Breaking News

ಮಂಗಳೂರು | ₹ 4.11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು- ಎಫ್‌ಐಆರ್

ಕಾವೂರು ಉಲ್ಲಾಸನಗರ ಬಸ್ ನಿಲ್ದಾಣದ ಬಳಿಯ ಮನೆಯ ಬಾಗಿಲನ್ನು ಮಧ್ಯಾಹ್ನದ ವೇಳೆ ಮುರಿದು ಸುಮಾರು ₹ 4.11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಬಗ್ಗೆ ಕಾವೂರು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ‘ಮಾರ್ಚ್ 7ರಂದು ಶನಿವಾರ ಮಧ್ಯಾಹ್ನ ನನ್ನ ಪತ್ನಿ ಶಿವಮ್ಮ ತಮ್ಮ ಅಕ್ಕನ ಮನೆಗೆ ಹೋಗಿದ್ದರು. ಈ ವೇಳೆ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಅಪರಿಚಿತರು ಅಲ್ಮೇರಾದಲ್ಲಿದ್ದ 14 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌, 15 ಗ್ರಾಂ ತೂಕದ ಕರಿಮಣಿ ಸರ, 5 ಗ್ರಾಂ ತೂಕದ ಒಂದು ಜೊತೆ ಜುಮ್ಕಿ, 40 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ಕಾಲುಗೆಜ್ಜೆ, 15 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ಕೈ ಕಡಗ, 95 ಗ್ರಾಂ ತೂಕದ ಒಂದು ಜೊತೆ ಬೆಳ್ಳಿಯ ಕಾಲುಗೆಜ್ಜೆ, 30 ಗ್ರಾಂ ತೂಕದ ಹರಳಿನ ಸರಗಳನ್ನು ಕಳವು ಮಾಡಿದ್ದಾರೆ. ಕಳವಾದ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಅಂದಾಜು ಮೌಲ್ಯ ₹ 4.11 ಲಕ್ಷ’ ಎಂದು ಹೈಪರ್ ಮಾರ್ಕೆಟ್‌ನಲ್ಲಿ ಸೇಲ್ಸ್ ಮ್ಯಾನ್ ಆಗಿರುವ ಪ್ರಕಾಶ್ ಮಕಣ್ಣವರ್‌ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share News

About BigTv News

Check Also

ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು!

ರಾಮನಗರ: ವಿಶೇಷಚೇತನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಇಬ್ಬರು ಆರೋಪಿಗಳಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ 1ನೇ ಅಪರ …

Leave a Reply

Your email address will not be published. Required fields are marked *