ನವಲಗುಂದ: ಪಟ್ಟಣದ ನೀಲಮ್ಮನ ಕೆರೆ ಎದುರು ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಣ್ಣಿಗೇರಿಯತ್ತ ಹೊರಟ ಟಿಪ್ಪರ್ವೊಂದು ಪಟ್ಟಣದ ನೀಲಮ್ಮನ ಕೆರೆ ಎದುರು ಇರುವ ಕ್ರಾಸ್ ಬಳಿ ತಿರುಗುವ ಸಂದರ್ಭದಲ್ಲಿ ಏಕಾಏಕಿ ಬೈಕ್ ಮೇಲೆ ಹರಿದಿದೆ. ತಕ್ಷಣವೇ ಸವಾರ ಬೈಕ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ಸ್ಥಳಕ್ಕೆ ನವಲಗುಂದ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ ಭೇಟಿ ನೀಡಿ, ಲಾರಿ ಹಾಗೂ ಚಾಲಕನನ್ನು ವಶಕ್ಕೆ …
Read More »ಪ್ರಥಮ ಪಿಯುಸಿ ಪರೀಕ್ಷೆ ಮಾ. 28ರಿಂದ ಏ. 13ರವರೆಗೆ
ಬೆಂಗಳೂರು : ಪ್ರಥಮ ಪಿಯುಸಿ ವಾರ್ಷಿಕ ಮತ್ತು ಪೂರಕ ಪರೀಕ್ಷೆಗಳನ್ನು ಜಿಲ್ಲಾಮಟ್ಟದಲ್ಲಿ ನಡೆಸುವಂತೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಚನೆ ನೀಡಿದ್ದಾರೆ. ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್ 28ರಿಂದ ಏಪ್ರಿಲ್ 13ರವರೆಗೆ ಮಧ್ಯಾಹ್ನ 2.30ರಿಂದ 5.45ರ ಅವಧಿಯಲ್ಲಿ ನಡೆಸಬೇಕು. ಈ ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ. ಮೌಲ್ಯಮಾಪನವನ್ನು ಏಪ್ರಿಲ್ 20ರೊಳಗೆ ಪೂರ್ಣಗೊಳಿಸಿ, ಆಯಾ ಕಾಲೇಜುಗಳಲ್ಲಿ 30ರಂದು ಫಲಿತಾಂಶ ಪ್ರಕಟಿಸಬೇಕು. ಅನುತ್ತೀರ್ಣರಾದವರಿಗೆ ಪೂರಕ …
Read More »ಎಸ್ಪಿ ಅಧಿಕಾರಕ್ಕೆ ಬಂದರೆ ಅಪರಾಧಿಗಳ ಕನಸು ನನಸು
ಲಖನೌ: ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮೈತ್ರಿಕೂಟದ ವಿರುದ್ಧದ ವಾಗ್ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇನ್ನಷ್ಟು ಹರಿತಗೊಳಿಸಿದ್ದಾರೆ. ಎಸ್ಪಿ ಅಧಿಕಾರಕ್ಕೆ ಬಂದರೆ ಅಪರಾಧಿಗಳ ಕನಸು ನನಸಾದಂತಾಗುತ್ತದೆ ಎಂದು ಮೋದಿ ಆಪಾದಿಸಿದರೆ, ಎಸ್ಪಿಯಲ್ಲಿರುವವರು ‘ಕಳ್ಳರು’ ಎಂದು ಯೋಗಿ ಹೇಳಿದ್ದಾರೆ. ‘ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಸುರಕ್ಷಿತವಾಗಿರುತ್ತೀರಿ. ಎಸ್ಪಿ ಅಧಿಕಾರಕ್ಕೆ ಬಂದರೆ ಗೂಂಡಾಗಳ ಕನಸು ನನಸಾಗುತ್ತದೆ’ ಎಂದು ವರ್ಚುವಲ್ …
Read More »ಸಿ.ಎಂ. ಇಬ್ರಾಹಿಂ ಅವರ ಮನವೊಲಿಸಲು ಸಿದ್ಧರಾದ ಸಿದ್ದರಾಮಯ್ಯ
ಬೆಂಗಳೂರು: ಸಿ.ಎಂ. ಇಬ್ರಾಹಿಂ ಅವರ ಮನವೊಲಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ. ತಮ್ಮ ಆಪ್ತ ಎಚ್.ಸಿ. ಮಹದೇವಪ್ಪ ಮೂಲಕ ಇಬ್ರಾಹಿಂ ಜೊತೆ ಸಂಧಾನ ನಡೆಸಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಇಬ್ರಾಹಿಂ ಜೊತೆ ಮಾತನಾಡಿರುವುದಾಗಿ ಮಹದೇವಪ್ಪ ಹೇಳಿದ್ದಾನೆ. ಎಲ್ಲರೊಂದಿಗೆ ಚರ್ಚಿಸುತ್ತೇನೆ ಎಂದು ಮಹದೇವಪ್ಪನಿಗೆ ಇಬ್ರಾಹಿಂ ಹೇಳಿದ್ದಾನೆ. ನಾನು ಕರೆ ಮಾಡಿಯಷ್ಟೇ ಅಲ್ಲ, ಮನೆಗೂ ಹೋಗಿ ಮಾತನಾಡುತ್ತೇನೆ’ ಎಂದರು.
Read More »ವಾಹನದಲ್ಲಿದ್ದ ರಾಹುಲ್ ಗಾಂಧಿ ಕಡೆ ಧ್ವಜ ಎಸೆದ ಯುವಕ : ಮುಖಕ್ಕೆ ಗಾಯ
ಲುಧಿಯಾನ: ವ್ಯಕ್ತಿಯೊಬ್ಬ ರಾಹುಲ್ ರತ್ತ ಧ್ವಜ ಎಸೆದಿದ್ದು, ಅವರ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗಿದೆ.ರಾಹುಲ್ ಗಾಂಧಿ ಕಾರಿನ ಮುಂದಿನ ಆಸನದಲ್ಲಿ ಕುಳಿತಿದ್ದರು. ಮತ್ತು ಬೆಂಬಲಿಗರನ್ನು ಸ್ವಾಗತಿಸಲು ಅವರು ಕಾರಿನ ಕಿಟಕಿಯನ್ನು ಕೆಳಗೆ ಇಳಿಸಿದ್ದರು. ಕಾರಿನ ಕಿಟಕಿಯ ಮೇಲೆ ಬಹಳ ದೂರದಿಂದ ಧ್ವಜವನ್ನು ಎಸೆಯುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ರಾಹುಲ್ ಗಾಂಧಿ ಕುಳಿತಿದ್ದ ಕಾರನ್ನು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸುನಿಲ್ ಜಾಖರ್ ಓಡಿಸುತ್ತಿದ್ದರೆ, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ರಾಜ್ಯ …
Read More »ಹಿಜಾಬ್ ವಿವಾದ ಸೃಷ್ಟಿಯಿಂದ ದೇಶಕ್ಕೆ ಅವಮಾನ : ಡಿಕೆಶಿ
ಮಂಗಳೂರು : ಹಿಜಾಬ್ ವಿವಾದ ಸೃಷ್ಟಿಯಿಂದ ದೇಶಕ್ಕೆ ಅವಮಾನವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಪ್ರಸ್ತುತ ಜನರಿಗೆ ಬೇಕಾಗಿರುವುದು ಆರ್ಥಿಕ ಭದ್ರತೆ, ಉದ್ಯೋಗ, ನೆಮ್ಮದಿಯ ಬದುಕು. ಜನತೆಯ ಈ ಆಶೋತ್ತರಗಳನ್ನು ಈಡೇರಿಸುವುದೇ ಕಾಂಗ್ರೆಸ್ನ ಗುರಿ. ನಾವು ಆದ್ಯತೆ ನೀಡುವುದು ಇದಕ್ಕೆ. ಆದರೆ ಬಿಜೆಪಿಗೆ ಈ ಆದ್ಯತೆಗಳು ಬೇಕಾಗಿಲ್ಲ . ಅವರ ಗಮನ ಇರುವುದು ಮತೀಯ ಭಾವನೆಗಳನ್ನು ಕೆರಳಿಸಿ ಅರಾಜಕತೆ …
Read More »ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ.6.19ಕ್ಕೆ ಇಳಿಕೆ
ಬೆಂಗಳೂರು: ರಾಜ್ಯದಲ್ಲಿ ಸೋಮವಾರ 6,151 ಹೊಸ ಪ್ರಕರಣ ದಾಖಲಾಗಿದ್ದು, 16,802 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿತರ ಪಾಸಿಟಿವಿಟಿ ದರ ಶೇ.6.19ಕ್ಕೆ ಹಾಗೂ ಸಕ್ರಿಯ ಪ್ರಕರಣ 87080 ಕ್ಕೆ ಇಳಿಕೆಯಾಗಿದೆ. ಸೋಮವಾರ 99,254 ಸ್ಲ್ಯಾಬ್ ಗಳನ್ನು ಪರೀಕ್ಷೆ ಒಳಪಡಿಸಲಾಗಿತ್ತು.ಬೆಂಗಳೂರು ನಗರ 2718, ಬೆಳಗಾವಿ 321, ಮೈಸೂರು 285, ಹಾಸನ 219, ತುಮಕೂರು 210, ಕೊಡಗು 195,ಮಂಡ್ಯ 182, ಶಿವಮೊಗ್ಗ 177, ಧಾರವಾಡ 149, ಚಿತ್ರದುರ್ಗ 161, ಬಳ್ಳಾರಿ 154, ಕೊಪ್ಪಳ 133, …
Read More »ಕರ್ನಾಟಕದಲ್ಲಿ 6151 ಜನರಲ್ಲಿ ಕೊರೊನಾವೈರಸ್ ದೃಢ
ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ ಒಟ್ಟು 6151 ಜನರಲ್ಲಿ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ. ಕೊವಿಡ್ನಿಂದ ಒಟ್ಟು 49 ಜನರು ಸಾವನಪ್ಪಿದ್ದಾರೆ. ಒಟ್ಟು 16,802 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 87,080 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 6.19, ಸೋಂಕಿತರ ಸಾವಿನ ಸರಾಸರಿ ಶೇ 0.79 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 39,02,309 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 37,75,799 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು …
Read More »ಬನ್ನೂರು ಪುಟಾಣಿ ವೈಭವ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಆಯ್ಕೆ
ಬನ್ನೂರು: ವಿವಿಧ ಪ್ರಾಣಿ, ಪಕ್ಷಿ, ಹಣ್ಣು, ವಸ್ತುಗಳು, ವಾಹನಗಳು ಹಾಗೂ ದೇಹದ ವಿವಿಧ ಭಾಗಗಳನ್ನು ಗುರುತಿಸುವ ಮೂಲಕ ಪಟ್ಟಣದ ನಿವಾಸಿ ಗಿರೀಶ್ ಹಾಗೂ ಗಗನ ದಂಪತಿ ಪುತ್ರ ವೈಭವ್ (2) ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಆಯ್ಕೆಯಾಗಿದ್ದಾನೆ. ಈ ಪೋರ ವರ್ಣಮಾಲೆ ಹಾಗೂ ವಿವಿಧ ಯೋಗದ ಭಂಗಿಗಳನ್ನೂ ಗುರುತಿಸುತ್ತಾನೆ. ಬಾಲಕನ ಸ್ಮರಣಶಕ್ತಿ ಹೆಚ್ಚಾಗಿದೆ. ಈತನ ಪ್ರತಿಭೆಯನ್ನು ಕಂಡ ಪೋಷಕರು ವಿಡಿಯೊ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಸಲ್ಲಿಸಿದ್ದರು. ಈಗ …
Read More »ಹಿಜಾಜ್ ವಿವಾದ ಕುರಿತು ಹೈಕೋರ್ಟ್ ನಲ್ಲಿಯಿಂದು ವಿಚಾರಣೆ
ನವದೆಹಲಿ: ರಾಜ್ಯದ ಶಾಲಾ, ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪಾಠ ಕೇಳಲು ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು, ಇದರೊಂದಿಗೆ ಸಲ್ಲಿಕೆಯಾಗಿರುವ ನಾಲ್ಕು ರಿಟ್ ಅರ್ಜಿಗಳ ವಿಚಾರಣೆ ಇಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯಪೀಠದಲ್ಲಿ ನಡೆಯಲಿದೆ. ರಾಜ್ಯ ಸರ್ಕಾರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





