ನೊಂದು ಬೆಂದವರಿಗೆ ಭರವಸೆಯ ನುಡಿಅನ್ಯಾಯ ಸಹಿಸಲ್ಲ …ನ್ಯಾಯ ಸಾಯಲು ಬಿಡಲ್ಲ ..ಇದು ಖಡಕ್ ಆಫಿಸರ್ ನಡೆನ್ಯಾಯಕ್ಕಾಗಿ ಕುಳಿತವರಿಗೆ ಆಪತ್ಬಾಂಧವ ನ ಬೇಟೆನಿಮ್ಮಲ್ಲಿ ನಾನು… ನಿಮಗಾಗಿ ನಾನು… ಜನಸ್ನೆಹಿ ಅನ್ನೊ ಪದಕ್ಕೆ ನಿಜವಾದ ಅರ್ಥ ಇದು
ಹುಬ್ಬಳ್ಳಿ ಧಾರವಾಢ ಅವಳಿ ನಗರದ ಪೊಲೀಸ್ ಕಮೀಷನರ್ ಶ್ರೀ N ಶಶಿಕುಮಾರ್, ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಂತಹ ಕೊಲೆ ಪ್ರಕರಣಗಳು, ದರೋಡೆ ಪ್ರಕರಣಗಳು, ಸರಗಳ್ಳತನ ಹಾಗೂ

ಸುಲಿಗೆ ಪ್ರಕರಣಗಳಲ್ಲಿ ಕೃತ್ಯ ನಡೆದಂತಹ ಸ್ಥಳಗಳಿಗೆ ಭೇಟಿ ಮಾಡಿದ್ದಾರೆ ..ಕೃತ್ಯ ನಡೆದ ಸ್ಥಳಗಳ ಪರಿವೀಕ್ಷಣೆ ನಡೆಸಿ ತನಿಖೆಯ ಪ್ರಗತಿಗಳನ್ನು ಪರಿಶೀಲಿಸಿದರು.

ಇಂಥಹ ಕೃತ್ಯಗಳ ತನಿಖೆ ಬಗ್ಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನವನ್ನು ಅಧಿಕಾರಿಗಳಿಗೆ ನೀಡಿದರು. ಅಂತೆಯೇ ಕೃತ್ಯದಲ್ಲಿ ನೊಂದವರನ್ನೂ ಸಹ ಭೇಟಿ ಮಾಡಿ ಅವರುಗಳಿಂದ ಮಾಹಿತಿಯನ್ನು ಪಡೆದುಕೊಂಡು

ಕೃತ್ಯಗಳಿಂದ ನೊಂದಂತಹವರಿಗೆ ಪ್ರಕರಣಗಳ ತನಿಖಾ ಹಂತ ಹಾಗೂ ತನಿಖೆಯ ಪ್ರಗತಿಯನ್ನು ಅವರೊಂದಿಗೆ ವಿನಿಮಯ ಮಾಡಿಕೊಂಡರು.

ಜೊತೆಗೆ ಕೆಲವು ಪ್ರಕರಣಗಳ ಪತ್ತೆಯ ಬಗ್ಗೆ ಸೂಕ್ತ ಸಲಹೆಗಳನ್ನು ಅಧಿಕಾರಿಗಳಿಗೆ ನೀಡಿ ಪತ್ತೆ ಮಾಡಬೇಕೆಂದು ತಾಕೀತು ಮಾಡಿದರು. ಕಮೀಷನರ್ ಅವರೊಂದಿಗೆ ಡಿಸಿಪಿಗಳಾದ M ನಂದಗಾವಿ, IPS ಹಾಗೂ ರವೀಶ್ ಸಿ ಆರ್ ಹಾಗೂ ಆಯಾ ಠಾಣಾ ವ್ಯಾಪ್ತಿಯ ಎಸಿಪಿಗಳು ಹಾಗೂ ಠಾಣಾಧಿಕಾರಿಗಳಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

