Breaking News

ತುಂಗಭದ್ರಾ ಡ್ಯಾಮ್‌ಗೆ ಮಹತ್ವದ ಸಲಹೆ ನೀಡಿದ ತಜ್ಞರು

ಹೊಸಪೇಟೆ: ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಹರಿಸದೇ ನೀರನ್ನು ಉಳಿಸಿಕೊಂಡು ಸಹ ತುಂಗಭದ್ರಾ ಡ್ಯಾಮ್‌ಗೆ ಹೊಸಗೇಟ್ ಅಳವಡಿಸಬಹುದು ಎಂಬುದಾಗಿ ತಜ್ಞರು ಮಹತ್ವದ ಸಲಹೆ ನೀಡಿದರು.

ನ್ಯಾಷನಲ್ ಡ್ಯಾಮ್ ಗೇಟ್ ಎಕ್ಸಪರ್ಟ್ ಕಣ್ಣಯ್ಯ ನಾಯ್ಡು, ತುಂಗಭದ್ರಾ ಬೋರ್ಡ್ನ ಕಾರ್ಯದರ್ಶಿ, ಕರ್ನಾಟಕ ನೀರಾವರಿ ನಿಗಮದ ಎಂ.ಡಿ., ಕರ್ನಾಟಕ ಹಾಗೂ ಆಂದ್ರ ನೀರಾವರಿ ಇಲಾಖೆ ಕಾರ್ಯದರ್ಶಿ, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್, ನ್ಯಾಷನಲ್ ಡ್ಯಾಮ್ ಸೇಫಟಿ ಏಜೆನ್ಸಿಯ ಮುಖ್ಯ ಎಂಜಿನಿಯರ್, ಜೆಎಸ್‌ಡಬ್ಲೂö್ಯನ ಎಕ್ಸಪರ್ಟ, ಹಿಂದುಸ್ತಾನ್ ಸ್ಟೀಲ್ ವರ್ಕ್, ನಾರಾಯಣ ಸ್ಟೀಲ್ ವರ್ಕ ಗೇಟ್ ತಜ್ಞರು ಸೇರಿದಂತೆ ಇನ್ನೀತರ ತಜ್ಞರೊಂದಿಗೆ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಮಾತುಕತೆ ನಡೆಸಿದರು.

ಈಗ ಹಾಳಾಗಿರುವ ಗೇಟ್ ಒಟ್ಟು 60 ಅಡಿ ಉದ್ದ ಇದೆ. ಇಲ್ಲಿ ತಲಾ 12 ಅಡಿಯ 5 ಸೆಗ್ಮೇಂಟ್‌ಗಳನ್ನು ಕ್ರೇನ್ ಮೂಲಕ ಕೆಳಗಿಳಿಸಿ ನೀರನ್ನು ತಡೆ ಹಿಡಿಯಬಹುದಾಗಿದೆ ಎಂದು ತಜ್ಞರು ಸಲಹೆ ಮಾಡಿದರು. ಜಿಂದಾಲ್ ಸೇರಿದಂತೆ ವಿವಿಧೆಡೆ ಸೆಗ್ಮೇಂಟ್‌ಗಳ ತಯಾರಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Share News

About bigtvnews22

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *