Breaking News

admin

ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ ಇಂದು ಸಿಎಂ ಚಾಲನೆ

ಚಿಕ್ಕಬಳ್ಳಾಪುರ : ತಾಲ್ಲೂಕಿನ ನಂದಿ ಹೋಬಳಿಯ ಪೋಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಗಿರ್ಲಹಳ್ಳಿ ಗ್ರಾಮದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ‘ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ’ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಗುಂಗಿರ್ಲಹಳ್ಳಿ (ಮಜರೆ) ಗ್ರಾಮದಲ್ಲಿ 171 ಕುಟುಂಬಗಳಿದ್ದು 977 ಜನರು ವಾಸವಿದ್ದಾರೆ, ಈ ಪೈಕಿ 157 ಖಾತೆದಾರರಿದ್ದಾರೆ. 977 ಜನಸಂಖ್ಯೆ ಯುಳ್ಳ ಈ ಕುಗ್ರಾಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸಿ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ …

Read More »

ರಾಜ್ಯಾದ್ಯಂತ ಗ್ರಾಮ ಒನ್ ಯೋಜನೆ ವಿಸ್ತರಣೆ

ಬೆಂಗಳೂರು: ಸಂಪುಟ ಸಭೆಯಲ್ಲಿ ಗ್ರಾಮ ಒನ್ ಯೋಜನೆ ಬಗ್ಗೆ ಚರ್ಚೆ ನಡೆದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯಿಂದ ಅನುಷ್ಠಾನವಾಗುತ್ತಿರುವ ಯೋಜನೆಯನ್ನು ಎಲ್ಲ ಗ್ರಾಮಗಳಿಗೂ ಗ್ರಾಮ ಒನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕೆಂದು ತೀರ್ವನಿಸಲಾಯಿತು. ನಮ್ಮ ಸರ್ಕಾರ ಗ್ರಾಮೀಣ ಜನರಿಗೆ ಪಂಚಾಯಿತಿ ಹಂತದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಯೋಜನೆಯನ್ನು ಜಾರಿಗೊಳಿಸಿದೆ. ತಂತ್ರಜ್ಞಾನ ಆಧಾರಿತ ಈ ಕಾರ್ಯಕ್ರಮ ಹೆಚ್ಚು ಪಾರದರ್ಶಕ ಹಾಗೂ ಜನಸ್ನೇಹಿಯಾಗಿದೆ. ಜನರ ಅಲೆದಾಟ ತಪ್ಪಿಸಲಿದೆ ಎಂದು …

Read More »

ಇಂದಿನಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ ಪ್ರಾರಂಭ

ಬೆಂಗಳೂರು:ಮಾ. 12ರಿಂದ 16ರ ವರೆಗೆ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ ನಡೆಯಲಿದೆ.ಮೊದಲ ದಿನ ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆ ಕಡ್ಡಾಯವಾಗಿದ್ದು, ಅರೆತೋಳಿನ ಬಟ್ಟೆಗಳನ್ನು ತೊಡಬೇಕು ಮತ್ತು ಆಭರಣಗಳನ್ನು ಧರಿಸದಂತೆ ಕಡ್ಡಾಯ ಸೂಚನೆ ನೀಡಲಾಗಿದೆ.

Read More »

ಶೀಘ್ರ ಕಾಮಗಾರಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

ಹುಬ್ಬಳ್ಳಿ :ಸ್ಮಾರ್ಟ್ ಸಿಟಿ ಹಾಗೂ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಹೊಸೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಸ್ಮಾರ್ಟ್ ಸಿಟಿ ಹಾಗೂ ಸಿಆರ್ ಎಫ್ ಅನುದಾದ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ರಸ್ತೆ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಕಾಮಗಾರಿ ಪ್ರಗತಿಯ …

Read More »

ಸಾಲ ಕೇಳಲು ಬಂದ ರೌಡಿ ಶಿಟರ ಮರಣ

ಹುಬ್ಬಳ್ಳಿ; ಸಾಲ ಕೊಟ್ಟ ಹಣ ಕೇಳಲು ಬಂದ ರೌಡಿ ಶಿಟರ ಅಕ್ಬರ್ ೫೦೦೦೦ ರೂ. ಹಣ ನೀಡಿದ್ದ ಮುಲ್ಲಾ ಸದಾನಂದ ಕುರ್ಲಿ( ೩೮) ಗೆ ನನಗೆ ಕೊಡಲು ದುಡ್ಡು ಇರುವುದಿಲ್ಲ ಎಂದು ಸದಾನಂದ ಕುರ್ಲಿ ಇತನು ಹೇಳಿದ್ದ ಇದರಿಂದ ಕುಪಿತನಾಗಿ ಬೈದಾಡಿ ನಂತರ  ತಂದಿದ್ದ ಮಚ್ಚಿನಿಂದ ಹಲ್ಲೆ ಮಾಡಿದಾಗ ಸದಾನಂದ ಕುರ್ಲಿ ತಪ್ಪಿಸಿಕೊಂಡು ಅದೇ ಆಯುಧದಿಂದ ಸದಾನಂದ ಅಕ್ಬರ್ ಮೇಲೆ ತೆಲೆಗೆ ಹಲ್ಲೆ ಮಾಡಿದ್ದು ಇದರಿಂದ ಸ್ಥಳದಲ್ಲಿ ಅಕ್ಬರ್ ಇತನು …

Read More »

ಹೆಂಡತಿಯನ್ನು ಕೊಂದು ತಾನೂ ನೇಣು ಹಾಕಿಕೊಂಡ ಪತಿ

ಧಾರವಾಡ: ಹೆಂಡತಿಯನ್ನು ಕೊಂದ ಪತಿರಾಯ ಕೊನೆಗೆ ತಾನೂ ನೇಣು ಹಾಕಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಗಣೇಶನಗರದಲ್ಲಿ ಬೆಳ್ಳಂಬೆಳಿಗ್ಗೆ ಈ ಘಟನೆ ನಡೆದಿದ್ದು, ಧಾರವಾಡದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಗಣೇಶನಗರದ ಗೌಳಿ ಜನಾಂಗದ ಮನಿಶಾ ಹಾಗೂ ಶೆಟ್ಟು ಎಂಬ ದಂಪತಿಯೇ ಸಾವಿಗೀಡಾದವರು. ಮೊದಲಿಗೆ ತನ್ನ ಪತ್ನಿಯನ್ನು ಹತ್ಯೆ ಮಾಡಿದ ಶೆಟ್ಟು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಇರಬಹುದು ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು …

Read More »

ಅಖಿಲೇಶ್ ಯಾದವ್ ಗೆ ಭರ್ಜರಿ ಜಯ

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಯ ಎಸ್‌ಪಿ ಸಿಂಗ್ ಬಘೇಲ್ ಅವರನ್ನು 67,000 ಮತಗಳಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಲಿಸಿದ್ದಾರೆ. ತಮ್ಮ ಕುಟುಂಬದ ಭದ್ರಕೋಟೆಯಾದ ಮೈನ್‌ಪುರಿಯ ಕರ್ಹಾಲ್‌ನಿಂದ ಸ್ಪರ್ಧಿಸಿದ್ದುಅಖಿಲೇಶ್ ಯಾದವ್ ಅವರು 1.47 ಲಕ್ಷ ಮತಗಳನ್ನು ಪಡೆದಿದ್ದು, ಬಘೇಲ್ ಅವರ 80,045 ಮತಗಳನ್ನು ಗಳಿಸಿದ್ದಾರೆ.ಅವರು ಕನೌಜ್‌ನಿಂದ ಮೂರು ಬಾರಿ ಲೋಕಸಭಾ ಸಂಸದರಾಗಿದ್ದಾರೆ.

Read More »

ಬಿ.ಆರ್‌.ಪಾಟೀಲ್‌ ಗೆ ಪತ್ರ ಬರೆದು ಕ್ಷಮೆಯಾಚಿಸಿದ ಡಿಕೆಶಿ

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಶಾಸಕ ಬಿ.ಆರ್‌.ಪಾಟೀಲ್‌ ಅವರಿಗೆ ನಾನು ತಮ್ಮನ್ನು ತಳ್ಳಿ ಅವಮಾನ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದಕ್ಕೆ ನಾನು ವಿಷಾದ ಕೋರುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಇಂತಹ ಘಟನೆ ನಡೆದಿರುವುದು ನನಗೆ ಅರಿವಿಲ್ಲ. ಜನರ ನೂಕುನುಗ್ಗಲಿನಲ್ಲಿ ಅಂತಹ ಅಚಾತುರ್ಯ ನಡೆದಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ತಮ್ಮಂತಹ ಹಿರಿಯ ನಾಯಕರಿಗೆ ಅವಮಾನ ಮಾಡುವುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಪಾಟೀಲ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Read More »

ಸಭಾಪತಿಗಳ ವಿರುದ್ಧ ಎಫ್‌ಐಆರ್‌ ದಾಖಲು : ತಪ್ಪಿತಸ್ಥ ಅಧಿಕಾರಿ ಅಮಾನತು ಗೊಳಿಸುವಂತೆ ಒತ್ತಾಯ

ಬೆಂಗಳೂರು: ಸಭಾಪತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮೂಲಕ ಪೀಠಕ್ಕೆ ಅಪ ಮಾನ ಮಾಡಿದ್ದಾರೆ. ಸಕ್ಷಮ ಪ್ರಾಧಿಕಾರದ ಅನುಮತಿ ಕೂಡಾ ಪಡೆಯದಿಲ್ಲಾ ತಪ್ಪಿತಸ್ಥ ಅಧಿಕಾರಿಯನ್ನು ತತ್‌ಕ್ಷಣ ಅಮಾನತು ಗೊಳಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದ ಘಟನೆ ನಡೆಯಿತು. ಬಜೆಟ್‌ ಮೇಲೆ ಭಾಷಣದ ವೇಳೆ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಯು. ಬಿ. ವೆಂಕಟೇಶ್‌, “ಅತ್ತ ನೀರಿಗಾಗಿ ಪಾದಯಾತ್ರೆ ನಡೆಸುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುತ್ತದೆ. ಇತ್ತ ಸಭಾಪತಿಗಳ ವಿರುದ್ಧವೇ ಅನುಮತಿ ಪಡೆಯದೆ ಎಫ್‌ಐಆರ್‌ ದಾಖಲಾಗುತ್ತದೆ. …

Read More »

ರಾಜಸ್ಥಾನ ರೇಪ್​ನಲ್ಲಿ ಮೊದಲ ಸ್ಥಾನದಲ್ಲಿ ಇದೆ ಯಾಕೆಂದರೆ ಪುರಷರಿರುವ ರಾಜ್ಯ : ಶಾಂತಿ ಕುಮಾರ್ ಧರಿವಾಲ್

‘ರೇಪ್​ನಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿ ಇದೆ. ಯಾಕೆ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ..? ಯಾಕಂದರೆ ರಾಜಸ್ಥಾನ ಪುರಷರಿರುವ ರಾಜ್ಯ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ..?’ ಎಂದು ರಾಜಸ್ಥಾನದ ಕಾಂಗ್ರೆಸ್​ ಮಂತ್ರಿ ಶಾಂತಿ ಕುಮಾರ್ ಧರಿವಾಲ್ ಹೇಳಿದ್ದಾರೆ. ಧರಿವಾಲ್ ಸದನದಲ್ಲಿ ಈ ಹೇಳಿಕೆ ನೀಡಿದಾಗ ಸದನದಲ್ಲಿ ಕುಳಿತಿದ್ದ ಆಡಳಿತ ಪಕ್ಷದ ನಾಯಕರೂ ನಗೆಗಡಲಲ್ಲಿ ತೇಲಿದ್ದಾರೆ. ಅವರ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಬಳಿಕ ವಿರೋಧ ಪಕ್ಷ ಹಾಗೂ ಆಡಳಿತ …

Read More »