶಿಶನಳ್ಳಿ. ಸಾ- ರಾಯಪುರ, ಧಾರವಾಡ. (25) ಎಂದು ಗುರುತಿಸಿಲಾಗಿದೆ.ಹುಬ್ಬಳ್ಳಿ ಧಾರವಾಡ ಅವಳಿ ನಗರದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಶಾಂತಿ ಭಂಗ ಮಾಡುವ ಸಾರ್ವಜನಿಕರಿಗೆ ಭೀತಿ ಉಂಟುಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುತ್ತಿರುವುದು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. APMC ನವನಗರ ಪೊಲೀಸ್ ಠಾಣೆಯ ಪಿಐ ನೇತೃತ್ವದ ತಂಡದ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ ಆಯುಕ್ತರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

