ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಂಸತ್ ಸದಸ್ಯರಾಗಿದ್ದ ಹನುಮಂತ ಗೌಡ ಭೀಮನಗೌಡ ಪಾಟೀಲ ಹೃದಯಾಘಾತದಿಂದ ನಿಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನಲ್ಲಿರುವ ರಡ್ಡೇರ ತಿಮ್ಮಾಪುರದ ತಮ್ಮ ಸ್ವಗ್ರಾಮದಲ್ಲಿ ಹೃದಯಾಘಾತಕ್ಕೊಳಗಾಗಿದ್ದರು, ಅವರನ್ನು ತಕ್ಷಣವೇ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ಸೇರಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Read More »ರಸ್ತೆ ಅಪಘಾತದಲ್ಲಿ ಯೋಧ ಸಾವು
ಮುದ್ದೇಬಿಹಾಳ : 3 ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ತಂಗಡಗಿ ಗ್ರಾಮದ ಬಸವರಾಜ (28) ಚಿಕಿತ್ಸೆ ಫಲಿಸದೆ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಇವರು ಸೇವೆಗೆ ಸೇರಿ 8-10 ವರ್ಷಗಳಾಗಿದ್ದು ಪ್ರಸ್ತುತ ಬಿಹಾರ ರಾಜ್ಯದಲ್ಲಿ ಕರ್ತವ್ಯದಲ್ಲಿದ್ದು ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಾಗ ಆಲಮಟ್ಟಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ …
Read More »ಪ್ರೀತಿಸಿ ಮದುವೆಯಾದ ಜೋಡಿ : ಗಂಡನಿಗೆ ಹೆಣವಾಗಿ ಸಿಕ್ಕ ಪತ್ನಿ
ಹಾವೇರಿ: ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ. ಮನುಜಾ (20) ಮೃತ ಗೃಹಿಣಿ. ಕಳೆದ ಐದು ದಿನಗಳ ಹಿಂದೆ ಗಂಡನ ಮನೆಯಿಂದ ಕಾಣೆಯಾಗಿದ್ದ ಮನುಜಾ ಕಾಗಿನೆಲೆಯ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎನ್ನಲಾಗ್ತಿದೆ. ಬ್ಯಾಡಗಿ ತಾಲೂಕಿನ ಕಳಗೊಂಡ ಗ್ರಾಮದವಳಾಗಿದ್ದ ಮನುಜಾ ಆರು ತಿಂಗಳ ಹಿಂದೆ ಅದೇ ಗ್ರಾಮದ ಬಸವರಾಜ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಈ ಮಧ್ಯೆ …
Read More »ಪ್ರೀತಿ ಕುರುಡು ಎನ್ನುವ ಗಾದೆಗೆ ಈ ಜೋಡಿಯೇ ಸಾಕ್ಷಿ
ಅವರಿಬ್ಬರೂ ಮೂಗರು , ಜೊತೆಗೆ ಕಿವುಡುತನ . ಶಾಲೆಯ ಅಂಗಳದಲ್ಲಿ ಸ್ನೇಹಿತರಾಗಿದ್ದ ಅವರು, ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತಿಯೇ ಅವರಿಬ್ಬರ ಮಧ್ಯದಲ್ಲಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು ಅವರ ಮಧ್ಯೆ ಆರಂಭದಲ್ಲಿ ಇದ್ದದ್ದು ಕೇವಲ ಕೈಸನ್ನೆ, ಕಣ್ಸನ್ನೆ ಮಾತ್ರ . ನಂತರ ಅವರಿಗೆ ವರದಾನವಾಗಿದ್ದು ವಾಟ್ಸಾಪ್ . ಇದೀಗ ಅದೇ ವಾಟ್ಸಾಪ್ ಮೂಲಕ ಅವರ ಪ್ರೀತಿ ಮದುವೆವರೆಗೂ ತಲುಪಿದೆ. ಹರಪನಹಳ್ಳಿ ತಾಲ್ಲೂಕಿನ ಕಡಬಗೇರಿ ಗ್ರಾಮದ ಅಕ್ಷತಾ ಬಿ . ಹಾಗೂ …
Read More »ಬಜೆಟ್ 2022 : ಅನ್ನದಾತರಿಗೆ ಬಂಪರ್ ಕೊಡುಗೆ
ನವದೆಹಲಿ : ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ 2022 ಮಂಡಿಸಿದ್ದಾರೆ.ಬಜೆಟ್ ಭಾಷಣದಲ್ಲಿ ಸೀತಾರಾಮನ್ ಅವರು ಎಂಎಸ್ಪಿ ಮೂಲಕ ರೈತರ ಖಾತೆಗೆ 2.37 ಲಕ್ಷ ಕೋಟಿ ರೂ. ಕೃಷಿಗೆ ಬಜೆಟ್ನಲ್ಲಿ ಏನಿದೆ ಎಂಬ ಮಾಹಿತಿ ಇಲ್ಲಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ. ಈ ಸಂದರ್ಭದಲ್ಲಿ, ಭತ್ತ ಮತ್ತು ಗೋಧಿ ಸಂಗ್ರಹಣೆಯ ಗುರಿಯನ್ನು ಹೆಚ್ಚಿಸಲು ಹಣಕಾಸು ಸಚಿವರು ನಿರ್ಧರಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಡ್ರೋನ್ಗಳ …
Read More »ರಾಯಚೂರು ಜಿಲ್ಲೆಗೆ ನಿರಾಸೆ ಮೂಡಿಸಿದ ಕೇಂದ್ರ ಬಜೆಟ್
ರಾಯಚೂರು: ಜಿಲ್ಲೆಗೆ ಹೊಸದಾಗಿ ಏಮ್ಸ್ ಸಂಸ್ಥೆ, ಜವಳಿ ಪಾರ್ಕ್ ಘೋಷಣೆ, ವಿಮಾನ ನಿಲ್ದಾಣ ನಿರ್ಮಾಣ, ಐಐಐಟಿ, ರೈಲು ಯೋಜನೆಗಳು ಅನುದಾನ ನೀಡುವುದು ಹೀಗೆ ಹತ್ತು ಹಲವು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಕೇಂದ್ರ ಬಜೆಟ್ ಕೊನೆಗೂ ನಿರಾಸೆ ಮೂಡಿಸಿದೆ. ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(IIT)ಯಿಂದ ವಂಚಿತಗೊಂಡಿರುವ ಜಿಲ್ಲೆಗೆ ಹೆಸರಿಗೆ ಮಾತ್ರ ಐಐಐಟಿ ಸಂಸ್ಥೆಯನ್ನು ನೀಡಿರುವ ಕೇಂದ್ರವು ಕಳೆದ ನಾಲ್ಕು ವರ್ಷಗಳಿಂದ ಅನುದಾನ ನೀಡದೇ ನಿರ್ಲಕ್ಷ್ಯವಹಿದೆ. ಸ್ಥಳೀಯ ಯರಮರಸ್ನಲ್ಲಿರುವ ಸರ್ಕಾರಿ …
Read More »ಭಾರತದಲ್ಲಿ ಕೊರೊನಾ ಪ್ರಕರಣಗಳು ಇಳಿಕೆ
ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 1,61,386 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,61,386 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ ಮತ್ತು 2,81,109 ಚೇತರಿಕೆಗಳನ್ನು ಭಾರತ ವರದಿ ಮಾಡಿದೆ
Read More »ಕೇಂದ್ರ ಬಜೆಟ್ ಕುರಿತು ಟೀಕೆ ಮಾಡಿದ ಕುಮಾರಸ್ವಾಮಿ
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸಾಮಾನ್ಯ ಜನರ ಪಾಲಿಗೆ ಭರವಸೆ ಆಶಾಕಿರಣವಾಗಬೇಕಿದ್ದ ಕೇಂದ್ರ ಬಜೆಟ್ನಲ್ಲಿ ಅಂಥ ಯಾವುದೇ ಅಂಶ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು. “ಜನರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಈ ಬಜೆಟ್” ಎಂದು …
Read More »ಬಜೆಟ್ ಮಂಡನೆ ಕುರಿತು ಸೀತರಾಮನ್ ಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ ಸುಧಾಕರ್
ಬೆಂಗಳೂರು: ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಕೇಂದ್ರದ ಬಜೆಟ್ ಗೆ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23ನೇ ಸಾ ಲಿನ ಆಯವ್ಯಯವು ಕೋವಿಡ್ ನಿಂದ ದೇಶದ ಆರ್ಥಿಕತೆಯ ಮೇಲೆ ಬಿದ್ದಿರುವ ಹೊಡೆತವನ್ನು ತಪ್ಪಿಸೋಕೆ ಈ ಬಜೆಟ್ ಪೂರಕವಾ ಗಿದೆ. ಹೀಗಾಗಿ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ …
Read More »ಬಜೆಟ್ ಕುರಿತು ಟ್ವೀಟ್ ರನಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು. ಈ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಬಜೆಟ್ನಲ್ಲಿ ವಿವಿಧ ಘೋಷಣೆಗಳೊಂದಿಗೆ ಕರ್ನಾಟಕದ ಅಭಿವೃದ್ಧಿ ಚಟುವಟಿಕೆಗಳು ಭಾರಿ ಉತ್ತೇಜನವನ್ನು ಪಡೆಯುತ್ತವೆ ಮತ್ತು ಹಂಚಿಕೆ ಮಾಡಲಾದ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ನಮ್ಮ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





