ಧಾರವಾಡ: ನಗರದ ಕೆ.ಎ.ಎಸ್ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿ ನೇಣುಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ನಗರದಲ್ಲಿ ಜರುಗಿದೆ.ಬಾಗಲಕೋಟೆ ಜಿಲ್ಲೆಯ ರಬಕವಿ ಊರಿನ ಗೀತಾ ಹೆಗ್ಗಣ್ಣವರ (23) ಎಂಬ ವಿದ್ಯಾರ್ಥಿನಿಯೇ ಆತ್ಮಹತ್ಯೆ ಮಾಡಿಕೊಂಡವಳೆಂದು ಗುರುತಿಸಲಾಗಿದೆ.
ನಗರದ ಖಾಸಗಿ ಕೆ.ಎ.ಎಸ್ ಹಾಗೂ ಐ.ಎ.ಎಸ್ ಪರೀಕ್ಷೆ ತರಬೇತಿಯಲ್ಲಿ ಕೆ.ಎ ಎಸ್ ತರಬೇತಿ ಪಡೆಯುತ್ತಿದ್ದ ಗೀತಾ ಹೆಗ್ಗಣ್ಣವರ ಸಪ್ತಪುರ ಪ್ರದೇಶದ ಖಾಸಗಿ ವಸತಿ ನಿಲಯದಲ್ಲಿ ವಾಸಿಸುತ್ತದ್ದರು. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.ಘಟನಾ ಸ್ಥಳಕ್ಕೆ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

