ಕಲಬುರಗಿ. ಮೃತ ಇಂಜಿನಿಯರ್ ವರ್ಗಾಮಾಡಿ ನಗರಾಭಿವೃದ್ಧಿ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಹೌದು, ಜನವರಿಯಲ್ಲಿ ಮೃತಪಟ್ಟ ಇಂಜಿನಿಯರ್ ನನ್ನ ಕೊಡಗಿಗೆ ಜುಲೈ 9 ರಂದು ಸರ್ಕಾರ ವರ್ಗಾವಣೆ ಆದೇಶ ಮಾಡಿದ್ದು, ಆದೇಶ ಬೆನ್ನಲ್ಲೇ ಮಹಾ ಎಡವಟ್ಟು ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್, ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದರು… ಆದರೆ

ರಾಜ್ಯ ಸರ್ಕಾರ ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ನೀಡಿದೆ.ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಈ ಎಡವಟ್ಟು ನಡೆದಿದ್ದು, ಇಲಾಖೆಯ ನೌಕರ ಮೃತಪಟ್ಟಿದ್ದರು ಮಾಹಿತಿ ಇರಲಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಂದಹಾಗೇ ಜನವರಿ 12 ರಂದು ಅಶೋಕ್ ಮೃತಪಟ್ಟಿದ್ದರು, ಆದರೆ ಮೃತ ವ್ಯಕ್ತಿಯನ್ನ ವರ್ಗಾವಣೆ ಮಾಡಿ ಇಲಾಖೆ ಮುಜುಗರಕ್ಕೀಡಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

