Breaking News

ರಾಜನಗರದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ , ಪಾದಪೂಜಾ ಕಾರ್ಯಕ್ರಮ

ಧಾರವಾಡ: ಸೇವಾ ಭಾರತಿ ರಜತ ಮಹೋತ್ಸವ ಹಾಗೂ 78ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಅಂಗವಾಗಿ ಧಾರವಾಡ ಜಿಲ್ಲೆಯ ರಾಜನಗರದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಪಾದಪೂಜಾ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮ ಉದ್ದೇಶಿಸಿ ಸೇವಾ ಭಾರತಿ ಟ್ರಸ್ಟಿಗಳಾದ ಶ್ರೀ ಮಂಜುನಾಥ ಶಿವಪ್ಪ ಮಕ್ಕಳಗೇರಿ ಸ್ವಾತಂತ್ರ ದಿನೋತ್ಸವ ಮತ್ತು ಸೇವಾ ಭಾರತಿ ಪರಿಚಯಿಸುತ್ತಾ 1999 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಅನಾಥ ಮಕ್ಕಳಿಗೆ ಆಶ್ರಯ ತಾಣ, ಬುದ್ಧಿಮಾಂದ್ಯ ಮಕ್ಕಳಿಗೆ ಶಾಲೆ, ಅನಿವಾರ್ಯ ಕಾರಣದಿಂದ ಬಿಟ್ಟು ಹೋದ ಹಸು ಗುಸುಗಳ ದತ್ತು ಸ್ವೀಕಾರ ಕೇಂದ್ರ, ಸೇವಾ ಬಸ್ತಿ ಹಾಗೂ ಗ್ರಾಮೀಣ ಮಕ್ಕಳಿಗಾಗಿ ಉಚಿತ ಮನೆ ಪಾಠ ಕೇಂದ್ರ ಇತ್ಯಾದಿ ಸೇವಾ ಚಟುವಟಿಕೆಗಳು ನಡೆಸುವ ವಿಷಯವನ್ನು ಸವಿಸ್ತಾರವಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸೇವಾ ಭಾರತಿ ಧಾರವಾಡ ನಗರದ ರಜತ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಶ್ರೀ ಗುರುನಾಥ ವಾಲಿ, ಕಾರ್ಯದರ್ಶಿಗಳಾದ ಶ್ರೀ ಜಗದೀಶ ಯಾದವಾಡ, ಸದಸ್ಯರುಗಳಾದ ರಾಜು ತಳಗೇರಿ ಹಾಗೂ ಮಹಾಂತೇಶ ಚಳ್ಳಾಲ ಮಠ ಉಪಸ್ಥಿತರಿದ್ದರು. ಇವರೊಂದಿಗೆ ಸೇವಾ ಭಾರತೀಯ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಶಂಕರ ಗುಮಾಸ್ತೆ ಹಾಜರಿದ್ದರು.

Share News

About Shaikh BigTv

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *