ನವದೆಹಲಿ : ಮಾರ್ಚ್ ತಿಂಗಳಿನಿಂದ 15 ವರ್ಷದವರೆಗಿನ ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನ ದೇಶದಲ್ಲಿ ಪರಿಚಯಿಸಲಾಗುವುದು ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮುಖ್ಯಸ್ಥ ಎನ್.ಕೆ. ಅರೋರಾ ಹೇಳಿದ್ದಾರೆ. ‘ಲಸಿಕೆಯ ಮೊದಲ ಡೋಸ್ʼನ್ನ ಜನವರಿ ಅಂತ್ಯದ ವೇಳೆಗೆ 15 ರಿಂದ 18 ವರ್ಷ ವಯಸ್ಸಿನ ಎಲ್ಲಾ 74 ದಶಲಕ್ಷ ಹದಿಹರೆಯದವರಿಗೆ ಫೆಬ್ರವರಿಯಲ್ಲಿ ಎರಡನೇ ಡೋಸ್ ನೀಡುವ ಗುರಿಯನ್ನ ಹೊಂದಿದೆ. ಇದರ ನಂತರ ಮಾರ್ಚ್ ಆರಂಭದಿಂದ 12 ರಿಂದ 15 ವರ್ಷ ವಯಸ್ಸಿನ …
Read More »ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಲ್ಲ : ಆರ್ ಅಶೋಕ್
ಬೆಂಗಳೂರು: ಜನವರಿ 25ರ ನಂತ್ರ ರಾಜ್ಯದಲ್ಲಿ ಕೊರೋನಾ ಪೀಕ್ ಗೆ ತಲುಪಲಿದೆ ಎಂದು ತಜ್ಞರು ತಿಳಿಸಿದ್ದಾರೆ. ವೀಕೆಂಡ್ ಕರ್ಪ್ಯೂ ಅಂತ್ಯ, ಮುಂದುವರಿಕೆ ಬಗ್ಗೆ ಶುಕ್ರವಾರ ಮತ್ತೆ ಸಭೆ ಕರೆಯಲಾಗುತ್ತದೆ. ಆ ಸಭೆಯಲ್ಲಿ ವೀಕೆಂಡ್ ಕರ್ಪ್ಯೂ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ರಾಜ್ಯದಲ್ಲಿ ವೀಕೆಂಡ್ ಹಾಗೂ ನೈಟ್ ಕರ್ಪ್ಯೂ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟ ಪಡಿಸಿದರು. ಈ …
Read More »ಸಿಎಂ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ
ಚಿತ್ರದುರ್ಗ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳಿದರು. ಮೊಳಕಾಲ್ಮೂರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಖುದ್ದು ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ . ನಮ್ಮ ಜಿಲ್ಲೆಯಲ್ಲೂ ಸಹ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈಗಾಗಲೇ, 755 …
Read More »ರಾಜ್ಯದಲ್ಲಿ 287 ಜನರಿಗೆ ಒಮಿಕ್ರಾನ್ ಪತ್ತೆ
ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಗಳ ಸಂಖ್ಯೆ ಹೆಚ್ಚಳವಾಗ್ತಿವೆ. ಈ ನಡುವೆ ಒಮಿಕ್ರಾನ್ ಆತಂಕವೂ ಶುರುವಾಗಿದೆ. ರಾಜ್ಯದಲ್ಲಿ ಇಂದು ಒಮಿಕ್ರಾನ್ ಸ್ಪೋಟವಾಗಿದ್ದು, ಬರೋಬ್ಬರಿ 287 ಮಂದಿಗೆ ಹೊಸ ವೈರಸ್ ವಕ್ಕರಿಸಿಕೊಂಡಿರುವುದು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 766ಕ್ಕೆ ಏರಿಕೆಯಾಗಿದೆ.
Read More »ಕೊರೋನಾ ಮುಕ್ತ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭಿಸಿ : ರುಪ್ಸಾ ಮನವಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆದರೆ, ಕೊರೊನಾ ಇದ್ದಲ್ಲಿ ಮಾತ್ರ ಶಾಲೆಗಳನ್ನು ಬಂದ್ ಮಾಡಿ, ಇನ್ನುಳಿದ ಪ್ರದೇಶಗಳಲ್ಲಿನ ಶಾಲೆಗಳನ್ನು ತೆರೆಯಲು ಅನುಮತಿ ನೀಡಿ ಎಂದು ರುಪ್ಸಾ ಮನವಿ ಮಾಡಿದೆ. ರಾಜ್ಯದಲ್ಲಿನ 6 ಜಿಲ್ಲೆಗಳ ಶಾಲೆಗಳನ್ನು ಬಂದ್ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ 1 ರಿಂದ 8 ಅಥವಾ 9 ನೇ ತರಗತಿಯವರೆಗಿನ ಶಾಲೆಗಳನ್ನು ಬಂದ್ ಮಾಡಲಾಗಿದೆ. ಈಗಾಗಲೇ ಬೆಂಗಳೂರು ನಗರ ಸೇರಿದಂತೆ ಬೆಳಗಾವಿ, …
Read More »ಪೇಂಟರಿಗೆ ಖುಲಾಯೀಸಿತು 12 ಕೋಟಿ ಅದೃಷ್ಟ : ಇಲ್ಲಿದೆ ರೋಚಕ ಕಥೆ
ತಿರುವನಂತಪುರ: ಕೆಲವೊಮ್ಮೆ ನಿಮ್ಮ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ಅಂತ ಹೇಳೋದಕ್ಕೆ ಆಗದೇ ಇರೋದಕ್ಕೆ ಕೇರಳದ ಈ ಘಟನೆಯೇ ಸಾಕ್ಷಿಯಾಗಿದೆ. ಕೇರಳದ ಕೊಟ್ಟಾಯಂ ಜಿಲ್ಲೆಯ ಪೇಂಟಿಂಗ್ ಕೆಲಸ ಮಾಡುತ್ತಿದ್ದಂತ ಐಮನಂ ಆಸುಪಾಸಿನ ಕುಡಯಂಪಾಡಿ ಮೂಲದ ಸದಾನಂದನ್ ಎಂಬುವರು ಕ್ರಿಸ್ ಮಸ್ ಪ್ರಯುಕ್ತದ ತಿರುವನಂತಪುರದ ಕಂಪನಿಯೊಂದರ ಲಾಟರಿ ಟಿಕೆಟ್ ಖರೀದಿಸಿದ್ದರು. ಅವರು ಖರೀದಿಸಿದಂತ ಲಾಟರಿಯ ಫಲಿತಾಂಶ ಟಿಕೆಟ್ ಖರೀದಿಸಿದ ಕೆಲವೇ ಗಂಟೆಯಲ್ಲಿ ಪ್ರಕಟವಾಗಿದೆ. ಲಕ್ಕಿ ಡ್ರಾ ಮೂಲಕ ಆಯ್ಕೆಯಾದಂತ ಫಲಿತಾಂಶವನ್ನು ಲಾಟರಿ …
Read More »ರಾಜಧಾನಿಯಲ್ಲಿ 144 ಸೆಕ್ಷನ್ ಜಾರಿ
ಬೆಂಗಳೂರು: ನಗರದಲ್ಲಿ 144 ಸೆಕ್ಷನ್ ವಿಸ್ತರಣೆ ಮಾಡಿ ಜನವರಿ 31ರವರೆಗೆ ರಾತ್ರಿ 10ಗಂಟೆಯಿಂದ ಬೆಳಗ್ಗೆ 5ಗಂಟೆವೆರಗೂ ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಆದೇಶ ಹೊರಡಿಸಿದ್ದಾರೆ. ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ144 ಸೆಕ್ಷನ್ ಜಾರಿ ವೇಳೆ ನಗರದಲ್ಲಿ ಯಾವುದೇ ರ್ಯಾಲಿ, ಪ್ರತಿಭಟನೆ ಹಾಗೂ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ಇನ್ನು ಐದು ಜನಕ್ಕಿಂದ ಹೆಚ್ಚು ಜನರು ಗುಂಪುಗೂಡದಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ಎನ್ಡಿಎಂಎ ಆಯಕ್ಟ್ …
Read More »ಮಹಾನಗರ ಪಾಲಿಕೆಗೆ ಎಚ್ಚರಿಕೆ ಕೊಟ್ಟ ಹಿಂದೂ ಪರಿಷತ್
ಹುಬ್ಬಳ್ಳಿ : ಮಹಾನಗರ ಪಾಲಿಕೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಮರುಪ್ರತಿಷ್ಠಾಪನೆ ಮಾಡದಿದ್ದಲ್ಲಿ ಫೆ.19 ರಂದು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಬೀಗ ಹಾಕಲಾಗುವುದು ಎಂದು ಹಿಂದೂ ಪರಿಷತ್ದ್ ರಾಜ್ಯ ಪ್ರಮುಖರಾದ ಗಣೇಶ ಕದಂ ಎಚ್ಚರಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಪಾಲಿಕೆಯಲ್ಲಿ ಶಿವಾಜಿ ಮಹಾರಾಜರ ಮೂರ್ತಿಯು ಕಳಪೆ ಗುಣಮಟ್ಟದಿಂದ ಕೂಡಿದ ಹಿನ್ನಲೆಯಲ್ಲಿ ಕೆಲವೇ ದಿನಗಳಲ್ಲಿ ಅದು ಶಿಥಿಲಗೊಂಡಿತ್ತು. ಆದರೆ ಮರು ಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ …
Read More »ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಸಿಹಿ ಸುದ್ದಿ
ಕೋವಿಡ್ ಕಾರಣಗಳಿಂದ ಫೆ.4ರಂದು ಬಿಡುಗಡೆಯಾಗಬೇಕಿದ್ದ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಚಿತ್ರ ಆಚಾರ್ಯ ಯುಗಾದಿಗೆ ಬಿಡುಗಡೆಯಾಗಲಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ ಚಿತ್ರತಂಡ, ಈ ಯುಗಾಇಗೆ ಮೆಗಾಸ್ಟಾರ್ ಅವರ ಮಾಸ್ ಚಿತ್ರವನ್ನು ಬೆಳ್ಳಿತೆರೆ ಮೇಲೆ ನೋಡಲಿದ್ದೀರಿ. ಏ.1ಕ್ಕೆ ಆಚಾರ್ಯ ಬಿಡುಗಡೆಯಾಗಲಿದೆ ಎಂದಿದೆ.
Read More »97 ವರ್ಷಗಳ ಇತಿಹಾಸದಲ್ಲಿ ಬ್ರ್ಯಾಂಡ್ ರಾಯಭಾರಿ ನೇಮಿಸಿದ ಭೀಮ ಜುವೆಲರ್ಸ್
ಬೆಂಗಳೂರು: ಭೀಮ ಜುವೆಲರ್ಸ್ನ ಮೊದಲ ರಾಯಭಾರಿ ಆಗಿ ನಟಿ ಪೂಜಾ ಹೆಗ್ಡೆ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದೆ. ತನ್ನ 97 ವರ್ಷಗಳ ಇತಿಹಾಸದಲ್ಲಿ ಬ್ರ್ಯಾಂಡ್ ರಾಯಭಾರಿಯನ್ನು ನೇಮಿಸುತ್ತಿರುವುದು ಇದೇ ಮೊದಲು ಎಂದು ಕಂಪನಿಯು ತಿಳಿಸಿದೆ. ‘ಹೊಸ ಮಾರುಕಟ್ಟೆಗಳು ಮತ್ತು ಹೊಸ ಗ್ರಾಹಕರನ್ನು ತಲುಪಲು ಪೂಜಾ ಹೆಗ್ಡೆ ಅವರು ನಮಗೆ ನೆರವಾಗಲಿದ್ದಾರೆ’ ಎಂದು ಭೀಮ ಜುವೆಲರ್ಸ್ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





