Breaking News

admin

ಕ್ರಿಸ್‍ಮಸ್ ದಿನ ಬಡ ಮಕ್ಕಳೊಂದಿಗೆ ಕಾಲಕಳೆದ ಶ್ವೇತಾ ಶ್ರೀವಾತ್ಸವ್

ಬೆಂಗಳೂರು: ಚಂದನವನದ ಸಿಂಪಲ್ ಬ್ಯೂಟಿ ಶ್ವೇತಾ ಶ್ರೀವಾತ್ಸವ್ ಕ್ರಿಸ್‍ಮಸ್ ದಿನ ಬಹಳ ಅರ್ಥ ಪೂರ್ಣವಾಗಿ ಕಳೆದಿದ್ದು, ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ವೇತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಅವರು ಮಾಡುವ ವರ್ಕೌಟ್ ಮತ್ತು ದಿನನಿತ್ಯದ ವಿಶೇಷ ಭಾಗವನ್ನು ಫೋಟೋ ಅಥವಾ ವೀಡಿಯೋ ಮೂಲಕ ಅಭಿಮಾನಿಗಳಿಗೆ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಇಂದು ಅವರು ವಿಶೇಷ ವೀಡಿಯೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ಕ್ರಿಸ್ಮಸ್ ಸಮಯವನ್ನು ನಾನು ಚೆನ್ನಾಗಿ ಕಳೆದಿದ್ದೇನೆ. ಈ …

Read More »

ಮಾತೃ ಭಾಷೆ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ-ಕುಮಾರಸ್ವಾಮಿ

ಬೆಂಗಳೂರು: ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ. ಕೇಂದ್ರ ಸರ್ಕಾರ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕಲಾಗುತ್ತಿದೆ. ಮತ್ತು ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಭಾನುವಾರ ನಡೆಸಿದ ಯುಜಿಸಿ-ಎನ್‍ಇಟಿ ಕನ್ನಡ ಐಚ್ಛಿಕ ಭಾಷೆಯ ಪ್ರಶ್ನೆ ಪತ್ರಿಕೆಯಲ್ಲಿ 100ರಲ್ಲಿ 90 ರಷ್ಟು ಪ್ರಶ್ನೆಗಳು ಹಿಂದಿ ಭಾಷೆಯಲ್ಲಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೀಡಿ ಪರೀಕ್ಷೆಯನ್ನು …

Read More »

ಯೋಗಿ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ – ಯುಪಿ ಸಚಿವ

ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದರೆ, ಆಲ್‌ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಹಿಂದೂಗಳ ಜನಿವಾರವನ್ನು ಧರಿಸುತ್ತಾರೆ ಎಂದು ಯುಪಿಯ ಪಂಚಾಯತ್‌ರಾಜ್ ಸಚಿವ ಭೂಪೇಂದ್ರ ಸಿಂಗ್ ಚೌಧರಿ ಹೇಳಿದ್ದಾರೆ. ಚೌಧರಿ ಅವರು ಶಾಮ್ಲಿಯಲ್ಲಿ ನಡೆದ ಯುವಜನರ ಸಮಾವೇಶದಲ್ಲಿ ಯೋಗಿ ಆದಿತ್ಯನಾಥನ್ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ ಮತ್ತು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾರೆ ಎಂದಿದ್ದಾರೆ.ಬಿಜೆಪಿಯ ಸಿದ್ಧಾಂತವನ್ನು ಬಲಪಡಿಸುವ ಮಧ್ಯೆ, …

Read More »

ಹು-ಧಾ ಅವಳಿನಗರದ ರಸ್ತೆ ತಗ್ಗು ಗುಂಡಿಗಳನ್ನು ಮುಚ್ಚಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ಗಣಹೋಮ

ಹುಬ್ಬಳ್ಳಿ: ಹು-ಧಾ ಮಹಾನಗರ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಹಾಗೂ ನಗರದೆಲ್ಲೆಡೆ ತೆರೆದುಕೊಂಡಿರುವ ಗುಂಡಿಗಳನ್ನು ಕೂಡಲೇ ಮುಚ್ಚಬೇಕೆಂದು ಒತ್ತಾಯಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದರು. ನಗರದ ಕೊಪ್ಪಿಕರ ರಸ್ತೆಯ ಮಧ್ಯದಲ್ಲಿ ಹೋಮ ಕುಂಡ ನಿರ್ಮಿಸಿ, ಸಂಕಲ್ಪ ಗಣಹೋಮ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು. ಈ ವೇಳೆ ಇಬ್ಬರು ಅರ್ಚಕರಿಂದ ಮಂತ್ರಘೋಷ ಪಟಣದ ಮೂಲಕ ಶಾಸ್ತ್ರೋಕ್ತವಾಗಿ ಗಣಹೋಮ‌ ನೆರವೇರಿಸಿದರು. ಈ ವೇಳೆ ಮಾತನಾಡಿದ ಹು-ಧಾ ಮಹಾನಗರ …

Read More »

ಅಫ್ಗಾನಿಸ್ತಾನ: ಚುನಾವಣಾ ಆಯೋಗ ವಿಸರ್ಜಿಸಿದ ತಾಲಿಬಾನ್ ಸರ್ಕಾರ

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ತಾಲಿಬಾನ್ ಸರ್ಕಾರವು, ಅಲ್ಲಿನ ಚುನಾವಣಾ ಆಯೋಗಗಳು ಹಾಗೂ ಶಾಂತಿ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯವನ್ನು ವಿಸರ್ಜಿಸಿದೆ. ದೇಶದ ಸ್ವತಂತ್ರ ಚುನಾವಣಾ ಆಯೋಗ, ಚುನಾವಣಾ ದೂರು ಆಯೋಗ ಹಾಗೂ ಶಾಂತಿ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯವನ್ನು ವಿಸರ್ಜಿಸಲಾಗಿದೆ ಎಂದು ಸರ್ಕಾರದ ಉಪ ವಕ್ತಾರ ಬಿಲಾಲ್ ಕರೀಮಿ ತಿಳಿಸಿದ್ದಾರೆ. ‘ಅಫ್ಗಾನಿಸ್ತಾನದ ಸದ್ಯದ ಸನ್ನಿವೇಶಕ್ಕೆ ಅವು ಅನಗತ್ಯ ಸಂಸ್ಥೆಗಳಾಗಿವೆ’ ಎಂದು ಹೇಳಿರುವ ಕರೀಮಿ, ಭವಿಷ್ಯದಲ್ಲಿ ಅವುಗಳ ಅಗತ್ಯವಿದೆ ಎನಿಸಿದರೆ, ತಾಲಿಬಾನ್ ಸರ್ಕಾರ …

Read More »

ಉಡುಪಿ ಭಾಷಣ ವಿವಾದ – ಹೇಳಿಕೆಯನ್ನು ಹಿಂಪಡೆದ ತೇಜಸ್ವಿ ಸೂರ್ಯ

ಬೆಂಗಳೂರು: ಉಡುಪಿ ಮಾಡಿದ ಭಾಷಣ ವಿವಾದವಾಗುತ್ತಿದ್ದಂತೆ ಸಂಸದ ತೇಜಸ್ವಿ ಸೂರ್ಯ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಬಗ್ಗೆ ತಮ್ಮ ಟ್ವೀಟ್ ಮಾಡಿದ ಅವರು, ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದಲ್ಲಿ ಹಿಂದೂ ಪುನರುತ್ಥಾನ ಆಗಬೇಕು ಎನ್ನುವ ವಿಷಯದ ಕುರಿತು ಮಾತನಾಡಿದ್ದೆ. ಆದರೆ ನನ್ನ ಭಾಷಣದ ಕೆಲವು ಹೇಳಿಕೆಗಳು ವಿವಾದವನ್ನು ಸೃಷ್ಟಿಸಿವೆ. ಹಾಗಾಗಿ ಹೇಳಿಕೆಗಳನ್ನು ಹಿಂಪಡೆಯುತ್ತೇನೆ ಎಂದಿದ್ದಾರೆ. ಉಡುಪಿ ಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಹಿಂದೂ …

Read More »

ಸ್ಮೃತಿ ಇರಾನಿ ಪುತ್ರಿ ನಿಶ್ಚಿತಾರ್ಥ: ಫೋಟೋ ಪೋಸ್ಟ್ ಮಾಡಿದ ಕೇಂದ್ರ ಸಚಿವೆ

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ತಮ್ಮ ಮಗಳ ನಿಶ್ಚತಾರ್ಥದ ಫೋಟೋವನ್ನು ಡಿಸೆಂಬರ್ 25ರಂದು ಇನ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಪುತ್ರಿ ಶಾನೆಲ್ಲೆ ಇರಾನಿ ನಿಶ್ಚಿತಾರ್ಥಕ್ಕೆ ಶುಭಕೋರಿದ್ದಾರೆ. ಸ್ಮೃತಿ ಇರಾನಿ ಹಂಚಿಕೊಂಡಿರುವ ಮೊದಲ ಫೋಟೋದಲ್ಲಿ ಶಾನೆಲ್ಲೆ​ಗೆ ಅರ್ಜುನ್ ಮೊಣ ಕಾಲಿನ ಮೇಲೆ ಕುಳಿತು ಪ್ರೀತಿಯ ನಿವೇದನೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಎರಡನೇ ಚಿತ್ರದಲ್ಲಿ ಅರ್ಜುನ್ ಭಲ್ಲಾ ಮತ್ತು ಶಾನೆಲ್ಲೆ ನಿಶ್ಚಿತಾರ್ಥದ ಬಳಿಕ ತೆಗೆದುಕೊಂಡಿರುವ ಸೆಲ್ಫಿ ಫೋಟೋ ಕಾಣಬಹುದಾಗಿದೆ. ಫೋಟೋ ಶೇರ್​ ಮಾಡುವುದರೊಂದಿಗೆ …

Read More »

ಕೋಡಿಮಠದ ಶ್ರೀಗಳ ಭವಿಷ್ಯ ನಿಜವಾಯ್ತಾ? ಮುಂದಿನ ದಿನಗಳ ಬಗ್ಗೆ ಶ್ರೀಗಳು ಹೇಳಿದ್ದೇನು?

ಹಾವೇರಿ : ಕೋಡಿಮಠದ ಶ್ರೀಗಳು ಆಗಾಗ ಕೆಲವೊಂದಿಷ್ಟು ಬಾರಿ ಜಗತ್ತನ್ನು ಉದ್ದೇಶಿಸಿ ಹಾಗೂ ಜನರ ಒಳಿತನ್ನು ಉದ್ದೇಶಿಸಿ ಮುಂಬರುವ ರಾಜಕೀಯದ ವಿಚಾರಗಳನ್ನು ಹೇಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಕೆಲವೊಂದಿಷ್ಟು ಭವಿಷ್ಯ ನುಡಿದು ಜನರಿಗೆ ಮುನ್ಸೂಚನೆ ನೀಡುತ್ತಾರೆ. ಆದರೆ, ಈ ಕೋಡಿ ಮಠದ ಶ್ರೀಗಳ ಮಾತನ್ನು ಕೆಲವರು ನಂಬುವುದಿಲ್ಲ. ಇನ್ನೂ ಕೆಲವರು ಅವರ ಮಾತಿನ ಮೇಲೆ ನಿಲ್ಲುತ್ತಾರೆ. ಹೌದು ಇತ್ತೀಚಿಗಷ್ಟೇ ರಾಣೆಬೆನ್ನೂರಿನಲ್ಲಿ ಕೋಡಿಮಠದ ಶ್ರೀಗಳಾದ ಶಿವಾನಂದ ಸ್ವಾಮೀಜಿ ಅವರು ನಡೆಸಿದ …

Read More »

ಮಹಾತ್ಮ ಗಾಂಧಿಯನ್ನು ತೆಗಳಿದ್ದ ಹಿಂದೂ ಧಾರ್ಮಿಕ ಮುಖಂಡನ ವಿರುದ್ಧ ಎಫ್‌ಐಆರ್

ರಾಯ್‌ಪುರ: ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮತ್ತು ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ವಿರುದ್ಧ ‘ದ್ವೇಷಪೂರಿತ ಹಾಗೂ ಪ್ರಚೋದನಕಾರಿ’ ಹೇಳಿಕೆ ನೀಡಿದ ಆರೋಪದ ಮೇಲೆ ಛತ್ತೀಸ್‌ಗಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಸಂಜೆ ರಾಯ್‌ಪುರದಲ್ಲಿ ನಡೆದ ಎರಡು ದಿನಗಳ ಧರ್ಮ ಸಂಸದ್‌ ಸಮ್ಮೇಳನದಲ್ಲಿ ಕಾಳಿಚರಣ್, ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದವನ್ನು ಬಳಸಿದ್ದರು ಮತ್ತು …

Read More »

ವಿ.ಡಿ. ಸಾವರ್ಕರ್ ಕುರಿತ ಹೇಳಿಕೆ ವಿವಾದ: ಸಮಾಜವಾದಿ ನಾಯಕನಿಗೆ ಕರೆ ಮಾಡಿ ಬೆದರಿಕೆಯೊಡ್ಡಿದ ಅಪರಿಚಿತ

ಪಾಟ್ನಾ: ಬಿಹಾರದ ಹಿರಿಯ ಸಮಾಜವಾದಿ ನಾಯಕ ಶಿವಾನಂದ ತಿವಾರಿ ಅವರೆ ಫೋನ್ ಕರೆ ಮಾಡಿದ ದುಷ್ಕರ್ಮಿಯೋರ್ವ ನಿಂದಿಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಶಿವಾನಂದ ತಿವಾರಿ ಅವರು ಇತ್ತೀಚಿಗಷ್ಟೆ ಪತ್ರಿಕಾ ಸಂದರ್ಶನವೊಂದರಲ್ಲಿ ವಿ.ಡಿ ಸಾವರ್ಕರ್ ಕುರಿತಾಗಿ ಹೇಳಿಕೆಯನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಸಾವರ್ಕರ್ ಅವರಿಗೆ ಗೋವನ್ನು ಪೂಜಿಸುವ ಪರಿಕಲ್ಪನೆ ಸುತಾರಾಂ ಇಷ್ಟವಿರಲಿಲ್ಲ ಎಂದಿದ್ದರು. ಶಿವಾನಂದ ತಿವಾರಿ ಅವರು ಜಯಪ್ರಕಾಶ್ ನಾರಾಯಣ್ ಹಾಗೂ ರಾಮಮನೋಹರ್ ಲೋಹಿಯ ಥರದ ಮಹಾನ್ ನಾಯಕರೊಡನೆ ಅವರೊಂದಿಗೆ ಕೆಲಸ …

Read More »