ಬೆಂಗಳೂರ : ಮುಡಾದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ 42ನೇ ಸಿಸಿಹೆಚ್ ಕೋರ್ಟ್ನಲ್ಲಿ ಇಂದು ಖಾಸಗಿ ದೂರು ದಾಖಲಾಗಿದೆ.
ಈ ಹಿಂದೆಯೂ ಮುಡಾ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರಿಗೆ ಅಬ್ರಹಾಂ ಅವರು ಸಿಎಂ ವಿರುದ್ಧ ದೂರು ನೀಡಿದ್ದರು. ಬಳಿಕ ರಾಜ್ಯಪಾಲರು ಸಿಎಂ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು.ಬಳಿಕ ರಾಜ್ಯಪಾಲರ ಶೋಕಾಸ್ ನೋಟಿಸ್ ಸಂಬಂಧ ತುರ್ತು ಸಚಿವ ಸಂಪುಟ ನಡೆಸಲಾಗಿದ್ದು, ಎಲ್ಲಾ ಸಚಿವರು ಸೇರಿ ಅಬ್ರಹಾಂ ನೀಡಿರುವ ದೂರು ಕಾನೂನಾತ್ಮಕವಾಗಿಲ್ಲ. ಅವರ ದೂರನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡುವ ಕುರಿತು ಸಂಪುಟ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿತ್ತು.
ಇನ್ನು ಅಬ್ರಹಾಂ ಎಂಬುವವರ ದೂರಿನಲ್ಲಿ ಹುರುಳಿಲ್ಲ. ಅವರೊಬ್ಬ ಬ್ಲ್ಯಾಕ್ ಮೇಲರ್ ಎಂದೂ ಸಿಎಂ ಗುಡುಗಿದ್ದು ಗೊತ್ತೇ ಇದೆ. ಇದಲ್ಲದೇ ಮೈಸೂರಿನ ಸ್ನೇಹಮಯಿ ಕೃಷ್ಣ ಎಂಬುವವರೂ ಸಿಎಂ ವಿರುದ್ಧ ಕೋರ್ಟ್ನಲ್ಲಿ ಮೊನ್ನೆಯಷ್ಟೇ ಖಾಸಗಿ ದೂರು ನೀಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

