Breaking News

admin

ಇಳೆಕೆ ಕಂಡ ಕೊರೋನಾ ಪ್ರಕರಣ

ಬೆಂಗಳೂರು : ಕೊರೋನಾ ಒಟ್ಟು 136 ಕೇಸ್ ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇತ್ತೀಚೆಗೆ ಪಾಸಿಟಿವ್ ಕೇಸ್ಗಳ ಸಂಖ್ಯೆ ಇಳಿಕೆ ಕಂಡರೂ, ಮರಣ ಪ್ರಕರಣ ಕಡಿಮೆಯಾಗಿರಲಿಲ್ಲ. ಇಂದು ಮರಣ ಪ್ರಕರಣ ಕೂಡ ಇಳಿಕೆ ಕಂಡಿದೆ. ಈ ಮೂಲಕ ಕೋವಿಡ್-19 ಮರಣ ಪ್ರಮಾಣ ಶೇ.1.47% ರಷ್ಟಿದೆ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಗದಗ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ. ಮಂಡ್ಯ, ರಾಯಚೂರು, ಉಡುಪಿ ಹಾಗೂ ವಿಜಯಪುರದಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

Read More »

ದುಗ್ಗಮ್ಮ ದೇವಿ ಜಾತ್ರೆಗೆ ಸಕಲ ಸಿದ್ಧತೆ

ದಾಮಾ. 13ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ .ಐತಿಹಾಸಿಕ ಪ್ರಸಿದ್ಧ ನಗರದೇವತೆ ಶ್ರೀ ದುಗ್ಗಮ್ಮ ದೇವಿ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದರು. ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಜಾತ್ರೆ ಕುರಿತು ಅವರು ಮಾಹಿತಿ ನೀಡಿದರು. ಮಾ. 13ರಿಂದ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಮೊದಲ ದಿನ ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ ನಂತರ ರಾತ್ರಿ ಸಾರು ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದರು.

Read More »

ಮೋದಿ ಇಲ್ಲದಿದ್ದರೆ ಉಕ್ರೇನ್ ನಲ್ಲಿ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿದ್ದರು : ತೇಜಸ್ವಿ ಸೂರ್ಯ

ಬೆಂಗಳೂರು : ‘ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ ನಲ್ಲಿಸಾವನ್ನಪ್ಪುತ್ತಿದ್ದರು’ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು. ಯುದ್ಧಪೀಡಿತ ಉಕ್ರೇನ್ʼನಲ್ಲಿ ಭಾರತದ ಸ್ಥಳಾಂತರ ಪ್ರಯತ್ನವಾದ ಆಪರೇಶನ್ ಗಂಗಾ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ವೇಳೆ ‘19,000 ವಿದ್ಯಾರ್ಥಿಗಳಲ್ಲಿ ನಾವು ಕೇವಲ ಒಬ್ಬ ನವೀನ್ ಅವರನ್ನ ಕಳೆದುಕೊಂಡಿದ್ದೇವೆ. ಸ್ಥಳಾಂತರ ಸರಿಯಾಗಿ ನಡೆಯದಿದ್ದರೆ, ನಾವು ಹೆಚ್ಚು ನವೀನ್ʼರನ್ನ ಕಳೆದುಕೊಳ್ಳಬೇಕಿತ್ತು. ಮೋದಿ …

Read More »

ಸಿ.ಎಂ.ಇಬ್ರಾಹಿಂ ರಾಜಿನಾಮೆ ಕುರಿತು ಮಾಜಿ ಸಿಎಂ ಪ್ರತಿಕ್ರಿಯೆ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆ ಪತ್ರ ನನಗೆ ತಲುಪಿಲ್ಲ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆ ಪತ್ರ ನನಗೆ ತಲುಪಿಲ್ಲ. ಪತ್ರ ಬಂದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಶನಿವಾರ …

Read More »

ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು: ವ್ಯಕ್ತಿ ಸಜೀವ ದಹನ

ಬೆಂಗಳೂರು : ಕಾರೊಂದು ನಡುರಸ್ತೆಯಲ್ಲಿ ಹೊತ್ತಿ ಉರಿದು ವ್ಯಕ್ತಿಯೊಬ್ಬರು ಸಜೀವ ದಹನವಾಗಿರುವ ಘಟನೆ ನಗರದ ನೈಸ್ ರಸ್ತೆಯ ಚನ್ನಸಂದ್ರದ ಬಳಿ ನಡು ರಸ್ತೆಯಲ್ಲಿ ನಡೆದಿದೆ. ಕಾರಿನಲ್ಲಿದ್ದ ದರ್ಶನ್ (40) ಸುಟ್ಟು ಕರಕಲಾದ ನತ ದೃಷ್ಟ . ಕೂಡಲೇ ಸ್ಥಳೀಯರು ನೈಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ನೈಸ್ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆರ್. ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಬೆಂಗಳೂರು ಉತ್ತರ ವಿಭಾಗದ ಸಂಚಾರಿ ಡಿಸಿಪಿ …

Read More »

ಏಕಾಏಕಿ 12 ಸಾವಿರ ಸೈನಿಕರನ್ನು ರಷ್ಯಾದ ಗಡಿಗೆ ನಿಯೋಜಿಸಿದ ಅಮೆರಿಕ ಅಧ್ಯಕ್ಷ

ಕೀವ್‌/ಮಾಸ್ಕೋ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಶನಿವಾರ ಏಕಾಏಕಿ ತನ್ನ 12 ಸಾವಿರ ಸೈನಿಕರನ್ನು ರಷ್ಯಾದ ಗಡಿ ಯುದ್ದಕ್ಕೂ ನಿಯೋಜಿಸಿದ್ದಾರೆ. ರಷ್ಯಾದೊಂದಿಗೆ ಗಡಿ ಹಂಚಿಕೊಂಡಿರುವ ಲಾಟ್ವಿಯಾ ಎಸ್ಟೋನಿಯಾ, ಲಿಥುವೇನಿಯಾ, ರೊಮೇನಿಯಾ ದೇಶಗಳಲ್ಲಿ ಅಮೆರಿಕದ ಸೇನೆಗಳಿವೆ. ಜತೆಗೆ, ಉಕ್ರೇನ್‌ನಲ್ಲಿ ಆರಂಭಿಸಿರುವ ಯುದ್ಧವು ಪುತಿನ್‌ಗೆ ಯಾವ ಕಾರಣಕ್ಕೂ ಜಯ ತಂದುಕೊಡುವುದಿಲ್ಲ ಎಂದೂ ಬೈಡೆನ್‌ ಗುಡುಗಿದ್ದಾರೆ. ಸೇನೆ ಜಮಾಯಿಸುವ ಮೂಲಕ ಅಮೆರಿಕವು ರಷ್ಯಾ ವಿರುದ್ಧ ನೇರ ಹೋರಾಟಕ್ಕೆ ಸಜ್ಜಾಗಿರುವ ಸುಳಿವು ನೀಡಿದೆ. ಅಮೆರಿಕವು …

Read More »

ಒಂದೇ ದಿನದಲ್ಲಿ 81 ಜನರನ್ನು ಗಲ್ಲಿಗೇರಿಸಿದ ಸೌದಿ ಅರೇಬಿಯಾ

ರಿಯಾದ್‌: 2021ರಲ್ಲಿ ಸೌದಿಯಲ್ಲಿ 67 ಮಂದಿಗೆ ಮರಣದಂಡನೆ ವಿಧಿಸಲಾಗಿದ್ದು, ಭಯೋತ್ಪಾದನೆ ಸಂಬಂಧಿಸಿದ ವಿವಿಧ ಅಪರಾಧಗಳ ಮೇಲೆ ಒಂದೇ ದಿನದಲ್ಲಿ 81 ಜನರನ್ನು ಗಲ್ಲಿಗೇರಿಸಿರುವುದಾಗಿ ಸೌದಿ ಅರೇಬಿಯಾ ಶನಿವಾರ ಹೇಳಿದೆ. ಇದು 2021 ರಲ್ಲಿ ಜಾರಿಗೆ ತಂದಿದ್ದ ಮರಣದಂಡನೆಗಳಿಗಿಂತಲೂ ಹೆಚ್ಚು ಎಂದು ಸರ್ಕಾರ ತಿಳಿಸಿದೆ. ಶಿಕ್ಷೆಗೊಳಗಾದವರು ಇಸ್ಲಾಮಿಕ್ ಸ್ಟೇಟ್, ಅಲ್-ಖೈದಾ, ಹೌತಿ ಮತ್ತು ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದವರಾಗಿದ್ದರು ಎಂದು ಸೌದಿಯ ಸರ್ಕಾರಿ ಹೇಳಿದೆ. ಮರಣದಂಡನೆಗೆ ಒಳಗಾದವರೆಲ್ಲರೂ ಪ್ರಮುಖ ಸ್ಥಳಗಳ …

Read More »

ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ತೊರೆದರೆ ಆಶ್ಚರ್ಯ ಇಲ್ಲ: ಸಿ.ಟಿ.ರವಿ

ಚಿಕ್ಕಮಗಳೂರು: ಸಿ.ಎಂ.ಇಬ್ರಾಹಿಂ ಕಾಂಗ್ರೆಸ್‌ನಿಂದ ಹೊರಕ್ಕೆ ಕಾಲಿಟ್ಟಿದ್ದಾರೆ’ ‘ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ತೊರೆದರೆ ಆಶ್ಚರ್ಯ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ‘ಅವರೆಲ್ಲ ಬಹಳ ದೋಸ್ತಿಗಳುಇಬ್ರಾಹಿಂ ಅವರನ್ನು ಮುಂದೆ ಕಳುಹಿಸಿ ನಂತರ ಅವರ ಹೋಗಬಹುದು’ ಎಂದು ಕುಟುಕಿದರು.‘ಆಮಿಷವೊಡ್ಡಿ ಪಕ್ಷದ ಸದಸ್ಯತ್ವ ಮಾಡಿಸಿದರೆ ಆ ಸದಸ್ಯರಿಗೆ ಪಕ್ಷ ಬದ್ಧತೆ ಇರಲ್ಲ. ಪಕ್ಷದ ವಿಚಾರಧಾರೆ, ನಾಯಕತ್ವದ ಮೇಲೆ ನಂಬಿಕೆ ಇಟ್ಟು ಸದಸ್ಯರಾದವರು ಮಾತ್ರ ಪಕ್ಷದಲ್ಲಿ ಉಳಿದುಕೊಳ್ಳುತ್ತಾರೆ. ಕಾಂಗ್ರೆಸ್‌ನಲ್ಲಿ …

Read More »

ಕುಮಾರಸ್ವಾಮಿ ಕುರಿತು ಟೀಕೆ ಮಾಡಿದ‌ ಡಿ.ಕೆ. ಸುರೇಶ್‌

ರಾಮನಗರ: ಈಗಲ್‌ಟನ್ ರೆಸಾರ್ಟ್‌ ವಿವಾದದ ಬಗ್ಗೆ ಸದನದಲ್ಲಿ ಕುಮಾರಸ್ವಾಮಿ-ಸಿದ್ದರಾಮಯ್ಯ ನಡುವಿನ ವಾಗ್ವಾದ ಕುರಿತು ಶುಕ್ರವಾರ ಇಲ್ಲಿ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್‌, ‘ಈಗಲ್‌ಟನ್‌ ಪರವಾಗಿ ಮಾತನಾಡುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರ ನಿಜವಾದ ಬಣ್ಣ ಬಯಲಾಗಿದೆ’ ಎಂದು  ಲೇವಡಿ ಮಾಡಿದರು. ‘ದಂಡ ಹೆಚ್ಚಾಗಿ ಹಾಕಿರುವುದಕ್ಕೆ ಅವರಿಗೆ ಏನು ತೊಂದರೆ ಆಗಿದೆಯೋ ಗೊತ್ತಿಲ್ಲ. ಸರ್ಕಾರ ಹಾಗೂ ಜಿಲ್ಲಾಧಿಕಾರಿ ಸೇರಿ ಕಾನೂನಿನ ಪ್ರಕಾರ ದಂಡ ನಿಗದಿ ಮಾಡಿದ್ದಾರೆ. ರೆಸಾರ್ಟ್‌ನವರು …

Read More »

ರೈಲಿಗೆ ತೆಲೆಕೊಟ್ಟು ಸಾವಿನಲ್ಲಿ ಒಂದಾಂದ ದಂಪತಿಗಳು

ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಲಿಸುವ ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ. ರೇಲ್ವೆ ನಿಲ್ದಾಣದ ಕೂಗಳತೆ ದೂರದಲ್ಲಿಯೇ ದಂಪತಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕೆಲವೇ ಸಮಯದ ಹಿಂದೆ ಬೆಳಕಿಗೆ ಬಂದಿದೆ. ಸುಮಾರು 35 ರಿಂದ 40 ವಯಸ್ಸಿನ ಮಹಿಳೆ ಹಾಗೂ 45ರಿಂದ 50 ವಯಸ್ಸಿನ ಪುರುಷ ಸಾವಿಗೀಡಾಗಿದ್ದು, ದಂಪತಿಗಳು ನೊಂದು …

Read More »