Breaking News

admin

ಕೆ.ಎ.ಎಸ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿ ನೇಣಿಗೆ ಶರಣು

ಧಾರವಾಡ: ನಗರದ ಕೆ.ಎ.ಎಸ್ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿ ನೇಣುಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ನಗರದಲ್ಲಿ ಜರುಗಿದೆ.ಬಾಗಲಕೋಟೆ ಜಿಲ್ಲೆಯ ರಬಕವಿ ಊರಿನ ಗೀತಾ ಹೆಗ್ಗಣ್ಣವರ (23) ಎಂಬ ವಿದ್ಯಾರ್ಥಿನಿಯೇ ಆತ್ಮಹತ್ಯೆ ಮಾಡಿಕೊಂಡವಳೆಂದು ಗುರುತಿಸಲಾಗಿದೆ.     ನಗರದ ಖಾಸಗಿ ಕೆ.ಎ.ಎಸ್ ಹಾಗೂ ಐ.ಎ.ಎಸ್ ಪರೀಕ್ಷೆ ತರಬೇತಿಯಲ್ಲಿ ಕೆ.ಎ ಎಸ್ ತರಬೇತಿ ಪಡೆಯುತ್ತಿದ್ದ ಗೀತಾ ಹೆಗ್ಗಣ್ಣವರ ಸಪ್ತಪುರ ಪ್ರದೇಶದ ಖಾಸಗಿ ವಸತಿ ನಿಲಯದಲ್ಲಿ ವಾಸಿಸುತ್ತದ್ದರು. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಪೊಲೀಸ್ ತನಿಖೆಯಿಂದ …

Read More »

5 ರಾಜ್ಯಗಳ ಚುನಾವಣಾ ಫಲಿತಾಂಶ ನಂತರ ಮುಂದಿನ ನಡೆ: ಜಿ.ಟಿ.ದೇವೇಗೌಡ

ಕೋಲಾರ: 5 ರಾಜ್ಯಗಳ ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುಲಾಗುವುದು. ‌ ‘ಸದ್ಯ ನಮ್ಮ ಪಾಡಿಗೆ ನಾವಿದ್ದೇವೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ,ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿಕೊಂಡು ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಮಾಡುತ್ತೇವೆ’. ಬಿಜೆಪಿಯೋ, ಜೆಡಿಎಸ್ ಅಥವಾ ಕಾಂಗ್ರೆಸೋ ಏನೂ ಬೇಕಾದರೂ ಆಗಬಹುದು. ಸದ್ಯ ಶಾಸಕನಾಗಿ ಇರುವವರೆಗೂ ಜೆಡಿಎಸ್’ ಎಂದರು.

Read More »

ಈಗಲ್ಟನ್‌ ರೆಸಾರ್ಟ್‌ ಅಕ್ರಮವಾಗಿ ಸ್ಥಾಪಿಸಲಾಗಿದೆ ಆರೋಪಕ್ಕೆ ಉತ್ತರ ನೀಡಿದ ಕುಮಾರಸ್ವಾಮಿ

ವಿಧಾನಸಭೆ: ಈಗಲ್ಟನ್‌ ರೆಸಾರ್ಟ್‌ ಅಕ್ರಮವಾಗಿ ಸ್ಥಾಪಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಸದನದಲ್ಲಿ ಮಾತನಾಡುವ ಸಂದರ್ಭದಲ್ಲಿ ಹೇಳಿದ ಅವರು, ನಾನು ಯಾರ ಪರವಾಗಿಯೂ ಇಲ್ಲ ವಾಸ್ತವದ ಪರವಾಗಿ ಮಾತನಾಡುತ್ತೇನೆ. ಯಾರಿಗೆ ಅನ್ಯಾಯವಾದಾಗ ಧ್ವನಿ ಎತ್ತುವ ಸ್ವಭಾವ ಬೆಳೆಸಿಕೊಂಡಿದ್ದೇನೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಇನ್ನು ಮುಂದೆ ತಾಜ್‌ ವೆಸ್ಟೆಂಡ್‌ನ‌ಲ್ಲಿ ವಾಸ ಮಾಡುವುದಿಲ್ಲ. …

Read More »

ಉತ್ತರ ಪ್ರದೇಶದ ದಿಂದ ಅಂಜನಾದ್ರಿ ಬೆಟ್ಟಕ್ಕೆ ವಿಮಾನ , ರೈಲು ಸಂಪರ್ಕ :ಶಶಿಕಲಾ ಜೊಲ್ಲೆ

ಬೆಂಗಳೂರು:ವಿಧಾನ ಪರಿಷತ್ ಸದಸ್ಯ ರವಿಕುಮಾರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಪ್ರದೇಶದ ಅಯೋಧ್ಯೆಯಿಂದ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ವಿಮಾನ ಹಾಗೂ ರೈಲಿನ ಮೂಲಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.ಇದರ ಸಾಕಾರಕ್ಕಾಗಿ ಶೀಘ್ರದಲ್ಲಿ ಯೋಜನೆ ರೂಪಿಸಾಗುವುದು ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಮತ್ತೇ ಮುಂದು ವರೆದಯ ಮಾತನಾಡಿದ ಅವರು,ಹನುಮನ ಜನ್ಮಸ್ಥಳ ಅಂಜನಾದ್ರಿಯ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಈಗಾಗಲೇ ಮಾನ್ಯ …

Read More »

ಸಿದ್ದರಾಮಯ್ಯ ಯನ್ನು ಹುಣಸೂರಿನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು : ಜಿಟಿ ದೇವೇಗೌಡ

ಮೈಸೂರು: ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಹುಣಸೂರಿನಲ್ಲಿ ಸ್ಪರ್ಧಿಸಬೇಕು. ಅವರನ್ನು ಹುಣಸೂರಿನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದರು. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ,ಸಿದ್ದರಾಮಯ್ಯ ಎಲ್ಲಿ ಸ್ಪರ್ದಿಸಬೇಕು ಅನ್ನೋ ವಿಚಾರ ಚರ್ಚೆ ಆಗಿಲ್ಲ. ಹುಣಸೂರಿನಲ್ಲಿ ನಿಲ್ಲಿ ಎಂದು ಅವರಿಗೆ ಆಫರ್ ಇದೆ. ಮಂಜುನಾಥ್ ಗೆ MLC ಮಾಡಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲಿ. ಅವರನ್ನು ಹುಣಸೂರಿನಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು. ನಾನು ಮಾತ್ರ …

Read More »

ಅಂಜನಾಂದ್ರಿ ಬೆಟ್ಟಕ್ಕೆ ಮೂಲಸೌಕರ್ಯ ಸೌಲಭ್ಯ ಶೀಘ್ರ ಒದಗಿಸಲಾಗುವುದು : ಬೊಮ್ಮಾಯಿ

ಗಂಗಾವತಿ : ಅಯೋಧ್ಯೆಯಂತೆ ರಾಮಭಕ್ತ ಹನುಮಂತ ಜನಿಸಿದ ಕಿಷ್ಕಿಂದಾ ಅಂಜನಾದ್ರಿ ಅಭಿವೃದ್ಧಿ ಕಾಣಬೇಕಿದೆ. ಸದ್ಯ ಬಜೆಟ್ ನಲ್ಲಿ ನೂರು ಕೋಟಿ ಅನುದಾನ ಮೀಸಲಿರಿಸಲಾಗಿದೆ. ಅಂಜನಾದ್ರಿಗೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಮತ್ತು ಪ್ರವಾಸೋದ್ಯಮವನ್ನು ಬೆಳೆಸಲು ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದರ ಅವರು. ಶೀಘ್ರವೇ ಅಂಜನಾದ್ರಿಗೆ ಧಾರ್ಮಿಕ ದತ್ತಿ ಸೇರಿ ಇತರೆ ಸಚಿವರ ಜತೆ ಭೇಟಿ ನೀಡಿ ಅಗತ್ಯ ಸೌಕರ್ಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ. …

Read More »

ಚುನಾವಣೆ ಫಲಿತಾಂಶ : ಗೋವಾದಲ್ಲಿ‌ ಕಾಂಗ್ರೆಸ್ ಮುನ್ನಡೆ

ಗೀವಿಧಾನಸಭಾ ಚುನಾವಣೆಯ ಚುನಾವಣೆ ಮುಗಿದಿದ್ದು, ಇದೀಗ ಮತಗಳ ಏಣಿಕೆ ಪ್ರಾರಂಭ ವಾಗಿದೆ. ಎಲ್ಲರೂ ಫಿಲತಾಂಶಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮತ ಎಣಿಕೆ ಕಾರ್ಯ ಮುಂದುವರೆದಿದೆ. ಕಾಂಗ್ರೆಸ್‌ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದೆ. ಗೋವಾದ 40 ವಿಧಾನಸಭಾ ಕ್ಷೇತ್ರಗಳ ಪೈಕಿ 36 ಕ್ಷೇತ್ರಗಳ ಮುನ್ನಡೆ ವಿವರ ಲಭ್ಯವಾಗಿದ್ದು, ಕಾಂಗ್ರೆಸ್‌ 20 ಹಾಗೂ ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

Read More »

ಉತ್ತರ ಪ್ರದೇಶ, ಉತ್ತರರಾಖಂಡ್ ಚುನಾವಣೆ ಪ್ರಕಟ: ಬಿಜೆಪಿ ಮುನ್ನಡೆ

ನವದೆಹಲಿ: ಉತ್ತರ ಪ್ರದೇಶ ಚುನಾವಣೆ ಮುಗಿದಿದ್ದು, ಇದೀಗ ಮತಗಳ ಏಣಿಕೆ ಪ್ರಾರಂಭ ವಾಗಿದೆ. ಎಲ್ಲರೂ ಫಿಲತಾಂಶಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಪಂಜಾಬ್ ನಲ್ಲಿ ಆಪ್ 4, ಶಿರೋಮಣಿ ಅಕಾಲಿದಳ 1, ಕಾಂಗ್ರೆಸ್ 1 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಉತ್ತರಾಖಂಡ್ ನಲ್ಲಿ ಬಿಜೆಪಿ 5, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಗೋವಾದಲ್ಲಿ 3 ಕಡೆಗಳಲ್ಲಿ ಬಿಜೆಪಿ ಮುನ್ನಡೆ ಗಳಿಸಿದೆ.ಅಂಚೆ ಮತಗಳ ಎಣಿಕೆ …

Read More »

ನಾನು ಸದನದಲ್ಲಿ ಇದ್ದಿದ್ರೆ ಮೆಟ್ಟು ತಗೊಂಡು ಹೊಡೀತಿದ್ದೆ : ಕೋಡಿಹಳ್ಳಿ ಚಂದ್ರಶೇಖರ್‌ ಕಿಡಿ

ಬಳ್ಳಾರಿ:  ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡುವವರ ವಿರುದ್ಧ ಕ್ರಮವಾಗಬೇಕು.ಮಹಿ​ಳೆ​ಯರ ಬಗ್ಗೆ ಅಗೌ​ರ​ವ ತೋರು​ತ್ತಿ​ದ್ದಾ​ರೆ. ‘ಒಂದು ವೇಳೆ ನಾನು ಸದನದಲ್ಲಿ ಇದ್ದಿದ್ರೆ ಮೆಟ್ಟು ತಗೊಂಡು ಹೊಡೀತಿದ್ದೆ’ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ. ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ ಅವರು , ಪ್ರತಿಪಕ್ಷದ ಸದಸ್ಯರು ಮೌನದಿಂದ ಹೊರ ಬರಬೇಕು. ಇಂತಹ ಹೇಳಿಕೆಗಳಿಗೆ ಆಸ್ಪದವಾಗದಂತೆ ಪ್ರತಿಭಟಿಸಬೇಕು.ಶಾಸ​ಕ, ಸಚಿ​ವ​ರಾ​ದ​ವರು ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯೇ? ಅಂಥ ಸಂದರ್ಭದಲ್ಲಿ ನಾನೇನಾದರೂ ಸದನದಲ್ಲಿ ಇದ್ದಿದ್ದರೆ …

Read More »

ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಾರಂಭ

ನವದೆಹಲಿ : ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಒಟ್ಟು 1,200 ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 50 ಸಾವಿರ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಎಲ್ಲ ರಾಜ್ಯಗಳಲ್ಲಿ ಒಟ್ಟು 650ಕ್ಕೂ ಹೆಚ್ಚು ವೀಕ್ಷಕರು ಕಾರ್ಯನಿರ್ವಹಿಸಲಿದ್ದು,ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತಎಣಿಕೆ ಗುರುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮೊದಲಿಗೆ ಅಂಚೆ ಪತ್ರಗಳ ಎಣಿಕೆ ನಡೆಯಲಿದೆ. ‌ 403 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 750ಕ್ಕೂ …

Read More »