Breaking News

1ರೂ. ಶುಲ್ಕ ನಿಗದಿ ಮೇರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ‘ಆನ್‌ಲೈನ್’ ತರಬೇತಿ


ಕಲಘಟಗಿ: ಮಾಜಿ ಸಚಿವ ಸಂತೋಷ್ ಲಾಡ್ ಫೌಂಡೇಷನ್‌ ವತಿಯಿಂದ ಫೆ.2ರಿಂದ ಕೆ.ಎ.ಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ‘ಆನ್‌ಲೈನ್’ ತರಬೇತಿ ನೀಡಲಾಗುತ್ತಿದ್ದು, ಅಭ್ಯರ್ಥಿಗಳಿಗೆ ₹1 ಶುಲ್ಕ ನಿಗದಿ ಪಡಿಸಲಾಗಿದೆ.

ಧಾರವಾಡದ ವಿಶ್ವದರ್ಶನ ಕರಿಯರ ಅಕಾಡೆಮಿ ಸಹಕಾರದೊಂದಿಗೆ ಕೆ.ಎ.ಎಸ್, ಪಿ.ಎಸ್.ಐ, ಎಫ್.ಡಿ.ಎ, ಎಸ್.ಡಿ.ಎ, ಪಿ.ಡಿ.ಒ, ಪೊಲೀಸ್, ಟಿ.ಇ.ಟಿ, ಸಿ.ಇ.ಟಿ, ಗ್ರೂಪ್ ಸಿ, ಎಸ್.ಎಸ್.ಇ, ಬ್ಯಾಕಿಂಗ್ ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿ ನೀಡಲಾಗುತ್ತದೆ.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ನೋಂದಣಿ, ಹಾಗೂ ಮತ್ತಿತರ ಮಾಹಿತಿ ಪಡೆಯಲು 72044-32147, 72044-34147, 90191-03524, 86189-14461 ಸಂಖ್ಯೆಗೆ ಕರೆ ಮಾಡಬಹುದು.

Share News

About admin

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *