ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇರಳದ ಪ್ರವಾಹ ಪೀಡಿತ ಜನರಿಗೆ ಹೆಚ್ಚಿನ ನೆರವು ನೀಡುವ ಭರವಸೆ ನೀಡಿದ್ದಾರೆ. ಲಕ್ನೋದಲ್ಲಿನ ಸಮಾರಂಭವೊಂದರಲ್ಲಿ ಮಾತನಾಡಿದ ಯೋಗಿ,”ಈ ಕ್ಷಣದಲ್ಲಿ ಇಡೀ ದೇಶವು ಕೇರಳ ರಾಜ್ಯದೊಂದಿಗೆ ನಿಂತಿದೆ ನಾವು ತಿನ್ನುವ ಮತ್ತು ಕುಡಿಯುವ ನೀರನ್ನು ಒಳಗೊಂಡಂತೆ 7 ಮಿಲಿಯನ್ ಟನ್ ವಸ್ತುಗಳನ್ನೊಳಗೊಂಡ 25 ಟ್ರಕ್ಗಳನ್ನು ಕಳುಹಿಸುತ್ತೇವೆ ಅವು ವಾಯುಪಡೆಯಿಂದ ತಿರುವನಂತಪುರಕ್ಕೆ ತಲುಪಿಸಲಾಗುತ್ತದೆ.”ಎಂದು ಅವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರವಾಹದ ವಿಚಾರವಾಗಿ ತುರ್ತುಕ್ರಮ ಕೈಗೊಂಡ ಪ್ರಧಾನಿ …
Read More »ಶಿಥಿಲಗೊಂಡ ಶಾಲಾ ಕಟ್ಟಡಗಳು:ಶಿಕ್ಷಣ ಇಲಾಖೆ ವಿರುದ್ಧ ಲೋಕಾಯುಕ್ತರಿಂದ ಸುಮೊಟೊ ಪ್ರಕರಣ ದಾಖಲು..
ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಬೆಂಗಳೂರು:ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿನ ಎರಡು ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್ ಶೆಟ್ಟಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅರಕೆರೆ ಗ್ರಾಮದ ಶಾಲೆ ಮತ್ತು ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿನ ಮುನ್ಸಿಪಲ್ ಪ್ರೌಢಶಾಲೆಯ ಶಿಥಿಲಗೊಂಡ ಕಟ್ಟಡಗಳ ಬಗ್ಗೆ ಪತ್ರಿಕೆಯೊಂದರ ವರದಿ ಪ್ರಕಟಗೊಂಡ ನಂತರ ಲೋಕಾಯುಕ್ತರು ಈ …
Read More »ಗೋವಾ ಸರ್ಕಾರಿ ಅಕೌಂಟೆಂಟ್ ಪರೀಕ್ಷೆ ಬರೆದ ಎಲ್ಲಾ 8,000 ಅಭ್ಯರ್ಥಿಗಳೂ ಫೇಲ್..!
ಐದು ಗಂಟೆಗಳ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಇಂಗ್ಲೀಷ್ ಮತ್ತು ಲೆಕ್ಕಶಾಸ್ತ್ರದ ಕುರಿತು 100 ಅಂಕಗಳಿಗೆ ಪ್ರಶ್ನೆಗಳನ್ನು ನೀಡಲಾಗಿದೆ. ಪಣಜಿ: ಗೋವಾ ಸರ್ಕಾರ 80 ಅಕೌಂಟೆಂಟ್ ಹುದ್ದೆಗಳ ನೇಮಕಾತಿಗಾಗಿ ಈ ವರ್ಷ ಜನವರಿ 7 ರಂದು ನಡೆಸಿದ ಪರೀಕ್ಷೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 8,000 ಅಭ್ಯರ್ಥಿಗಳೂ ಅನುತ್ತೀರ್ಣರಾಗಿದ್ದಾರೆ ಎಂದು ಗೋವಾದ ಆಕೌಂಟ್ಸ್ ಡೈರೆಕ್ಟರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಗೋವಾ ಸರ್ಕಾರ 80 ಅಕೌಂಟೆಂಟ್ ಹುದ್ದೆಗಳ ನೇಮಕಾತಿ ಗಾಗಿ ಪರೀಕ್ಷೆ ನಡೆಸಿತ್ತು. ಪದವೀಧರರಿಗಾಗಿ ಈ ಪರೀಕ್ಷೆ …
Read More »ಸಂತ್ರಸ್ತರ ನೆರವಿಗೆ ಮುಂದಾದ ಮುಜರಾಯಿ ಇಲಾಖೆ
ಕೂಡಲೇ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಣ ಜಮಾ ಮಾಡುವಂತೆ ಮುಜರಾಯಿ ಇಲಾಖೆ ಸಚಿವ ರಾಜಶೇಖರ ಪಾಟೀಲ್ ದೇವಸ್ಥಾನದ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸತತ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿ ಹಾಗೂ ಸಂತ್ರಸ್ತ ಜನರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಂದ ಸಂತ್ರಸ್ತರ ನೆರವಿಗೆ ಒಟ್ಟು 120.30 ಕೋಟಿ ರೂ. ದೇಣಿಗೆ ನೀಡಲು ಮುಜರಾಯಿ …
Read More »ಕೇರಳ, ಕೊಡಗು ಪ್ರವಾಹ ಪರಿಹಾರಕ್ಕಾಗಿ ಎರಡು ತಿಂಗಳ ವೇತನ ನೀಡಿದ ಸಚಿವ ಜಿ.ಟಿ.ದೇವೇಗೌಡ.
ಭಾರೀ ಮಳೆಗೆ ಕರ್ನಾಟಕದ ಕೊಡಗು ಮತ್ತು ಕೇರಳ ರಾಜ್ಯ ಅಕ್ಷರಶಃ ತತ್ತರಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳ ನೆರವಿಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮುಂದಾಗಿದ್ದಾರೆ. ಬೆಂಗಳೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕರ್ನಾಟಕದ ಕೊಡಗು ಮತ್ತು ಕೇರಳ ರಾಜ್ಯ ಅಕ್ಷರಶಃ ತತ್ತರಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳ ನೆರವಿಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮುಂದಾಗಿದ್ದಾರೆ. ಪ್ರವಾಹದಿಂದಾಗಿ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡಗು ಮತ್ತು ಕೇರಳ ಜನತೆಗೆ ರಾಜ್ಯದ …
Read More »ರಾಜ್ಯಸಭಾ ಚುನಾವಣೆಯಲ್ಲಿ NOTA ಗೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್…
ನೋಟಾ ಆಯ್ಕೆ ನೇರ ಚುನಾವಣೆಯಲ್ಲಿ ಮತದಾನ ಮಾಡುವ ಮತದಾರರಿಗೆ ಸಂಬಂಧಿಸಿದ್ದೇ ಹೊರತು ರಾಜ್ಯಸಭೆಯಂಥ ಚುನಾವಣೆಗೆ ಇದು ಸೂಕ್ತವಲ್ಲ. ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ನೋಟಾ(None of the above) ಚಲಾವಣೆಗೆ ಅವಕಾಶವಿಲ್ಲ ಎಂಬ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ರಾಜ್ಯಸಭಾ ಚುನಾವಣೆಯ ಬ್ಯಾಲೆಟ್ ಪೇಪರ್ ನಲ್ಲಿ ನೋಟಾ ಆಯ್ಕೆಗಾಗಿ ಅನುಮತಿ ನೀಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟೀಸ್ ಎಎಂ ಖಾನ್ ವಿಲ್ಕರ್ ಮತ್ತು …
Read More »ಸರ್ಕಾರದ ವಿರುದ್ಧ ಬೀದಿಗಿಳಿದ ಪೌರ ಕಾರ್ಮಿಕರು..
ಧಾರವಾಡದಲ್ಲಿ ಪ್ರತಿಭಟನೆ ಗುತ್ತಿಗೆ ಪೌರ ಕಾರ್ಮಿಕರಿಗೆ ನೇರ ನೇಮಕಾತಿ, ನೇರ ವೇತನ ಪಾವತಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡದಿದೆ. ಇದರ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಪೌರಕಾರ್ಮಿಕರು ಧಾರವಾಡದಲ್ಲಿ ಪ್ರತಿಭಟನೆ ನಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಪೌರ ಕಾರ್ಮಿಕರು ಪ್ರತಿಭಟನೆ ತಮ್ಮ ಅಸಮಾಧಾನ ಹೊರಹಾಕಿದರು. ಅಲ್ಲದೆ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೇರ ನೇಮಕಾತಿ ಹಾಗೂ ವೇತನ ಪಾವತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸೂಕ್ತ ತನಿಖೆ …
Read More »ನೊಂದವರಿಗಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಸಹಾಯ..
ಕೂಡುಗು ಜಿಲ್ಲೆಯಲ್ಲಿ ಮಳೆಯಿಂದ ನರೆ ಹಾವಳಿಗೆ ತತ್ತರಿಸಿದ ಜನರಿಗೆ ನರೆವು ನೀಡುವ ನಿಟ್ಟಿನಲ್ಲಿ ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಕೂಡುಗು ನೆರೆ ಸಂತ್ರಸ್ತರಿಗೆ ಅವಶ್ಯವಿರುವ ವಸ್ತುಗಳನ್ನು ಸಂಗ್ರಹಿಸಿ ಪೂರೈಕೆ ಮಾಡಿದರು. ಸುಮಾರು 3ಘಂಟೆಗಳ ಕಾಲ ನಗರದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ವಸ್ತುಗಳನ್ನು ಸಂಗ್ರಹಿಸಿ, ಧಾರವಾಡದ ಜಿಲ್ಲಾಧಿಕಾರಿಗಳ ಮೂಲಕ ಕೊಡಗು ಜಿಲ್ಲೆಗೆ ತಲುಪಿಸಲು ಮುಂದಾಗಿದ್ದಾರೆ. ಹಲವಾರು ಜನರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಬಟ್ಟೆ, ಆಗಿರಬಹುದು ಊಟ …
Read More »ಕೇರಳ ಪ್ರವಾಹ: ಮಹಿಳೆಯರು ಮತ್ತು ಮಗುವಿನ ಜೀವ ಛಾವಣಿ ಮೇಲೆ ಸಿಲುಕಿದ್ದಾಗ…
ಯಾರಾದರೂ ಬಂದು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವರೆನೋ ಎಂಬ ಭರವಸೆಯೋತ್ತು ನೋಡುತ್ತಿರುವ ಕಣ್ಣುಗಳು… ನವದೆಹಲಿ: ಕೇರಳದಲ್ಲಿ ವರುಣನ ಅಬ್ಬರ ಇಳಿದಿದೆ. ಪ್ರವಾಹವೂ ಇಳಿಮುಖವಾಗಿದೆ. ಆದರೆ ಜನರ ಜೀವನ ಮಾತ್ರ ಇನ್ನೂ ತಹಬದಿಗೆ ಬಂದಿಲ್ಲ. ತಮ್ಮ ಮನೆ ಮಠವನ್ನು ಕಳೆದುಕೊಂಡ ಜನರ ಸ್ಥಿತಿ ಚಿಂತಾಜನಕ. ಕೆರೆಗಳಂತಾದ ಮನೆಗಳು, ಮನೆಯ ಮಹಡಿ ಮೇಲೇರಿ ಯಾರಾದರೂ ಬಂದು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವರೆನೋ ಎಂಬ ಭರವಸೆಯೋತ್ತು ನೋಡುತ್ತಿರುವ ಕಣ್ಣುಗಳು… ಎಲ್ಲವನ್ನೂ ನೆನೆದರೆ ಎದೆ ಒಂದು …
Read More »ಹೊಡೆದಳು ನೈಂಟಿ, ಆಮೇಲೆ ಗಂಡಸರ ಜತೆಗೇ ಜಟಾಪಟಿ..
ಕಂಠ ಪುರ್ತಿ ಕುಡಿದ ಮಹಿಳೆಯೊಬ್ಬರು ಬಸ್ ನಿಲ್ದಾಣದಲ್ಲಿ ರಂಪಾಟ ನಡೆಸಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಹಳೇ ಬಸ್ ನಿಲ್ದಾಣದಲ್ಲಿನ ಪ್ರಯಾಣಿಕರ ಜೊತೆ ಮಹಿಳೆ ಅಸಭ್ಯವಾಗಿ ವರ್ತಿಸಿದ್ದಾಳೆ. ಮದ್ಯಪಾನ ಮಾಡಿಕೊಂಡು ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಮಹಿಳೆ ಬಸ್ ನಿಲ್ದಾಣದಲ್ಲಿನ ಸಿಕ್ಕ ಸಿಕ್ಕವರನ್ನು ಥಳಿಸಿ, ಅವಾಚ್ಯವಾಗಿ ನಿಂದಿಸಿದ್ದಾಳೆ. ನಾನು ಸೆಟ್ಲಮೆಂಟ್ ನಿವಾಸಿ. ಯಾರಿಗೂ ಹೆದರೋಲ್ಲ ಅಂತಾ ಅವಾಜ್ ಹಾಕಿದ್ದಾಳೆ. ಮಹಿಳೆ ವರ್ತನೆಯಿಂದ ಬೆಸತ್ತ ಪ್ರಯಾಣಿಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಆಗಮಿಸುತ್ತಿದಂತೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





