ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದರೆ, ಆಲ್‌ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಹಿಂದೂಗಳ ಜನಿವಾರವನ್ನು ಧರಿಸುತ್ತಾರೆ ಎಂದು ಯುಪಿಯ ಪಂಚಾಯತ್‌ರಾಜ್ ಸಚಿವ ಭೂಪೇಂದ್ರ ಸಿಂಗ್ ಚೌಧರಿ ಹೇಳಿದ್ದಾರೆ.

ಚೌಧರಿ ಅವರು ಶಾಮ್ಲಿಯಲ್ಲಿ ನಡೆದ ಯುವಜನರ ಸಮಾವೇಶದಲ್ಲಿ ಯೋಗಿ ಆದಿತ್ಯನಾಥನ್ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ ಮತ್ತು ಭಗವಾನ್ ರಾಮನ ಹೆಸರನ್ನು ಜಪಿಸುತ್ತಾರೆ ಎಂದಿದ್ದಾರೆ.ಬಿಜೆಪಿಯ ಸಿದ್ಧಾಂತವನ್ನು ಬಲಪಡಿಸುವ ಮಧ್ಯೆ, ರಾಹುಲ್ ಗಾಂಧಿ ಅವರು ಜನಿವಾರವನ್ನು ಧರಿಸಿದ್ದು, ಅಖಿಲೇಶ್ ಯಾದವ್ ಹನುಮಾನ್ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಾಯಕರ ಪಟ್ಟಿಯಲ್ಲಿ ಈ ಹೇಳಿಕೆ ಸೇರುತ್ತದೆ ಎಂದು ಚೌಧರಿ ಪ್ರತಿಪಾದಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

