Breaking News

ಬೈಕ್ ನಲ್ಲಿ ಹೋಗುತ್ತಿದ್ದ ಯೋಧನಿಗೆ ಹೃದಯ ಘಾತ

ಬೆಳಗಾವಿ: ಇಲ್ಲಿಯ ಎಂಎಲ್‌ಐಆರ್‌ಸಿ ಕ್ಯಾಂಪ್‌ನಲ್ಲಿ ಈ ಘಟನೆ ನಡೆದಿದೆ. ಹೃದಯಾಘಾತದಿಂದ ಸುನೀಲ್ ಸಲಾಂ (37) ಎಂಬುವವರು ಮೃತಪಟ್ಟಿದ್ದಾರೆ. ಸುನೀಲ್‌ ಮರಾಠ ಲಘು ಪದಾತಿದಳಲ್ಲಿ ಹವಾಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ದಿಢೀರ್‌ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯೋಧ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸಹಿಸಲು ಆಗದ ಎದೆನೋವು ಕಾಣಿಸಿಕೊಂಡಿದೆ. ಬೈಕ್‌ ನಿಧಾನಿಸಿ ಎದೆ ಸವಾರಿಕೊಂಡು ನಿಲ್ಲಲ್ಲು ಯತ್ನಿಸಿದ್ದಾರೆ. ಆದರೆ ಕರುಣೆಯೇ ಇಲ್ಲದ ಹೃದಯ ತನ್ನ ಬಡಿತವನ್ನು ನಿಲ್ಲಿಸಿತ್ತು. ನೋಡನೋಡುತ್ತಲೇ ಆ ಯೋಧ ರಸ್ತೆ ಬದಿಗೆ ಕುಸಿದು ಬಿದ್ದಿದ್ದರು. ಸಾವಿನ ಕ್ಷಣವು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಬೈಕ್‌ ಚಲಿಸುತ್ತಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿದೆ. ಎದೆಯನ್ನು ಸವರಿಸಿಕೊಳ್ಳುತ್ತಲೇ ಬ್ರೇಕ್‌ ಹಿಡಿದು ಬೈಕ್‌ ನಿಧಾನ ಮಾಡಿದ್ದಾರೆ. ಆದರೆ ನಡುರಸ್ತೆಯಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸುನೀಲ್‌ ಅವರು ಬೈಕ್‌ನಿಂದ ರಸ್ತೆ ಬದಿಗೆ ಬೀಳುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *