ಮೈಸೂರು: ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ. ಅದು ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಇದೆ ಎನ್ನುವ ಮೂಲಕ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿದರು.
ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟದ ನಿರ್ವಹಣೆ ಸಂಬಂಧ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸರ್ಕಾರಕ್ಕೆ ಪತ್ರ ಬರೆದಿದ್ದರು.ನಿರ್ವಹಣೆ ಮಾಡಲು ಆಗೋದಿಲ್ಲ ಅಂತಾ ಬರೆದಿದ್ದರು. ಈಗ ನಾವು ನಿರ್ವಹಣೆ ಮಾಡೋ ಬಗ್ಗೆ ನಾನು ಹೆಚ್ಚೇನು ಮಾತಾಡೋದಿಲ್ಲ. ನ್ಯಾಯಾಲಯ, ಸರ್ಕಾರ ಈಗಲೂ ಗ್ರೀನ್ ಸಿಗ್ನಲ್ ಕೊಟ್ಟರೆ ಚಾಮುಂಡಿ ಬೆಟ್ಟವನ್ನ ನಾವೇ ನಿರ್ವಹಣೆ ಮಾಡ್ತೇವೆ. ಬೆಟ್ಟವನ್ನು ಬೆಟ್ಟವಾಗಿಯೇ ಉಳಿಸಿಕೋಳ್ಳಬೇಕು ಅನ್ನೋದು ನಮ್ಮ ವಾದ. ಸರ್ಕಾರಿ ಖರಾಬು ಅಂತಾ ಚಾಮುಂಡಿ ಬೆಟ್ಟವನ್ನು ಮಾಡಲು ಆಗೋದಿಲ್ಲ. ಕೇವಲ ಖರಾಬು ಅಂತಾ ಮಾತ್ರವೇ ಇದೆ. ಆದ್ರೆ ಸರ್ಕಾರಿ ಖರಾಬು, ಖರಾಬು ಅಂತಾ ಇಲ್ಲ. ನಾವು ಸರ್ಕಾರಕ್ಕೆ ಕೊಟ್ಟ ಪ್ರಾಪರ್ಟಿ ಬಿಟ್ಟು ಸರ್ಕಾರಕ್ಕೆ ಕೊಟ್ಟಿರೋ ಬಗ್ಗೆ ನಾವು ಇವಾಗ ಕ್ಲೈಮ್ ಮಾಡೋದಿಲ್ಲ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

