Breaking News

admin

ಆಶ್ರಯ ಮನೆ ಹಂಚಿಕೆ ಮಾಡುವಂತೆ ಒತ್ತಾಯ-ಜೆಡಿಎಸ್‌ ಕಾರ್ಯಕರ್ತರಿಂದ ಮುತ್ತಿಗೆ

ಧಾರವಾಡ: ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಾಣವಾಗಿರುವ ಆಶ್ರಯ ಮನೆಗಳನ್ನು ಶೀಘ್ರ ಹಂಚಿಕೆ ಮಾಡುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಧಾರವಾಡದ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.. ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ 1600 ಮನೆಗಳು, ಲಕಮನಹಳ್ಳಿ, ರಾಜೀವಗಾಂಧಿನಗರದಲ್ಲಿ 1070 ಮನೆಗಳು ನಿರ್ಮಾಣವಾಗಿವೆ. ಆದರೆ, ಕಳೆದ ಮೂರು ವರ್ಷಗಳಿಂದ ಅರ್ಹ ಫಲಾನುಭವಿಗಳಿಗೆ ಮನೆಗಳು ಹಂಚಿಕೆಯಾಗದೇ ಆ ಮನೆಗಳು ಇದೀಗ ಹಾಳಾಗುತ್ತಿವೆ. ಕಳೆದ 7 ವರ್ಷಗಳ ಹಿಂದೆ …

Read More »

ರಸ್ತೆ ನಡುವೆಯೇ ಮದ್ಯ ತುಂಬಿದ್ದ ಬಾಕ್ಸ್‌ಗೆ ಬೆಂಕಿ ಹಚ್ಚಿದ ಯುವಕರು

ಹಾಸನ: ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡರಜಗಲಿ ಗ್ರಾಮದಲ್ಲಿ ಯುವಕರೇ ಅಕ್ರಮ ಮದ್ಯ ಮಾರಾಟ ತಡೆಗೆ ಮುಂದಾಗಿದ್ದು, ಗ್ರಾಮಕ್ಕೆ ತಲುಪಿದ್ದ ಮದ್ಯ ವಶಕ್ಕೆ ಪಡೆದು ನಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 15 ದಿನಗಳ ಹಿಂದೆ ಗ್ರಾಮ ಚನ್ನಯ್ಯ ಅವರ ಪತ್ನಿ ಮದ್ಯ ಸೇವನೆಯಿಂದ ಮೃತಪಟ್ಟಿದ್ದರು. ಇದರಿಂದ ಎಚ್ಚೆತ್ತ ಗ್ರಾಮದ ಯುವಕರು ಗ್ರಾಮದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲು ನಿರ್ಧರಿಸಿದ್ದರು. ಅದರಂತೆ ಬ್ಯಾಡರಜಗಲಿ ಗ್ರಾಮದಲ್ಲಿ ಮದ್ಯ ಮಾರಾಟ …

Read More »

ದುಬೈ ದೊರೆಯಿಂದ 6ನೇ ಪತ್ನಿ ಹಯಾಗೆ 5,527 ಕೋಟಿ ರೂ. ಜೀವನಾಂಶ-ಬ್ರೀಟನ್‌ ಇತಿಹಾಸದಲ್ಲೇ ದುಬಾರಿ ವಿಚ್ಚೇಧನ

ಲಂಡನ್‌ : ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ತಮ್ಮ ಆರನೇ ಪತ್ನಿ, ರಾಜಕುಮಾರಿ ಹಯಾ ಬಿಂಟ್‌ ಅಲ್ ಹುಸೇನ್‌ಗೆ ನೀಡಿದ್ದ ವಿಚ್ಛೇದನ ಇತ್ಯರ್ಥವಾಗಿದೆ. ಒಟ್ಟು 5,527 ಕೋಟಿ ರೂಪಾಯಿ ಜೀವನಾಂಶ ಪಾವತಿಸುವಂತೆ ಬ್ರಿಟನ್‌ ನ್ಯಾಯಾಲಯ ಆದೇಶ ನೀಡಿದೆ. ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾಗೆ ಪಾವತಿಸಬೇಕು ಎಂದು ಹೇಳಿದೆ. ರಶೀದ್ ಅವರ ಪತ್ನಿಯರ ಪೈಕಿ ಹಯಾ ಕಿರಿಯವರಾಗಿದ್ದು, ದಂಪತಿಗೆ ಅಲ್ ಜಲಿಲಿಯಾ(14), …

Read More »

ಜನರ ಭಾವನೆಗಳನ್ನು ಬೇರೆಡೆ ಸೆಳೆಯಲು ಬಿಜೆಪಿ ಸಂವಿಧಾನ ಬಾಹಿರ ಕಾನೂನು ಜಾರಿಗೆ ತರುತ್ತಿದೆ-ಸಿದ್ಧರಾಮಯ್ಯ

ಬೆಳಗಾವಿ: ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಕಳ್ಳರ ಹಾಗೆ ಜಾರಿಗೆ ತಂದಿದ್ದಾರೆ. ಹೀಗಾಗಿ, ಸದನದ ಹೊರಗೆ ಮತ್ತು ಒಳಗೂ ಕಾನೂನು‌ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದವರು ಸಂವಿಧಾನ ಬಾಹಿರ ಕಾನೂನು ಜಾರಿಗೆ ತರುತ್ತಿದ್ದಾರೆ. ಇವತ್ತಿನವರೆಗೆ ಆಮಿಷ ಹಾಗೂ ಪ್ರಚೋದನೆಗಳಿಗೆ ಮತಾಂತರವಾಗಿದ್ದು ಬಹಳ ಕಡಿಮೆ. ಏನಾದರೂ ಮತಾಂತರವಾಗಿದ್ದರೆ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯಿಂದ ಅವಮಾನವಾಗಿ ಆರ್ಥಿಕ …

Read More »

ಹಣ ದ್ವಿಗುಣ ವಂಚನೆ ಪ್ರಕರಣ : ಚಿತ್ರದುರ್ಗ ನಗರಸಭೆ ಜೆಡಿಎಸ್​ ಸದಸ್ಯ ಬಂಧನ

ಚಿತ್ರದುರ್ಗ : ಹಣ ದ್ವಿಗುಣ ವಂಚನೆ ಆರೋಪದ ಮೇಲೆ ಇಲ್ಲಿನ ನಗರಸಭೆ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ನಗರಸಭೆಯ 4ನೇ ವಾರ್ಡ್ ಜೆಡಿಎಸ್ ಸದಸ್ಯ ಚಂದ್ರಶೇಖರ್ ಅಲಿಯಾಸ್ ಚಂದ್ರು ಬಂಧಿತ ಆರೋಪಿಯಾಗಿದ್ದಾರೆ. ಚಂದ್ರಶೇಖರ್ ಖೋಟಾ ನೋಟು ಕಿಂಗ್ ಪಿನ್ ಎಂದೇ ಕುಖ್ಯಾತನಾಗಿರುವ. ಸಾಕಷ್ಟು ಪ್ರಕರಣಗಳಲ್ಲಿ ಬೇಕಾಗಿದ್ದ. ಆದರೆ, ಯಾವುದೇ ದಾಖಲೆಗಳು ಸಿಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಇತ್ತೀಚೆಗೆ ದೊಡ್ಡಬಳ್ಳಾಪುರ ಮೂಲದ ನಾಗರಾಜ್ ಎಂಬುವರಿಗೆ ವಂಚಿಸಿರುವ ಬಗ್ಗೆ ಚಿತ್ರದುರ್ಗದಲ್ಲಿ ಚಂದ್ರಶೇಖರ್ ವಿರುದ್ದ ಪ್ರಕರಣ …

Read More »

ಬಸವಣ್ಣ- ಅಂಬೇಡ್ಕರ್ ಸಿದ್ಧಾಂತಗಳಿಗೆ ಸರ್ಕಾರ ಅಪಚಾರ : ಡಿಕೆ ಶಿವಕುಮಾರ

ಬೆಳಗಾವಿ:– ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸುವ ಮೂಲಕ ರಾಜ್ಯ ಸರ್ಕಾರ ಬಸವಣ್ಣ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಗಳಿಗೆ ಅಪಚಾರ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ನೆ ಶತಮಾನದಲ್ಲಿ ಎಲ್ಲ ಸಮುದಾಯಗಳಿಗೂ ಲಿಂಗಧಾರಣೆ ಮಾಡುವ ಮೂಲಕ ಬಸವಣ್ಣ ಸಮಾನತೆಯ ತತ್ವ ಸಾರಿದ್ದರು. ಅಂಬೇಡ್ಕರ್ ಅವರು ಬೌದ್ಧ ಧರ್ಮದ ಬಗ್ಗೆ ಪ್ರಚಾರ ಮಾಡಿದ್ದರು. ಆದರೆ, ಬಿಜೆಪಿಯವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು …

Read More »

ಲಂಕಾ ಕ್ರಿಕೆಟಿಗರು ಫಿಟ್‌ನೆಸ್‌ ಕಳೆದುಕೊಂಡರೆ ವೇತನ ಕಡಿತ !

ಕೊಲಂಬೊ: ರಾಷ್ಟ್ರೀಯ ತಂಡದ ಆಟಗಾರರ ಫಿಟ್‌ನೆಸ್‌ ವಿಚಾರದಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದರಂತೆ ಮುಂದಿನ ವರ್ಷದಿಂದ ಆಟಗಾರರು ಕಟ್ಟುನಿಟ್ಟಿನ ಫಿಟ್‌ನೆಸ್‌ ಪರೀಕ್ಷೆಗೆ ಒಳಪಡಲಿದ್ದು, ಇಲ್ಲಿ ಅನುತ್ತೀರ್ಣರಾದ ಆಟಗಾರ ವೇತನ ಕಡಿತ ಮಾಡಲು ನಿರ್ಧರಿಸಿದೆ!ಲಂಕಾ ಕ್ರಿಕೆಟ್‌ ಮಂಡಳಿ ಕಳೆದ ವರ್ಷ ರೂಪಿಸಿದ್ದ ನಿಯಮಾನುಸಾರ ಆಟಗಾರರು 8 ನಿಮಿಷ, 55 ಸೆಕೆಂಡ್‌ಗಳಲ್ಲಿ 2 ಕಿ.ಮೀ. ಓಟವನ್ನು ಪೂರೈಸಬೇಕಿತ್ತು.ಇದಕ್ಕೂ ಮುನ್ನ ಈ ದೂರವನ್ನು 8 ನಿಮಿಷ, 35 ಸೆಕೆಂಡ್‌ಗಳಲ್ಲಿ ಪೂರೈಸುವಂತೆ ಸೂಚಿಸಲಾಗಿತ್ತು. …

Read More »

ದೈಹಿಕ ಸಂಬಂಧದ ನಂತರ ಮದುವೆಯಾಗಲು ನಿರಾಕರಿಸುವುದು ಮೋಸವಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಪರಸ್ಪರ ಒಪ್ಪಿಗೆಯೊಂದಿಗೆ ದೀರ್ಘಾವಧಿಯವರೆಗೆ ದೈಹಿಕ ಸಂಬಂಧಗಳನ್ನು ಉಳಿಸಿಕೊಂಡ ನಂತರ ಮದುವೆಯಾಗಲು ನಿರಾಕರಿಸುವುದನ್ನು ವಂಚನೆ ಎಂದು ಕರೆಯಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಸಂತ್ರಸ್ತೆ ಪಾಲ್ಘರ್ ನಿವಾಸಿಯೊಬ್ಬರು ಮೂರು ವರ್ಷಗಳಕಾಲ ಮದುವೆಯ ನೆಪದಲ್ಲಿ ದೈಹಿಕ ಸಂಬಂಧವನ್ನು ಹೊಂದಿದ್ದರು ಮದುವೆ ಮಾಡಿಕೊಳ್ಳುವಂತೆ ಕೇಳಿದ್ದಾಗ ಯುವಕ ನಿರಾಕರಿಸಿದ್ದಾನೆ ಅಂತ ಯುವತಿ ನ್ಯಾಯಾಕ್ಕಾಗಿ ಮನವಿ ಸಲ್ಲಿಸಿದ್ದಳು. ಇದೇ ವೇಳೇ ಆರೋಪಿಯ ಮೇಲೆ ಅತ್ಯಾಚಾರ ಮತ್ತು ವಂಚನೆಗಾಗಿ ಸೆಕ್ಷನ್ 376 ಮತ್ತು 417 ರ ಅಡಿಯಲ್ಲಿ …

Read More »

ಡಿಸೆಂಬರ್‌ 31 ಕ್ಕೆ ಕರ್ನಾಟಕ ಬಂದ್‌ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡುವಂತೆ ಆಗ್ರಹಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಂಇಎಸ್ ನಿಷೇಧಿಸುವಂತೆ ಒತ್ತಾಯಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಮಾಡಲಾಗುವುದು. ಡಿಸೆಂಬರ್ 31 ರ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ. ಕರ್ನಾಟಕ ಬಂದ್ …

Read More »

ತೃತೀಯ ಲಿಂಗಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ಅವಕಾಶ..!

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ನೀಡುವ ಮೂಲಕ ಸ್ವಾಗತಾರ್ಹ ಮತ್ತು ಪ್ರಗತಿಪರ ಹೆಜ್ಜೆ ಇಟ್ಟಿದ್ದು, ಕೆಎಸ್‌ಆರ್‌ಪಿ ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ ವಿಶೇಷ ಮೀಸಲು ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಪುರುಷ, ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಳೆದ ವರ್ಷ ನಗರದ ಎನ್‌ಜಿಒ ಮತ್ತು ಹಕ್ಕುಗಳ ಸಂಘ – ಸಂಗಮ ಹಾಗೂ ಸಾಮಾಜಿಕ ಕಾರ್ಯಕರ್ತೆ ನಿಶಾ ಗೂಳೂರ್ ಪರ ಹಿರಿಯ ವಕೀಲ ಬಿಟಿ ವೆಂಕಟೇಶ್ …

Read More »