ಕುಂದಗೋಳ : ತಮ್ಮಬದುಕಿನ ಅವಧಿಯಲ್ಲಿ ಸದಾ ಒಂದಿಲ್ಲೊಂದು ಗ್ರಾಮೀಣ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ್ದ ಮಾಜಿ ಸಚಿವ ಸಿ.ಎಸ್.ಶಿವಳ್ಳಿಯವರ ಸ್ಮರಣಾರ್ಥವಾಗಿಯರಗುಪ್ಪಿಯಲ್ಲಿ ರಾಜ್ಯಮಟ್ಟದ ಟಗರಿನ ಕಾಳಗ ಸ್ಪರ್ಧೆ ಆರಂಭಗೊಂಡಿದೆ . ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹಾಗೂ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ , ಟಗರು ಕಾಳಗ ಸ್ಪರ್ಧೆಗೆ ಚಾಲನೆ ನೀಡಲಾಯಿತು . ಕುಂದಗೋಳ ತಾಲೂಕು ಸೇರಿದಂತೆ ವಿವಿಧೆಡೆಯಿಂದ ಕ್ರೀಡಾ ಪ್ರೇಮಿಗಳು ತಮ್ಮ ತಮ್ಮ ಟಗರುಗಳನ್ನು ಸ್ಪರ್ಧೆಗೆ ತಂದಿದ್ದಾರೆ.ಯರಗುಪ್ಪಿಯಲ್ಲಿ ನಡೆಯುತ್ತಿರುವ …
Read More »ಶ್ರೀ ಸಿದ್ಧಾರೂಢ ಮಹಾಸ್ವಾಮಿ ಅವರಿಗೆ ಇಂದು ವಿಶೇಷ ಪೂಜೆ
ಹುಬ್ಬಳ್ಳಿ : ವಾಣಿಜ್ಯ ನಗರದ ಪ್ರಸಿದ್ಧ ಸ್ಥಳವಾದದ ಶ್ರೀ ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಇಂದು ವಿಶೇಷ ಸೋಮವಾರ ಅಂಗವಾಗಿ ವಿಶೇಷ ಅಲಂಕಾರದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳ ಅಜ್ಜನವರಿಗೆ ವಿಶೇಷ ಹೂವಿನ ಅಲಂಕಾರ ಮೂಲಕ ಪೂಜೆ ಮಾಡಲಾಯಿತು . ಇಂದು ಮುಂಜಾನೆಯಿಂದಲೇ ಬರುವ ಭಕ್ತರ ಸಂಖ್ಯೆ ಹೆಚ್ಚಳ ಇರುವ ಕಾರಣ ಪ್ರತ್ಯೇಕ ದರ್ಶನದ ವ್ಯವಸ್ಥೆ ಮಾಡಲಾಗಿದೆ . ಎಲ್ಲರಿಗೂ ಮಾಸ್ಕ್ ಹಾಗೂ …
Read More »ಇಂದಿನ ಹವಾಮಾನ ವರದಿ
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇದು ಚಂಡಮಾರುತವಾಗಿ ಬದಲಾವಣೆಯಾಗುವ ನಿರೀಕ್ಷೆ ಇದ್ದು , ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ . ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು , ಕನಿಷ್ಟ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ . ಸಂಜೆ ವೇಳೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ . ಜೊತೆ ದಕ್ಷಿಣ ಒಳನಾಡು ಸೇರಿ ಮಲೆನಾಡು ಭಾಗದಲ್ಲಿ ಮೋಡ ಕವಿದ ವಾತಾವರಣ …
Read More »ಶಿವಳ್ಳಿ ಪುತ್ಥಳಿ ಪ್ರತಿಷ್ಠಾಪನೆ : ಮುನೇನಕೊಪ್ಪ ಭಾಗಿ
ಕುಂದಗೋಳ : ದಿವಂಗತ ಶ್ರೀ ಸಿ.ಎಸ್.ಶಿವಳ್ಳಿರವರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮಾಜಿ ಸಚಿವರಾದ ಮುನೇನಕೊಪ್ಪ ಭಾಗವಹಿಸಿದರು . ಮಾಜಿ ಸಚಿವರಾದ ದಿವಂಗತ ಸಿ.ಎಸ್ . ಶಿವಳ್ಳಿ ರವರ ಕುಟುಂಬದ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು .
Read More »ಮಗನ ಪೋಟೋಕ್ಕೆ ಪೂಜೆ ಸಲ್ಲಿಸಿ ಕಣ್ಣೀರ ಇಟ್ಟ ತಾಯಿ
ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ಬೆಂಗಳೂರಿನಿಂದ ಸ್ವಗ್ರಾಮದತ್ತ ಆಗಮಿಸುತ್ತಿದ್ದು, ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇತ್ತ ಪುತ್ರನ ಫೋಟೋಗೆ ಪೂಜೆ ಸಲ್ಲಿಸಿ ಮಗನನ್ನು ನೆನೆದು ತಾಯಿ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದು, ಪಾರ್ಥಿವ ಶರೀರ 9 ಗಂಟೆಗೆ ಚಳಗೇರಿಯನ್ನು ತಲುಪಲಿದೆ ಎಂದು ಮೃತ ನವೀನ್ ತಂದೆ ತಿಳಿಸಿದ್ದಾರೆ.
Read More »ನವೀನ್ ಪಾರ್ಥೀವ ಶರೀರಕ್ಕೆ ವೀರಶೈವ ಸಂಪ್ರದಾಯದಂತೆ ಪೂಜೆ ಸಲ್ಲಿಕೆ
ಬೆಂಗಳೂರು : ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಸಾವನ್ನಪ್ಪಿದ್ದ ಭಾರತೀಯ ವಿದ್ಯಾರ್ಥಿ ನವೀನ್ ಪಾರ್ಥಿವ 21 ದಿನಗಳ ನಂತರ ತಾಯ್ನಾಡಿಗೆ ಮರಳಿದೆ. ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬಕ್ಕೆ ಹಸ್ತಾಂತರಿಸಿದರು. ನವೀನ್ ಪಾರ್ಥೀವ ಶರೀರಕ್ಕೆ ವೀರಶೈವ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗುತ್ತದೆ. ಅಂತಿಮ ವಿಧಿ ವಿಧಾನದ ಬಳಿಕ, ಊರಿನಲ್ಲಿ ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದೆ. ಈ ಬಳಿಕ ಅವರ ದೇಹವನ್ನು ಎಸ್ ಎಸ್ ಆಸ್ಪತ್ರೆಗೆ ದಾನವಾಗಿ ನೀಡಲಾಗುತ್ತದೆ ಎಂದು …
Read More »ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ : ಶಿವಶಂಕರಪ್ಪ
ದಾವಣಗೆರೆ : ಮುಂದೆ ಪಕ್ಷ ಅಧಿಕಾರಕ್ಕೆ ಬಂದ್ರೆ ನಾನು ಮುಖ್ಯಮಂತ್ರಿ ಆಕಾಂಕ್ಷಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ. ದಾವಣಗೆರೆ ದಕ್ಷಿಣದಿಂದ ಮುಂದೆ ಸ್ಪರ್ಧಿಸೋಕೆ ನನ್ನ ಬಳಿ ಹಣ ಇಲ್ವಾ?, ನನ್ನ ಬಳಿ ಶಕ್ತಿ ಇಲ್ವಾ..? ಎಂದು ಮಾಜಿ ಸಚಿವ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ, ಡಿಕೆ ಶಿವಕುಮಾರ್- ಸಿದ್ದರಾಮಯ್ಯ ಜೊತೆ ನಂದೂ ಸ್ಪರ್ಧೆ ಇದೆ. ದಾವಣಗೆರೆ ಉತ್ತರದಿಂದ …
Read More »ತಾಯ್ನಾಡಿಗೆ ಮರಳಿ ನವೀನ್ ಮೃತದೇಹ : ಪ್ರಧಾನಿಗೆ ಟ್ವೀಟ್ ಮಾಡಿದ ಸಿಎಂ
ಬೆಂಗಳೂರು: ಉಕ್ರೇನ್ನಲ್ಲಿ ಮೃತಪಟ್ಟಿದ್ದ ನವೀನ್ ಮೃತದೇಹ ತಾಯ್ನಾಡಿಗೆ ಮರಳಿದ್ದು, ಈ ಹಿನ್ನೆಲೆ ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, ನಿಮ್ಮ ಈ ಕಾಳಜಿಗೆ ನಾನು ಮತ್ತು ಕರ್ನಾಟಕದ ಜನತೆಯಿಂದ ಧನ್ಯವಾದ ಎಂದು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
Read More »ತಾಯ್ನಾಡಿಗೆ ಮರಳಿದ ನವೀನ್ ಪಾರ್ಥಿವ ಶರೀರ
ದೇವನಹಳ್ಳಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಸಾವನ್ನಪ್ಪಿದ್ದ ಭಾರತೀಯ ವಿದ್ಯಾರ್ಥಿ ನವೀನ್ ಪಾರ್ಥಿವ 21 ದಿನಗಳ ನಂತರ ತಾಯ್ನಾಡಿಗೆ ಮರಳಿದೆ. ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬಕ್ಕೆ ಹಸ್ತಾಂತರಿಸಿದರು. ದುಬೈ ಮೂಲಕ ಸೋಮವಾರ ಮುಂಜಾನೆ 3 ಗಂಟೆ ವೇಳೆ ನವೀನ್ ಪಾರ್ಥಿವ ಶರೀರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ್ ಉದಾಸಿ, ಸಚಿವ ಡಾ.ಕೆ.ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಇತರರು …
Read More »ಶಿವಳ್ಳಿ ನಾನು ಬೇಸ್ಟ್ ಫೇಂಡ್ಸ್ : ಸಿದ್ದರಾಮಯ್ಯ
ಕುಂದಗೋಳ : ಮಾಜಿ ಸಚಿವ ಎಸ್ ಶಿವಳ್ಳಿ ಪುಣ್ಯ ತಿಥಿ ಅಂಗವಾಗಿ ಪುತ್ಥಳಿ, ಸ್ಥಾಪನೆ ಲೋಕಾರ್ಪಣೆ ಗೋಸ್ಕರ ಹುಬ್ಬಳ್ಳಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಿ.ಸಚಿವ ಸಿಎಸ್ ಶಿವಳ್ಳಿ ನಾನು ಒಳ್ಳೆಯ ಫ್ರೆಂಡ್ ಆಗಿದ್ದವಿ ಆದರೇ ಅವರ ಅಗಲಿಕೆ ನಮಗೆ ಬಹಳ ನೋವುಂಟು ಮಾಡಿದೆ ಎಂದರು. ಇಂದು ಕುಂದಗೋಳದಲ್ಲಿ ನಡೆದ ದಿ.ಸಿಎಸ್ ಶಿವಳ್ಳಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮಗೆಳೆತನ ಬಗ್ಗೆ ತಿಳಿಸಿದರು .
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





